'ಯುವರತ್ನ' ಇಂದಿನ ಯುವ ಜನಾಂಗಕ್ಕೆ ಆಸಕ್ತಿ ಮೂಡಿಸುತ್ತದೆ: ಪುನೀತ್ ರಾಜ್‌ಕುಮಾರ್

ಯುವರತ್ನದ ಮೊದಲ ಇಂಪ್ರೆಶನ್ ಕುರಿತಂತೆ ಮಾತನಾಡಿದ ಪುನೀತ್ ರಾಜ್ ಕುಮಾರ್, ಚಿತ್ರದಲ್ಲಿ ನಾನೊಬ್ಬ ನಟನಾಗಿದ್ದು, ಇದು ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗಿದೆ ಎಂಬುದನ್ನು ಕೇಳಲು ಬಯಸುತ್ತೇನೆ. ಇದೊಂದು ಸಾಮಾಜಿಕ ಸಂದೇಶವಿರುವ ಚಿತ್ರವಾಗಿರುವುದಾಗಿ ತಿಳಿಸಿದ್ದಾರೆ.

Published: 01st April 2021 12:48 PM  |   Last Updated: 01st April 2021 01:13 PM   |  A+A-


PuneethRajkumar1

ಪುನೀತ್ ರಾಜ್ ಕುಮಾರ್

Posted By : Nagaraja AB
Source : The New Indian Express

ಬೆಂಗಳೂರು: ಪುನೀತ್ ರಾಜ್ ಕುಮಾರ್ ತೆರೆ ಮೇಲೆ ಕಾಣುವ ಪಾತ್ರಗಳಿಗೆ ಅವರ ವಯಸ್ಸು ಅಡ್ಡಿಯಾಗದು. ಯುವರತ್ನ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ಚಿತ್ರೋದ್ಯಮದಲ್ಲಿ 45 ವರ್ಷ ಪೂರ್ಣಗೊಳಿಸಿದ್ದಾರೆ. ಆದರೆ, ಪವರ್ ಸ್ಟಾರ್ ಗೆ ಸಿನಿಮಾ ಕೆರಿಯರ್ ಶುರುವಾದದ್ದು 2001ರಿಂದ.  ಯುವರತ್ನದಲ್ಲಿ 'ಪವರ್ ' ಫೀಲ್ ಅನುಭವವನ್ನು ಅಭಿಮಾನಿಗಳು ಪಡೆಯಲಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿ, ಹೊಂಬಾಳೆ ಪ್ರೊಡಕ್ಷನ್ ನಿರ್ಮಿಸಿರುವ ಯುವರತ್ನ, ಕಮರ್ಷಿಯಲ್ ಅಂಶವಿರುವ ವಿಷಯಾಧಾರಿತ ಚಿತ್ರವಾಗಿದೆ. 

ಯುವರತ್ನದ ಮೊದಲ ಇಂಪ್ರೆಶನ್ ಕುರಿತಂತೆ ಮಾತನಾಡಿದ ಪುನೀತ್ ರಾಜ್ ಕುಮಾರ್, ಚಿತ್ರದಲ್ಲಿ ನಾನೊಬ್ಬ ನಟನಾಗಿದ್ದು, ಇದು ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗಿದೆ ಎಂಬುದನ್ನು ಕೇಳಲು ಬಯಸುತ್ತೇನೆ. ಇದೊಂದು ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು, 2 ಗಂಟೆ 40 ನಿಮಿಷ ಉತ್ತಮ ಮನರಂಜನೆ ನೀಡಲಿದೆ. ಇದರಲ್ಲಿ ಸಾಕಷ್ಟು ಹಾಸ್ಯವಿದ್ದು, ಇಂದಿನ ಯುವ ಜನಾಂಗಕ್ಕೆ ಆಸಕ್ತಿಯನ್ನುಂಟುಮಾಡುತ್ತದೆ ಎಂದರು.

ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಆದಾಗ್ಯೂ, ಪುನೀತ್ ವಿಚಾರಣಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಟ್ರೈಲರ್ ಸಾಕಷ್ಟು ವಿವರ ನೀಡಿದೆ. ಜನರು ಸಿನಿಮಾ ವೀಕ್ಷಿಸಿದ ನಂತರ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಅವರು ತಿಳಿಸಿದರು.

ಪುನೀತ್ ರಾಜ್ ಕುಮಾರ್

ಬೇರೆ ಯುಗದಲ್ಲಿ ಬಾಲನಟನಾಗಿ ಅಭಿನಯಿಸಿದ್ದೇನೆ. ಆ  ಸಂದರ್ಭದಲ್ಲಿ ವೃತ್ತಿ ಆಗಿ ಎಂದಿಗೂ ಪರಿಗಣಿಸಿರಲಿಲ್ಲ. ಪೋಷಕರೊಂದಿಗೆ ವಿವಿಧ ಚಿತ್ರಗಳ ಸೆಟ್ ನಲ್ಲಿದ್ದಾಗ ಅವರಿಂದ ಅನೇಕ ವಿಷಯಗಳನ್ನು ಕಲಿತಿರುವುದಾಗಿ ತಿಳಿಸಿದ ಪುನೀತ್, ಸಿನಿಮಾ ಕೆರಿಯರ್ ಆರಂಭಕ್ಕೂ ಮುನ್ನ ಮೂರು ವರ್ಷ ಕಂಪ್ಯೂಟರ್ ಕೋರ್ಸ್ ಕಲಿತಿದ್ದರಂತೆ. ಗ್ರಾನೈಟ್ ವ್ಯವಹಾರದಲ್ಲಿ ಕೆರಿಯರ್ ಕಂಡುಕೊಳ್ಳಲು ಯೋಚಿಸಿದ್ದಾರಂತೆ. ಹೇಗೋ ಅದೃಷ್ಟ ಸಿನಿಮಾ ನಿರ್ಮಾಣದತ್ತ ಮತ್ತೆ ಕರೆದುಕೊಂಡು ಬಂದಿತು. ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ್ದು, ಅಮ್ಮ ಪಾರ್ವತಮ್ಮ ಅವರೊಂದಿಗೆ ಕಚೇರಿಯಲ್ಲಿ ವಿತರಕನಾಗಿ ಕೆಲಸ ಮಾಡಿದೆ. 2000 ಇಸವಿಯವರೆಗೂ ಪ್ಯಾಶನ್ ಆಗಿ ಪರಿಗಣಿಸಿರಲಿಲ್ಲ ಎಂದು ಅವರು ಹೇಳಿದರು. 

ಸಂತೋಷ್ ಆನಂದ್ ರಾಮ್ ಮತ್ತು ಹೊಂಬಾಳೆ ಫಿಲ್ಮಂಸ್ ನೊಂದಿಗೆ ಕೆಲಸ ಮಾಡಲು ಯಾವಾಗಲೂ ಸಂತೋಷವಾಗುತ್ತದೆ. ಈ ಚಿತ್ರವನ್ನು ನೋಡಲು ಹೆಚ್ಚಿನ ಪ್ರೇಕ್ಷಕರು ಸಿಗುತ್ತಾರೆ ಎಂದು ಹೇಳುವ ಪುನೀತ್,  ಪ್ರೇಕ್ಷಕರಿಗಾಗಿ ಸಿನಿಮಾ ಮಾಡಲಾಗಿದೆ. ಇದೊಂದು ಒಳ್ಳೆಯ ಸಿನಿಮಾವಾಗಿದೆ. ಜನರ ಪ್ರತಿಕ್ರಿಯೆ ಇಂದು ಸಿಗಲಿದೆ ಎಂದು ಹೇಳಿದ್ದಾರೆ. 

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಪುನೀತ್ ಮುಂದಿನ ಐದು ವರ್ಷಗಳಲ್ಲಿ 12 ಸಿನಿಮಾಗಳಲ್ಲಿ ಅಭಿನಯಿಸುವ ಉದ್ದೇಶ ಹೊಂದಿದ್ದಾರೆ. ವಿವಿಧ ನಿರ್ದೇಶಕರು, ನಿರ್ಮಾಪಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಇದೀಗ ಯುವರತ್ನದ ನಂತರ ಜೇಮ್ಸ್ ಚಿತ್ರೀಕರಣ ಆರಂಭವಾಗಲಿದೆ.ಅದಾದ ನಂತರ ಹೊಂಬಾಳೆ ಫಿಲ್ಮಂಸ್ ನಲ್ಲೇ ಮತ್ತೊಂದು ಚಿತ್ರ ಮಾಡಲಿದ್ದಾರೆ. ತದನಂತರ ದಿನಕರ್ ತೂಗುದೀಪ್ ಹಾಗೂ ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣ ನಿರ್ದೇಶನದ ಚಿತ್ರವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp