ಪರಮ್‌ವಾ ಸ್ಟುಡಿಯೋ ಮುಂದಿನ ಚಿತ್ರದ ಶೀರ್ಷಿಕೆ 'ಸಕುಟುಂಬ ಸಮೇತಾ'

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಪರಮ್ವಾ ಸ್ಟುಡಿಯೋಸ್‌ನ ಮುಂದಿನ ಚಿತ್ರ ಸಕುಟುಂಬ ಸಮೇತಾ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿದೆ.

Published: 05th April 2021 12:41 PM  |   Last Updated: 05th April 2021 12:44 PM   |  A+A-


Movie Poster

ಚಿತ್ರದ ಪೋಸ್ಟರ್

Posted By : Vishwanath S
Source : The New Indian Express

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಪರಮ್ವಾ ಸ್ಟುಡಿಯೋಸ್‌ನ ಮುಂದಿನ ಚಿತ್ರ ಸಕುಟುಂಬ ಸಮೇತಾ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿದೆ. 

ರಾಹುಲ್ ಪಿಕೆ ನಿರ್ದೇಶನದ ಚಿತ್ರಕ್ಕೆ ವಿಶೇಷವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬಳಸಲಾಗುವ ಸಕುಟುಂಬ ಸಮೇತಾ ಪದವನ್ನೇ ಈ ಚಿತ್ರದ ಶೀರ್ಷಿಕೆಯಾಗಿದೆ. ಇದು ನಿಶ್ಚಿತಾರ್ಥದ ಸುತ್ತ ಸುತ್ತುವ ಕುಟುಂಬ ನಾಟಕ ಹಾಸ್ಯವಾಗಿದೆ" ಎಂದು ಪೂಜಾ ಸುಧೀರ್ ಅವರೊಂದಿಗೆ ಕಥೆಯನ್ನು ಬರೆದಿರುವ ನಿರ್ದೇಶಕ ರಾಹುಲ್ ಹೇಳುತ್ತಾರೆ.

ಈ ಚಿತ್ರದಲ್ಲಿ ಭರತ್ ಸಿಬಿ ಮತ್ತು ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಲೆ, ಪುಷ್ಪಾ ಬೆಳವಾಡಿ, ರೇಖಾ ಕುಡ್ಲಿಗಿ ಜಯಲಕ್ಷ್ಮಿ ಪಾಟೀಲ್ ಅಭಿನಯಿಸಿದ್ದಾರೆ. ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಿದ್ದು ಶೂಟಿಂಗ್ ಪೂರ್ಣಗೊಂಡಿದೆ. ಈಗ, ನಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದೇವೆ" ಎಂದು ರಾಹುಲ್ ಹೇಳಿದ್ದಾರೆ. 

ಚಿತ್ರವನ್ನು ಒಟಿಟಿ ಬಿಡುಗಡೆಯನ್ನು ಮಾಡಬೇಕಾ ಅಥವಾ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಬೇಕಾ ಎಂದು ನಿರ್ಧರಿಸಿ, ಆನಂತರ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದರು. 

ದಿ ಸೆವೆನ್ ಆಡ್ಸ್ ತಂಡದಲ್ಲಿ ಒಬ್ಬರಾಗಿರುವ ರಾಹುಲ್, ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ, ರಿಕಿ ಮತ್ತು ಕಿರಿಕ್ ಪಾರ್ಟಿ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp