ಖ್ಯಾತ ತಮಿಳು ನಟ ಆತ್ಮಹತ್ಯೆಗೆ ಶರಣು

ಶಿವಕಾರ್ತಿಕೇಯನ್ ಅಭಿನಯದ "ಮರೀನಾ" ಚಿತ್ರದಲ್ಲಿ ಅಭಿನಯಿಸಿ ಹೆಸರಾಗಿದ್ದ  ತಮಿಳು ನಟ ಥೆನ್ನರಸು  ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Published: 29th September 2020 07:02 PM  |   Last Updated: 29th September 2020 07:02 PM   |  A+A-


ಥೆನ್ನರಸು

Posted By : Raghavendra Adiga
Source : Online Desk

ಶಿವಕಾರ್ತಿಕೇಯನ್ ಅಭಿನಯದ "ಮರೀನಾ" ಚಿತ್ರದಲ್ಲಿ ಅಭಿನಯಿಸಿ ಹೆಸರಾಗಿದ್ದ  ತಮಿಳು ನಟ ಥೆನ್ನರಸು  ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೂರು ವರ್ಷಗಳ ಹಿಂದೆ  ಗೆಳತಿಯೊಂದಿಗೆ ವಿವಾಹವಾಗಿದ್ದ ಥೆನ್ನರಸು ದಂಪತಿಗೆ ಎರಡು ವರ್ಷದ ಮಗು ಇದೆ ಎಂದು ಆಂಗ್ಲ ಮಾದ್ಯಮವೊಂದು ವರದಿ ಮಾಡಿದೆ.  ಈ ನಡುವೆ . ಮದ್ಯದ ಚಟಕ್ಕೆ ಬಿದ್ದಿದ್ದ ನಟ ಪತ್ನಿಯೊಂದಿಗೆ ಆಗಾಗ ಜಗಳಕ್ಕೆ ಇಳಿಯುತ್ತಿದ್ದ, ಆತನ ಆತ್ಮಹತ್ಯೆಯ ಹಿಂದೆ ಇದೇ ಕೌಟುಂಬಿಕ ಕಲಹದ ಕಾರಣವಿದೆ ಎಂದು ವರದಿ ಹೇಳಿದೆ.

ಪಾಂಡಿರಾಜ್ ನಿರ್ದೇಶನದ "ಮರೀನಾ" ಚಿತ್ರದಲ್ಲಿ ಥೆನ್ನರಸು  ಶಿವಕಾರ್ತಿಕೇಯನ್ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ತಮಿಳು ಚಿತ್ರಗಳಲ್ಲಿ ನಾಯಕನ ಗೆಳೆಯನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ =ನಿಗೆ ಇದ್ಯ್ವರೆಗೆ ವೃತ್ತಿಬದುಕಿನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಎಂಬಂತಹುದು ಸಿಕ್ಕಿರಲಿಲ್ಲ.

ಇದೀಗ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಘಟನೆಯ ಹಿಂದಿನ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp