ಶೇ.50ರಷ್ಟು ಸೀಟು ಭರ್ತಿ ನಿರ್ಧಾರದ ನಡುವೆಯೇ 'ಕೊಡೆ ಮುರುಗ' ಏಪ್ರಿಲ್ 9 ರಂದು ರಿಲೀಸ್

ಸರ್ಕಾರ ಶೇ 50 ಸೀಟು ಭರ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡಿವೆ. ಆದರೆ ಕೊಡೆ ಮುರುಗ  ಚಿತ್ರ ಮಾತ್ರ ಧೈರ್ಯದಿಂದ ಅಂದು ಕೊಂಡಂತೆ ಏ.09 ರಂದು ಚಿತ್ರಬಿಡುಗಡೆಯಾಗುತ್ತಿದೆ

Published: 08th April 2021 11:15 AM  |   Last Updated: 08th April 2021 11:15 AM   |  A+A-


a still from Kode muruga

ಕೊಡೆ ಮುರುಗ ಸ್ಟಿಲ್

Posted By : Shilpa D
Source : The New Indian Express

ಬೆಂಗಳೂರು: ಸರ್ಕಾರ ಶೇ 50 ಸೀಟು ಭರ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡಿವೆ. ಆದರೆ ಕೊಡೆ ಮುರುಗ  ಚಿತ್ರ ಮಾತ್ರ ಧೈರ್ಯದಿಂದ ಅಂದು ಕೊಂಡಂತೆ ಏ.09 ರಂದು ಚಿತ್ರಬಿಡುಗಡೆಯಾಗುತ್ತಿದೆ.

ಈಗಾಗಲೇ ಚಿತ್ರದ ಟ್ರೇಲರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ಚಿತ್ರದ ಡೈಲಾಗ್‌ ಗಳಿಗೆ ಸಿನಿಮಾ ಪ್ರಿಯರು ಫಿದಾ ಆಗಿದ್ದಾರೆ. ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ  ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಚಿತ್ರತಂಡ ವಿಶ್ವಾಸದಲ್ಲಿದೆ.

ಚಿತ್ರವನ್ನು ಸುಬ್ರಮಣ್ಯ ಪ್ರಸಾದ್‌ ನಿರ್ದೇಶಿಸಿದ್ದಾರೆ. ಕೊರೊನಾ ಭಯದಲ್ಲಿರುವ ಜನರಿಗೆ “ಕೊಡೆ ಮುರುಗ’ ನಗುವಿನ ಔಷಧಿ ನೀಡಲಿದ್ದಾನೆ. ಚಿತ್ರವನ್ನು ರವಿಕುಮಾರ್‌ ನಿರ್ಮಿಸಿದ್ದಾರೆ. ಇವರಿಗೆ ಅಶೋಕ್‌ ಶಿರಾಲಿ ಸಾಥ್‌ ನೀಡಿದ್ದಾರೆ.

ಚಿತ್ರದಲ್ಲಿ ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ ಗುರುದತ್‌, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್‌ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಕ್ಯಾಮೆರಾ ಹಿಡಿದಿದ್ದು, ಎಂ.ಎಸ್‌.ತ್ಯಾಗರಾಜ ಸಂಗೀತ ಸಂಯೋಜಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp