ಶಂಭೋ ಶಿವಶಂಕರ ಸಿನಿಮಾಗೆ ಸೋನಾಲ್ ಮಾಂಟೆರೋ ನಾಯಕಿ
ಸೋನಾಲ್ ಮೊಂಟೆರೋ ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಭಾನುವಾರ ಮುಹೂರ್ತ ಕೂಡಾ ನಡೆದಿದೆ. ಅಂದ ಹಾಗೆ, ಚಿತ್ರದ ಹೆಸರು “ಶಂಭೋ ಶಿವ ಶಂಕರ’. ಇದು ಸಂಪೂರ್ಣ ಹೊಸಬರ ತಂಡ. ಈ ಚಿತ್ರವನ್ನು ಕೋನಮಾನಹಳ್ಳಿ ಶಂಕರ್ ನಿರ್ದೇಶಿಸುತ್ತಿದ್ದಾರೆ.
Published: 30th September 2020 12:29 PM | Last Updated: 30th September 2020 12:29 PM | A+A A-

ಶಂಭೋ ಶಿವಶಂಕರ ಸಿನಿಮಾ ಸ್ಟಿಲ್
ಸೋನಾಲ್ ಮೊಂಟೆರೋ ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಭಾನುವಾರ ಮುಹೂರ್ತ ಕೂಡಾ ನಡೆದಿದೆ. ಅಂದ ಹಾಗೆ, ಚಿತ್ರದ ಹೆಸರು “ಶಂಭೋ ಶಿವ ಶಂಕರ’. ಇದು ಸಂಪೂರ್ಣ ಹೊಸಬರ ತಂಡ. ಈ ಚಿತ್ರವನ್ನು ಕೋನಮಾನಹಳ್ಳಿ ಶಂಕರ್ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಮೂವರು ನಾಯಕರಿದ್ದು, ಅಭಯ್ ಪುನೀತ್, ರಕ್ಷಕ್ ಹಾಗೂ ಶಂಕರನಾಗಿ ರೋಹಿತ್ ನಟಿಸುತ್ತಿದ್ದಾರೆ. ಅಂದಹಾಗೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ಸಾಗುತ್ತದೆಯಂತೆ. ಮೂವರು ಹೀರೋಗಳಿಗೆ ಸೋನಾಲ್ ನಾಯಕಿಯಾಗಿ ನಟಿಸಲಿದ್ದಾರೆ.
ಸೋನಾಲ್ ಈಗಾಗಲೇಕನ್ನಡದಲ್ಲಿ “ಬುದ್ಧಿವಂತ-2′ ಹಾಗೂ “ಬನಾರಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದರ್ಶನ್ ನಾಯಕರಾಗಿರುವ “ರಾಬರ್ಟ್’ ಸಿನಿಮಾದಲ್ಲೂ ಸೋನಾಲ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಸೋನಾಲ್ ಒಪ್ಪಿಕೊಂಡ ಮೊದಲ ಕನ್ನಡ ಸಿನಿಮಾವಿದು. ಕೋವಿಡ್ ಆತಂಕದಿಂದಕಳೆದ ಮಾರ್ಚ್ ತಿಂಗಳಿನಿಂದ,
ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಸೋನಾಲ್ ಮಾಂತೆರೋ ಈಗ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದಾರೆ.