ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ಉಪೇಂದ್ರ ತಲೆಗೆ ಗಾಯ

ಬಹು ನಿರೀಕ್ಷಿತ ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ವರದಿಯಾಗಿದೆ.

Published: 03rd April 2021 10:21 AM  |   Last Updated: 03rd April 2021 01:05 PM   |  A+A-


Kabja shooting

ಕಬ್ಜ ಸಿನಿಮಾ ಶೂಟಿಂಗ್

Posted By : Shilpa D
Source : Online Desk

ಬೆಂಗಳೂರು: ಬಹು ನಿರೀಕ್ಷಿತ ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಕಬ್ಜ ಶೂಟಿಂಗ್ ವೇಳೆ ಉಪೇಂದ್ರಗೆ ಕಬ್ಬಿಣದ ರಾಡ್ ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು,  ಈ ವೇಳೆ ಫೈಟರ್ ಹಿಂದಿನಿಂದ ಬೀಸಿದ ಚೂಪಾದ ರಾಡ್ ನಿಂದ ತಪ್ಪಿಸಿಕೊಳ್ಳುವಾಗ ಮಿಸ್ ಆಗಿ ಅದು ಉಪೇಂದ್ರ ಅವರ ತಲೆಗೆ ತಾಗಿದೆ.

ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ, ಕೆಲಕಾಲ ಸುಧಾರಿಸಿಕೊಂಡ ನಂತರ ಉಪೇಂದ್ರ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾದರು ಎಂದು ವರದಿಯಾಗಿದೆ.

ಆರ್.ಚಂದ್ರು ನಿರ್ದೇಶನದ ಕಬ್ಜ ಶೂಟಿಂಗ್ ನಿನ್ನೆ ರಾತ್ರಿ ಮಿನರ್ವ ಮಿಲ್ ನಲ್ಲಿ ನಡಯುವಾಗ ಈ ಅವಘಡ ಸಂಭವಿಸಿದೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp