ನೋ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ ಈಗ 'ಬರ್ಕ್ಲಿ' ಚಿತ್ರದ ನಾಯಕಿ!

ಕೆಲವು ವರ್ಷಗಳ ಹಿಂದೆ ಚಿತ್ರ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ-ನೋ ಸ್ಮೋಕಿಂಗ್ ಕುರಿತಾಗಿ ಬರುತ್ತಿದ್ದ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದ ಬಾಲನಟಿ ಸಿಮ್ರಾನ್ ನಾಟೇಕರ್ ಬಹುಶಃ ಎಲ್ಲರಿಗೂ ನೆನಪಿರಬಹುದು.

Published: 02nd April 2021 03:19 PM  |   Last Updated: 02nd April 2021 04:03 PM   |  A+A-


ಸಿಮ್ರಾನ್ ನಾಟೇಕರ್

Posted By : Raghavendra Adiga
Source : UNI

ಕೆಲವು ವರ್ಷಗಳ ಹಿಂದೆ ಚಿತ್ರ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ-ನೋ ಸ್ಮೋಕಿಂಗ್ ಕುರಿತಾಗಿ ಬರುತ್ತಿದ್ದ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದ ಬಾಲನಟಿ ಸಿಮ್ರಾನ್ ನಾಟೇಕರ್ ಬಹುಶಃ ಎಲ್ಲರಿಗೂ ನೆನಪಿರಬಹುದು.

ಕೇಂದ್ರ ಸರ್ಕಾರದಿಂದ ಪ್ರಕಟವಾಗುತ್ತಿದ್ದ‌ ಈ ಜಾಹಿರಾತಿನಲ್ಲಿ ಅಭಿನಯಿಸಿ, ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಚಿರಪರಿತರಾಗಿದ್ದರು ಸಿಮ್ರಾನ್ ನಾಟೇಕರ್.

ಮೂಲತಃ ಮುಂಬೈನವರಾದ ಸಿಮ್ರಾನ್ ಸಾಕಷ್ಟು ಜಾಹಿರಾತುಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಬರ್ಕ್ಲಿ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಗಣಪ, ಕರಿಯ 2 ಚಿತ್ರಗಳ ಖ್ಯಾತಿಯ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕನಾಗಿದ್ದು ಚಿತ್ರದ ಶೂಟಿಂಗ್ ಇದ್ದಾಗಲೇ ಮುಗಿದಿದೆ. ಅಲ್ಲದೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ನೀಡಿದ್ದರೆ 'ಬಹುದ್ದೂರ್' ಚೇತನ್ ಹಾಗೂ ಅಭಿ ಸಾಹಿತ್ಯಇದಕ್ಕಿದೆ. ಬಹುಭಾಷಾ ನಟ ಚರಣ್ ರಾಜ್ ಸೇರಿ ಅನೇಕ ಹೆಸರಾಂತ ನಟ ನಟಿಯರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp