ನಾನು ಅತ್ಯಂತ 'ವಿನಮ್ರ', ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಡಿಯಪ್ಪ!

ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

Published: 01st April 2021 03:05 PM  |   Last Updated: 01st April 2021 03:12 PM   |  A+A-


Modi-Rajni

ಮೋದಿ-ರಜನಿ

Posted By : Vishwanath S
Source : Online Desk

ನವದೆಹಲಿ: ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

‘ರಜನೀಕಾಂತ್ ಅವರು ವೈವಿಧ್ಯಮ ಪಾತ್ರಗಳು ಮತ್ತು ವ್ಯಕ್ತಿತ್ವದಿಂದ ಎಲ್ಲ ವಯೋಮಾನದವರಲ್ಲೂ ಜನಪ್ರಿಯರಾಗಿದ್ದಾರೆ. ತಲೈವಾ ರಜನೀಕಾಂತ್ ಅವರಿಗೆ ಚಲನಚಿತ್ರರಂಗದ ಅತ್ಯುನ್ನತ ಪುರಸ್ಕಾರ ದೊರೆತಿರುವುದಕ್ಕೆ ಸಂತಸವಾಗುತ್ತಿದೆ.’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಇದಕ್ಕೆ ರಜನಿ ಕಾಂತ್ ಸಹ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅತ್ಯಂತ ಪ್ರತಿಷ್ಠಿತ #ದಾದಾ ಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಿದ ಪ್ರೀತಿಯ ಶ್ರೀ ನರೇಂದ್ರ ಮೋದಿಜಿ ಅವರಿಗೆ ಅಪಾರ ವಿನಮ್ರ ಮತ್ತು ಗೌರವ. ನಿಮಗೆ ಮತ್ತು ಭಾರತದ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ತನಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದಕ್ಕಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ತೀರ್ಪುಗಾರರಿಗೆ ರಜನಿಕಾಂತ್ ಧನ್ಯವಾದ ಅರ್ಪಿಸಿದರು. "ಪ್ರತಿಷ್ಠಿತ # ದಾದಾಸಾಹೇಬ್ಫಾಲ್ಕೆಅವಾರ್ಡ್ ಅನ್ನು ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಪ್ರಾಮಾಣಿಕವಾಗಿ ಅರ್ಪಿಸುತ್ತೇನೆ. ಭಾರತದ ಸರ್ಕಾರ, ಗೌರವಾನ್ವಿತ ಮತ್ತು ಪ್ರೀತಿಯ ನರೇಂದ್ರ ಮೋದಿಜೀ, ಪ್ರಕಾಶ್ ಜಾವ್ದೇಕರ್ ಜಿ ಮತ್ತು ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಧನ್ಯವಾದಗಳು. ಸರ್ವಶಕ್ತ ಎಂದು ಟ್ವೀಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp