ಶ್ರೇಯಸ್ ಮಂಜು ನಟನೆಯ ಮಾಸ್ ಎಂಟರ್'ಟೈನ್ಮೆಂಟ್ ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್!
ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
Published: 03rd April 2021 12:21 PM | Last Updated: 03rd April 2021 01:11 PM | A+A A-

ಶ್ರೇಯಸ್ ಮಂಜು
ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ನಟನೆಯ ಚಿತ್ರವೊಂದನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯರ್ ಮಂಜು. ವಿಕೆ. ಪ್ರಕಾಶ್ ನಿರ್ದೇಶನದ ವಿಷ್ಣುಪ್ರಿಯ ಚಿತ್ರ ಶ್ರೇಯಸ್ ಅವರ ಎರಡನೇ ಚಿತ್ರವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
ಪೊಗರು ಚಿತ್ರದ ಬಳಿಕ ನಂದ ಕಿಶೋರ್ ಯಾವುದೇ ಚಿತ್ರಗಳನ್ನೂ ಮಾಡಿರಲಿಲ್ಲ. ಇದೀಗ ಧ್ರುವ ಸರ್ಜಾ ನಟನೆಯ ದುಬಾರಿ ಚಿತ್ರತಂಡದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಶಿವರಾಜ್ ಕುಮಾರ್ ನಟಿಸುತ್ತಿರುವ ಚಿತ್ರತಂಡದೊಂದಿಗೂ ನಂದ ಕಿಶೋರ್ ಕೆಲಸ ಮಾಡಲಿದ್ದಾರೆಂದು ತಿಳಿದುಬಂದಿದೆ.