ನನಗೆ ಪ್ರತಿಯೊಂದು ಭಾಷೆಯೂ ಮುಖ್ಯ: ರಶ್ಮಿಕಾ ಮಂದಣ್ಣ

2016ರಲ್ಲಿ ಕಿರಿಕ್ ಪಾರ್ಟಿ ಕನ್ನಡ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ, ಕೇವಲ ಐದು ವರ್ಷಗಳಲ್ಲಿ ಫ್ಯಾನ್- ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ ಬೈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Published: 06th April 2021 06:19 PM  |   Last Updated: 06th April 2021 06:28 PM   |  A+A-


Rashmika_Mandanna1

ರಶ್ಮಿಕಾ ಮಂದಣ್ಣ

Posted By : Nagaraja AB
Source : The New Indian Express

ಬೆಂಗಳೂರು: 2016ರಲ್ಲಿ ಕಿರಿಕ್ ಪಾರ್ಟಿ ಕನ್ನಡ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ, ಕೇವಲ ಐದು ವರ್ಷಗಳಲ್ಲಿ ಫ್ಯಾನ್- ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ ಬೈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಅವರು ಅಚ್ಚರಿ ರೀತಿಯಲ್ಲಿ ಬೆಳೆಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರೊಂದಿಗೆ ಸಂಭಾಷಣೆಗೆ ಕೂಳಿತಾಗ ಅವರು ಎಷ್ಟು ಸ್ವಯಂ ಜಾಗೃತರಾಗಿದ್ದಾರೆ ಎಂಬುದು ನಮ್ಮ ಗಮನವನ್ನು ಸೆಳೆಯುತ್ತದೆ. ಎಲ್ಲಾ ಭಾಷೆಗಳ ಚಿತ್ರೋದ್ಯಮದ ಬಗ್ಗೆ ತನ್ನ ನಿಲುವನ್ನು ಸಂಕ್ಷಿಪ್ತವಾಗಿ ಹೇಳುವ ರಶ್ಮಿಕಾ, ಕೆಲವೊಮ್ಮೆ ನಾನು ಮಾತನಾಡುವಾಗ, ಕನ್ನಡ, ತೆಲುಗು, ತಮಿಳು, ತೆಲುಗು, ಹಿಂದಿ ಪದಗಳಿಂದ ಒಂದು ವಾಕ್ಯವನ್ನು ಹೇಳುತ್ತೇನೆ. ಇದಕ್ಕೆ ನನ್ನ ಸಿನಿಮಾ ಬದುಕು ಮತ್ತು ಶೂಟಿಂಗ್ ಕಾರಣ ಎನ್ನುತ್ತಾರೆ. 

ಇತ್ತೀಚಿಗೆ ತಮಿಳಿನಲ್ಲಿ ಪ್ರಥಮ ಬಾರಿಗೆ ನಟಿಸಿದ  'ಸುಲ್ತಾನ್' ಚಿತ್ರಕ್ಕೂ ಅಪಾರ ಜನಮನ್ನಣೆ ಗಳಿಸಿದ್ದು, ವಿಶೇಷವಾಗಿ ಮಸಲಾ ಸಿನಿಮಾದ ಅಭಿಮಾನಿಗಳು ನ್ಯಾಷನಲ್ ಕ್ರಶ್ ಅಭಿನಯಕ್ಕೆ ಮನಸೋತಿದ್ದು, ಕಾಲಿವುಡ್ ನಲ್ಲೂ ನೆಲೆಯೂರುವಂತಾಗಿದೆ. ತಮಿಳಿನಲ್ಲಿ ಕೇವಲ ಒಂದು ಚಿತ್ರ ಮಾಡಿದ್ದು, ಚಿತ್ರರಂಗವನ್ನೂ ಅಷ್ಟಾಗಿ ತಿಳಿಯದಿದ್ದರೂ ಭಾಷೆ, ಆಹಾರ, ಸಂಸ್ಕೃತಿ ಮತ್ತು ಜನರು ನನಗೆ ಖುಷಿ ನೀಡಿದ್ದಾರೆ. ನಟ ಕಾರ್ತಿ ಹಾಗೂ ನಿರ್ದೇಶಕ ಭಕ್ಕಿಯಾರಾಜ್ ಕಣ್ಣನ್ ಅವರೊಂದಿಗಿನ ಅನುಭವ ಆರಾಮದಾಯಕವೆನಿಸಿತು ಎಂದು ಹೇಳಿದರು.

ಸುಲ್ತಾನ್ ಚಿತ್ರದಲ್ಲಿ ರಶ್ಮಿಕಾ ರುಕ್ಮಿಣಿ ಹಳ್ಳಿ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುವ ಆಸೆ ಇತ್ತು. ಇದು ತುಂಬಾ ಆಲೋಚನೆಬದ್ಧ ಆಯ್ಕೆಯಾಗಿತ್ತು. ಇತರ ಚಿತ್ರಗಳನ್ನು ಒಪ್ಪಿಕೊಳ್ಳುವಾಗ  ವೃತ್ತಿ ಭವಿಷ್ಯ ಹಾಗೂ ಇತರ ಚಿತ್ರಗಳ ಬಿಡುಗಡೆ ಬಗ್ಗೆ ನಿರಂತರವಾಗಿ ಚಿಂತಿಸುತ್ತೇನೆ. ಇದರಿಂದ ಒಂದು ಚಿತ್ರದ ನಂತರ ಮತ್ತೊಂದು ಚಿತ್ರ ಪೂರ್ಣಗೊಳಿಸಲು ನೆರವಾಗಲಿದೆ ಎಂದರು.

ಅಲ್ಲು ಅರ್ಜುನ್ ಜೊತೆಗಿನ ಪುಷ್ಪಾ, ಶರ್ವಾನಂದ್ ಅವರೊಂದಿಗಿನ ಆಡವಾಲ್ಲು ಮೀಕು ಜೋಹಾರ್ಲು ತೆಲುಗು ಚಿತ್ರಗಳು ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಜೊತೆಗಿನ ಮಿಷನ್ ಮಂಜು, ಗುಡ್ ಬೈ ಹಿಂದಿ ಚಿತ್ರಗಳು ರಿಲೀಸ್ ಆಗಬೇಕಾಗಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಆಗುತ್ತಿಲ್ಲ. ವಾಸ್ತವವಾಗಿ ಚಿತ್ರೋದ್ಯಮದಲ್ಲಿ ಯಾವುದೇ ಸ್ನೇಹಿತರು ಇಲ್ಲ. ಎಲ್ಲಿಯೂ ಧೀರ್ಘ ಕಾಲ ಇರಲ್ಲ. ಆದರೆ, ವೃತ್ತಿ ಭವಿಷ್ಯ್ಕಾಗಿ ಇವೆಲ್ಲವನ್ನು ತ್ಯಾಗ ಮಾಡಬೇಕಾಗಿದೆ. ನಾನು ರೇಸ್ ನಲ್ಲಿ ಇರುವುದು ತಿಳಿದಿದೆ. ಅದಕ್ಕೆ ತಕ್ಕಂತೆ ಸರಿ ಹಾದಿಯಲ್ಲಿ ಸಾಗುತ್ತಿದ್ದೇನೆ. ಈಗ ನನ್ನ ಪ್ರಾಮಾಣಿಕತೆಯಿಂದ ವೀಕ್ಷಕರನ್ನು ಸೆಳೆಯುತ್ತಿದ್ದು, ಪ್ರೇಕ್ಷಕರು ನನನ್ನು ಸುಲಭವಾಗಿ ಗುರುತಿಸುವಂತಾಗಿದೆ ಎಂದು ತಿಳಿಸಿದರು.

ಇತರ ಭಾಷೆಗಳಲ್ಲಿ ಅವಕಾಶ ಸಿಕ್ಕ ನಂತರ ತಾನೂ ಬೆಳೆದ ಬಂದ ಕನ್ನಡ ಚಿತ್ರವನ್ನು ನಿರ್ಲಕ್ಷಿಸಿದ್ದಾರೆ ಎಂಬ ಟೀಕೆಗಳ ಕುರಿತಂತೆ ಪ್ರತಿಕ್ರಿಯಿಸಿದ ರಶ್ಮಿಕಾ, ಯಾವುದೇ ಭಾಷೆ ನನಗೆ ಕಡಿಮೆ ಪ್ರಾಧ್ಯಾನತೆ ನೀಡಿಲ್ಲ. ಇದೀಗ ಅನೇಕ ಭಾಷೆಗಳಲ್ಲಿ ನಟಿಸುತ್ತಿರುವುದರಿಂದ ಒಂದೇ ಭಾಷೆಯಲ್ಲಿ ಮೂರು ಅಥವಾ ಅದಕ್ಕೂ ಹೆಚ್ಚಿನ ಚಿತ್ರಗಳನ್ನು ಮಾಡಲು ಆಗುತ್ತಿಲ್ಲ . ಆರಂಭದ ದಿನಗಳಲ್ಲಿ ಕನ್ನಡಿಗರು ನನನ್ನು ಹರಸಿ ಬೆಳೆಸಿದ್ದಾರೆ ಎಂಬುದು ಗೊತ್ತಿದೆ. ಆದರೆ, ನಾನು ಕನ್ನಡ ಪ್ರೇಕ್ಷಕರನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಹೇಳಿಕೆಯಿಂದ ತಿಳಿಸಲು ಬಯಸುವುದಿಲ್ಲ, ಬದಲಿಗೆ ನನ್ನ ಕೆಲಸದಿಂದ ಮಾಡಿ ತೋರಿಸುವುದಾಗಿ ತಿಳಿಸಿದರು.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp