ಖ್ಯಾತ ಮಲಯಾಳಂ ನಟ, ಬರಹಗಾರ ಪಿ ಬಾಲಚಂದ್ರನ್ ನಿಧನ

ಮಲಯಾಳಂನ ಖ್ಯಾತ ನಟ ಹಾಗೂ ಬರಹಗಾರ ಪಿ ಬಾಲಚಂದ್ರನ್ ಅವರು ನಿಧನರಾಗಿದ್ದು, ಅವರಿಗೆ 69 ವರ್ಷ ವಯಸ್ಸಾಗಿತ್ತು.

Published: 05th April 2021 11:30 AM  |   Last Updated: 05th April 2021 11:30 AM   |  A+A-


P Balachandran

ಪಿ ಬಾಲಚಂದ್ರನ್

Posted By : Srinivasamurthy VN
Source : The New Indian Express

ಕೊಚ್ಚಿ: ಮಲಯಾಳಂನ ಖ್ಯಾತ ನಟ ಹಾಗೂ ಬರಹಗಾರ ಪಿ ಬಾಲಚಂದ್ರನ್ ಅವರು ನಿಧನರಾಗಿದ್ದು, ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕೇರಳದ ವೈಕ್ಕೋಮ್ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಪಿ ಬಾಲಚಂದ್ರನ್ ಅವರು ಕಳೆದ 8 ತಿಂಗಳುಗಳಿಂದ ಆನೋರೋಗ್ಯಕ್ಕೆ ತುತ್ತಾಗಿದ್ದರು. ಮೆದುಳು ಜ್ವರಕ್ಕೆ ಅವರು ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ 5 ಗಂಟೆ ವೇಳೆಗೆ ನಿಧನರಾದರು. ಇಂದು ಸಂಜೆ ಅವರ ವೈಕ್ಕೋಮ್ ನಿವಾಸದ ಆವರಣದಲ್ಲಿಯೇ ಪಿ.ಬಾಲಚಂದ್ರನ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಲಯಾಳಂನ ಪಾವಂ ಉಸ್ಮಾನ್ ನಾಟಕದ ಮೂಲಕ ಖ್ಯಾತಿ ಗಳಿಸಿದ್ದ ಪಿ ಬಾಲಚಂದ್ರನ್ ಅವರು ಇದೇ ಚಿತ್ರದ ಸಾಹಿತ್ಯಕ್ಕಾಗಿ 1989ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ವೃತ್ತಿಪರ ನಾಟಕ  ಪ್ರಶಸ್ತಿ ಪಡೆದಿದ್ದರು.

ಪದ್ಮನಾಭ ಪಿಳ್ಳೈ ಮತ್ತು ಸರಸ್ವತಿ ಭಾಯ್ ದಂಪತಿಗೆ ಜನಿಸಿದ ಬಾಲಚಂದ್ರನ್ ಅವರು ಉಲ್ಲಾಡಕ್ಕಂ, ಪವಿತ್ರಂ, ಅಗ್ನಿದೇವನ್, ಪುನರಧಿವಾಸಂ ಮತ್ತು ಕಮ್ಮಟ್ಟಿ ಪಾಡಂ ಸೇರಿದಂತೆ ಹಲವು ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಅವರು ತಿರುವನಂತಪುರ ಲಾಡ್ಜ್‌ ಚಿತ್ರದಲ್ಲಿ ನಟಿಸಿದ್ದಾರೆ.

ಮೃತರು ಪತ್ನಿ ಶ್ರೀಲತಾ ಮತ್ತು ಮಕ್ಕಳಾದ ಶ್ರೀಕಾಂತ್ ಮತ್ತು ಪಾರ್ವತಿ ಅವರನ್ನು ಅಗಲಿದ್ದಾರೆ,

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp