ಮೊಟ್ಟ ಮೊದಲ ಬಾರಿಗೆ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ನಿಖಿಲ್ ಕುಮಾರಸ್ವಾಮಿ!

ನಂದಕಿಶೋರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪೊಗರು ನಿರ್ದೇಶಕ ನಟ ಶಿವರಾಜ್ ಕುಮಾರ್ ಅವರಿಗಾಗಿ ಕನ್ನಡ-ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

Published: 06th April 2021 10:22 AM  |   Last Updated: 06th April 2021 01:00 PM   |  A+A-


Nikhil kumaraswamy

ನಿಖಿಲ್ ಕುಮಾರಸ್ವಾಮಿ

Posted By : Shilpa D
Source : The New Indian Express

ನಂದಕಿಶೋರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪೊಗರು ನಿರ್ದೇಶಕ ನಟ ಶಿವರಾಜ್ ಕುಮಾರ್ ಅವರಿಗಾಗಿ ಕನ್ನಡ-ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. 

ಈಗ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ  ಶಿವರಾಜ್ ಕುಮಾರ್ ನಟನೆಯ ಸಿನಿಮಾವನ್ನು ಗೌತಮ್ ರೆಡ್ಡಿ, ಕೃತಿ ಚಿಲ್ಕುರಿ ಮತ್ತು ವಿವೇಕ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ಪ್ರಿಯ ದರ್ಶಿನಿ ರಾಮ್ ಕಥೆ ಬರೆದಿದ್ದಾರೆ, ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್ ಮೊದಲ ಬಾರಿಗೆ ಬೆಳ್ಳಿ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದೊಂದು ಅದ್ದೂರಿ ಬಜೆಟ್ ಸಿನಿಮಾವಾಗಿದ್ದು, ಬಹುತಾರಾಗಣವಿದೆ. ಜಾಗ್ವಾರ್ ನಾಯಕನನ್ನು ತಮ್ಮ ಸಿನಿಮಾಗೆ ಕರೆ ತರಲು ನಂದ ಕಿಶೋರ್ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಮಾತುಕತೆಗಳು ನಡೆದಿವೆ. ನಿಖಿಲ್ ಗಾಗಿ ವಿಶೇಷ ಪಾತ್ರ ಸಿದ್ಧ ಮಾಡಲಾಗಿದ್ದು, ಈ ಸಂಬಂಧ ನಂದ ಕಿಶೋರ್ ನಿಖಿಲ್ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ, ಹಲವು ಸುತ್ತಿನ ಮಾತುಕತೆಗಳ ನಂತರ ನಿಖಿಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ನಿಖಿಲ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು ಅಧಿಕೃತನವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

ಹರ್ಷ ನಿರ್ದೇಶನದ ಭಜರಂಗಿ-2 ಸಿನಿಮಾ ರಿಲೀಸ್ ಗಾಗಿ ಶಿವಣ್ಣ ಕಾಯುತ್ತಿದ್ದಾರೆ, ವಿಜಯ್ ಮಿಲ್ಟನ್ ಅವರ ಶಿವಪ್ಪ ಶೂಟಿಂಗ್ ನಲ್ಲೂ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ, ನಿಖಿಲ್ ಸದ್ಯ ರೈಡರ್ ಸಿನಿಮಾದಲ್ಲಿ ಬ್ಯುಸಿ, ಮತ್ತೊಂದು ಸಿನಿಮಾ ಕೂಡ ಪ್ರಕಟವಾಗುವ ಸಾಧ್ಯತೆಯಿದೆ. ನಂದಕಿಶೋರ್ ಕೂಡ ದ್ರುವ ಸರ್ಜಾ ಜೊತೆ ದುಬಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp