ನಾಳೆಯಿಂದ ಅಮೆಜಾನ್ ಪ್ರೈಮ್ ವಿಡಿಯೋ ನಲ್ಲಿ ಪುನೀತ್ ಅಭಿನಯದ 'ಯುವರತ್ನ' ಅಬ್ಬರ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೊಚ್ಚ ಹೊಸ ಚಲನಚಿತ್ರ "ಯುವರತ್ನ" ಏಪ್ರಿಲ್ 9 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ.

Published: 08th April 2021 07:02 PM  |   Last Updated: 08th April 2021 07:56 PM   |  A+A-


ಅಮೆಜಾನ್ ಪ್ರೈಮ್ ನಲ್ಲಿ ಪುನೀತ್ ಅಭಿನಯದ 'ಯುವರತ್ನ

Posted By : Raghavendra Adiga
Source : Online Desk

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೊಚ್ಚ ಹೊಸ ಚಲನಚಿತ್ರ "ಯುವರತ್ನ" ಏಪ್ರಿಲ್ 9 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ.

ಈ ಕುರಿತಂತೆ "ಯುವರತ್ನ" ಚಿತ್ರ ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ.

"ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಪ್ರೇಕ್ಷಕರಿಗೆ, ವಿಶೇಷವಾಗಿ ಕುಟುಂಬ ಮತ್ತು ವೃದ್ದರಿಗೆ ಅನುಕೂಲಕರವೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು  ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಯಲಿದೆ. ನಾವು ಎಲ್ಲಾ ಅಭಿಮಾನಿಗಳು, ಚಲನಚಿತ್ರ ಪ್ರಿಯರುಮತ್ತು ನಮ್ಮ ಎಲ್ಲ ಹಿತೈಷಿಗಳ ಸಹಕಾರವನ್ನು ಬಯಸುತ್ತೇವೆ ”ಎಂದು ಹೊಂಬಾಳೆ ಫಿಲಂಸ್ ಹೇಳಿಕೆಯಲ್ಲಿ ತಿಳಿಸಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ "ಯುವರತ್ನ" ಏಪ್ರಿಲ್ 1 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಕೇವಲ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ನಿರ್ಮಾಪಕರು ಇದೀಗ ಡಿಜಿಟಲ್ ವೇದಿಕೆಯಲ್ಲಿ ಚಿತ್ರ ಬಿಡುಗಡೆಯ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp