ರಿಯಾಲಿಟಿ ಶೋ- ವಿಕ್ರಾಂತ್ ರೋಣ ಶೂಟಿಂಗ್: ಸುದೀಪ್ ಹಗ್ಗಜಗ್ಗಾಟ

ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ,  ಇದರ ಜೊತೆಗೆ ನಟ ಸುದೀಪ್  ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಕೂಡ ನಡೆಸಿಕೊಡುತ್ತಿದ್ದಾರೆ. 

Published: 06th April 2021 12:36 PM  |   Last Updated: 06th April 2021 12:36 PM   |  A+A-


A Still from vikranth rona

ವಿಕ್ರಾಂತ್ ರೋಣ ಸ್ಟಿಲ್

Posted By : Shilpa D
Source : The New Indian Express

ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ,  ಇದರ ಜೊತೆಗೆ ನಟ ಸುದೀಪ್  ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಕೂಡ ನಡೆಸಿಕೊಡುತ್ತಿದ್ದಾರೆ. 

ಅನೂಪ್ ಭಂಡಾರಿ ನಿರ್ದೇಶನದ  ವಿಕ್ರಾಂತ್ ರೋಣ ಶೂಟಿಂಗ್ ಕಳೆದ ವಾರ ಬೆಂಗಳೂರಿನಲ್ಲಿ ನಡೆಯಿತು, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್  ತಾರಾಗಣದಲ್ಲಿದ್ದಾರೆ.

ಆ್ಯಕ್ಷನ್ ಓರಿಯೆಂಟೆಂಡ್ ಸಿನಿಮಾವಾಗಿದ್ದು, ಕಳೆದ ವರ್ಷ ಲಾಕ್ ಡೌನ್ ನಂತರ ಜೂನ್ ತಿಂಗಳಿನಲ್ಲಿ ವಿಕ್ರಾಂತ್ ರೋಣ ಶೂಟಿಂಗ್ ಆರಂಭವಾಗಿತ್ತು. ಇನ್ನು ಎರಡು ಹಾಡು ಮತ್ತು ಟಾಕಿ ಪೋರ್ಷನ್ ಬಾಕಿ ಉಳಿದಿದೆ. ಈ ಶೆಡ್ಯೂಲ್ ನಲ್ಲಿ ಬಾಕಿ ಉಳಿದ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆ. ಮುಂದಿನ ಕೆಲ ದಿನಗಳಲ್ಲಿ ಶೂಟಿಂಗ್ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಮೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ.

ಇನ್ನೂ ಇದೇ ವೇಳೆ ಬಾಲಿವುಡ್ ನಾಯಕಿ ಜಾಕ್ಲೆಲಿನ್ ಫರ್ನಾಂಡೀಸ್ ನಟನೆಯ ಹಾಡೊಂದರ ಶೂಟಿಂಗ್ ಮುಗಿಯಬೇಕಿದೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.  ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 50 ದೇಶಗಳಲ್ಲಿ ರಿಲೀಸ್ ಆಗಲಿದೆ,  ಭಾರತದ ಹಲವು ಭಾಷೆಗಳ ಜೊತೆಗೆ ಪ್ರೆಂಚ್, ಅರೇಬಿಕ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಡಬ್ ಆಗಲಿದೆ. 
 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp