ಸಾಹಸಸಿಂಹ ವಿಷ್ಣುವರ್ಧನ್ ಪುತ್ರಿಗೆ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಪುತ್ರಿ, ನಟ ಅನಿರುದ್ಧ್ ಪತ್ನಿ ಕೀರ್ತಿ ವರ್ಧನ್ ಅವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿ ಲಭಿಸಿದೆ.

Published: 01st April 2021 06:41 PM  |   Last Updated: 01st April 2021 06:41 PM   |  A+A-


keerthi vishnuvardhan-Anirudh

ಕೀರ್ತಿ ವರ್ಧನ್-ಅನಿರುದ್ಧ್

Posted By : Vishwanath S
Source : UNI

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಪುತ್ರಿ, ನಟ ಅನಿರುದ್ಧ್ ಪತ್ನಿ ಕೀರ್ತಿ ವರ್ಧನ್ ಅವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿ ಲಭಿಸಿದೆ.

ವಸ್ತ್ರ ವಿನ್ಯಾಸಕಿಯಾಗಿ ಕೀರ್ತಿ ವರ್ಧನ್ ಮಾಡಿದ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರೀಯ ಪತ್ರಿಕಾ ಸಮಿತಿ -ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಶಸ್ತಿಯನ್ನು ನೀಡಿ ಕೀರ್ತಿ ವರ್ಧನ್ ಸಾಧನೆಯನ್ನು ಗೌರವಿಸಿದೆ.

ಸಾಹಸಸಿಂಹ ವಿಷ್ಣುವರ್ಧನ್ ಅವರಿಂದ ಹಿಡಿದು ಈಗ ಪತಿ ಅನಿರುದ್ಧ್ ಅವರಿಗೂ ಕೀರ್ತಿ ವರ್ಧನ್ ವಸ್ತ್ರಾಲಂಕಾರ ಮಾಡುತ್ತಲೇ ಬಂದಿದ್ದಾರೆ. 'ನಾನು ಸುಂದರವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ನನ್ನ ಪತ್ನಿಯೇ ಕಾರಣ. ಕೀರ್ತಿ ಜೀ, ಇಷ್ಟು ವರ್ಷಗಳಿಂದಲೂ ನನಗೆ, ಇದಕ್ಕೂ ಮೊದಲು ಅಪ್ಪಾವ್ರಿಗೂ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.

ನನ್ನ ಸಾಧನೆಯಲ್ಲಿ ಅವರ ಕೊಡುಗೆ ಅಪಾರ' ಎಂದು ನಟ ಅನಿರುದ್ಧ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದರು. ಈ ಪ್ರಶಸ್ತಿ ಕೀರ್ತಿಯವರ ಇಷ್ಟು ವರ್ಷಗಳ ಶ್ರಮಕ್ಕೆ ಸಿಕ್ಕ ಫಲ ಎನ್ನಬಹುದು.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp