'ನಿಜವಾದ ಯೋಧನಂತೆ ಕನಸುಗಳ ಬೆನ್ನತ್ತಿ ಹೋಗುತ್ತಿ, ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ': ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಶುಭಾಶಯ!
ಸ್ಯಾಂಡಲ್ ವುಡ್ ನಲ್ಲಿ 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದಿಂದ ನಟನಾ ವೃತ್ತಿ ಆರಂಭಿಸಿ ನಂತರ ಟಾಲಿವುಡ್ ನಲ್ಲಿ ಸಕ್ಸಸ್ ಫುಲ್ ಹೀರೋಯಿನ್ ಆಗಿ ಈಗ ಬಾಲಿವುಡ್ ಗೂ ಕಾಲಿಟ್ಟಿರುವ ನ್ಯಾಶನಲ್ ಕ್ರಶ್ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇಂದು ಬರ್ತ್ ಡೇ ಸಂಭ್ರಮ.
Published: 05th April 2021 02:28 PM | Last Updated: 05th April 2021 02:40 PM | A+A A-

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ(ಸಂಗ್ರಹ ಚಿತ್ರ)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದಿಂದ ನಟನಾ ವೃತ್ತಿ ಆರಂಭಿಸಿ ನಂತರ ಟಾಲಿವುಡ್ ನಲ್ಲಿ ಸಕ್ಸಸ್ ಫುಲ್ ಹೀರೋಯಿನ್ ಆಗಿ ಈಗ ಬಾಲಿವುಡ್ ಗೂ ಕಾಲಿಟ್ಟಿರುವ ನ್ಯಾಶನಲ್ ಕ್ರಶ್ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇಂದು ಬರ್ತ್ ಡೇ ಸಂಭ್ರಮ.
ಇವರ ಹುಟ್ಟುಹಬ್ಬಕ್ಕೆ ನಟ ರಕ್ಷಿತ್ ಶೆಟ್ಟಿ ಶುಭಾಶಯ ಕೋರಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಆರಂಭದ ಆಡಿಶನ್ ವಿಡಿಯೊ ಹಾಕಿ ಕಿರಿಕ್ ಪಾರ್ಟಿ ಬಳಿಕ ಬಹಳ ದೂರ ಕ್ರಮಿಸಿರುವೆ. ನಿಜವಾದ ಯೋಧನಂತೆ ಕನಸುಗಳ ಬೆನ್ನತ್ತಿ ಹೊರಟಿರುವೆ. ನಿನ್ನ ಬಗ್ಗೆ ಹೆಮ್ಮೆಯೆನಿಸುತ್ತದೆ, ಜನ್ಮದಿನದ ಶುಭಾಶಯಗಳು, ನಿನಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಟ್ವೀಟ್ ಮೂಲಕ ರಕ್ಷಿತ್ ಶೆಟ್ಟಿ ಶುಭ ಕೋರಿದ್ದಾರೆ.
ಈ ವಿಡಿಯೊದಲ್ಲಿ ಕಿರಿಕ್ ಪಾರ್ಟಿಯ ಸಾನ್ವಿ ಜೋಸೆಫ್ ಪಾತ್ರಕ್ಕೆ ಸ್ವತಃ ರಕ್ಷಿತ್ ಶೆಟ್ಟಿಯವರೇ ರಶ್ಮಿಕಾಗೆ ಆಡಿಷನ್ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಹೇಳಿಕೊಡುವ, ತಿದ್ದುವ ಸನ್ನಿವೇಶವಿದೆ.
Sharing this beautiful memory of yours from the @KirikParty audition. You have travelled so far since then, chasing you'r dreams like a real worrier. Proud of you girl and Happy Birthday to you. May you see more success @iamRashmika pic.twitter.com/6M1rBCQnee
— Rakshit Shetty (@rakshitshetty) April 5, 2021
ರಶ್ಮಿಕಾ ಈಗ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಗುಡ್ ಬೈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾಗೆ ಹಿಂದಿಯಲ್ಲಿ ಇದು ಎರಡನೇ ಸಿನೆಮಾ.