'ಕಬ್ಜ' ಉಪೇಂದ್ರಗೆ 'ರಾಬರ್ಟ್ ರಾಣಿ' ಆಶಾಭಟ್ ನಾಯಕಿ?

ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿರುವ ಆಶಾ ಭಟ್ ಕನ್ನಡಿಗರ ಮನ ಗೆದ್ದಿದ್ದಾರೆ, ರಾಬರ್ಟ್ ಅಭಿನ ಯಕ್ಕಾಗಿ ಸಿನಿರಸಿಕರಿಂದ ಮೆಚ್ಚುಗೆ ಪಡೆದಿದ್ದಾರೆ. 

Published: 08th April 2021 10:50 AM  |   Last Updated: 08th April 2021 01:06 PM   |  A+A-


Asha bhat and Upenrda

ಆಶಾ ಭಟ್ ಮತ್ತು ಉಪೇಂದ್ರ

Posted By : Shilpa D
Source : The New Indian Express

ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿರುವ ಆಶಾ ಭಟ್ ಕನ್ನಡಿಗರ ಮನ ಗೆದ್ದಿದ್ದಾರೆ, ರಾಬರ್ಟ್ ಅಭಿನ ಯಕ್ಕಾಗಿ ಸಿನಿರಸಿಕರಿಂದ ಮೆಚ್ಚುಗೆ ಪಡೆದಿದ್ದಾರೆ. 

ಕಣ್ಣು ಹೊಡಿಯಾಕ ಹಾಡಿನ ಮೂಲಕ ಮನೆ ಮಾತಾಗಿರುವ ಆಶಾ ಭಟ್  ಬಾಲಿವುಡ್ ನ ಜಂಗ್ಲಿ ಸಿನಿಮಾ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸಲು ಸಿದ್ಧರಾಗುತ್ತಿದ್ದಾರೆ.

ಮೂಲಗಳ ಪ್ರಕಾರ ಆರ್.ಚಂದ್ರು ನಿರ್ದೇಶನ ಕಬ್ಜ ಸಿನಿಮಾದಲ್ಲಿ ನಟ ಉಪೇಂದ್ರ ಅವರಿಗೆ ಆಶಾ ಭಟ್ ನಟಿಸುವ ಸಾಧ್ಯತೆಯಿದೆ. ಈಗಾಗಲೇ ಆಶಾ ಭಟ್ ಅವರ ಜೊತೆ ಆರಂಭಿಕ ಹಂತದ ಮಾತುಕತೆಗಳು ನಡೆದಿದ್ದು, ಆಶಾ ಭಟ್ ಕಬ್ಜ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಮಾಪಕರು ಘೋಷಿಸಬೇಕಿದೆ.

ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿದ ನಂತರ ಸಹಿ ಮಾಡಿದ ಮೇಲೆ ಇವೆಲ್ಲವೂ ತಿಳಿಯುತ್ತದೆ. ಮಾರ್ಚ್ 3 ರಿಂದ ಕಬ್ಜ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಫೈಟ್ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿದೆ. 

ಕೆಜಿಎಫ್ ಸಿನಿಮಾದ ಪ್ರಸಿದ್ಧ ಕಲಾ ನಿರ್ದೇಶಕ  ಶಿವಕುಮಾರ್ ಕಬ್ಜ ಸಿನಿಮಾಗಾಗಿ 8 ಸೆಟ್ ಗಳನ್ನು ಸೃಷ್ಟಿಸಲಾಗಿದೆ,  ಸ್ಟಂಟ್ ಮಾಸ್ಟರ್ ರವಿ ವರ್ಮಾ ಸಾಹಸ ನಿರ್ದೇಶನ ಮಾಡಿದ್ದಾರೆ, 90ರ ದಶಕದ ರೌಡಿಯೊಬ್ಬನ ಕಥೆ ಇದಾಗಿದೆ.

ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಎಂಟಿಬಿ ನಾಗರಾಜ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದ್ಧೂರಿ ಬಜೆಟ್ ಸಿನಿಮಾ ಇದಾಗಿದೆ.

ಕಬೀರ್  ದುಲ್ಹಾನ್ ಸಿಂಗ್, ಕೋಟ ಶ್ರೀನಿವಾಸ್, ಡ್ಯಾನಿಶ್ ಅಖ್ತರ್ ಸೈಫಿ ಮತ್ತು ಕಾಮರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರವಿ ಬಸ್ರೂರ್ ಸಿನಿಮಾಗೆ ಸಂಗೀತ ನೀಡಿದ್ದಾರೆ. 7 ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp