ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ 'ಮಹಾನ್ ಹುತಾತ್ಮ' ಏಪ್ರಿಲ್ 9 ಕ್ಕೆ ಬಿಡುಗಡೆ

2018ರಲ್ಲಿ ಅತ್ಯುತ್ತಮ ಕಿರುಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ, ಬಳಿಕ ಸುಮಾರು 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ “ಮಹಾನ್‌ ಹುತಾತ್ಮ’ ಕಿರುಚಿತ್ರ ಏಪ್ರಿಲ್ 9 ರಂದು ಬಿಡುಗಡಯಾಗಲಿದೆ. 

Published: 08th April 2021 01:16 PM  |   Last Updated: 08th April 2021 02:03 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

2018ರಲ್ಲಿ ಅತ್ಯುತ್ತಮ ಕಿರುಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ, ಬಳಿಕ ಸುಮಾರು 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ 'ಮಹಾನ್‌ ಹುತಾತ್ಮ' ಕಿರುಚಿತ್ರ ಏಪ್ರಿಲ್ 9 ರಂದು ಬಿಡುಗಡಯಾಗಲಿದೆ. 

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ 'ಮಹಾನ್ ಹುತಾತ್ಮ' ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದೇ ಏ. 9 ರಂದು ಎಂಎಚ್‌ ಫಿಲಂ.ಇನ್‌ ನಲ್ಲಿ ಪೇಡ್‌ ಪ್ರೀಮಿಯರ್‌ ಆಗಲಿದೆ. ರೂ.30 ನೀಡಿ ಕಿರುಚಿತ್ರವನ್ನು ನೋಡಬಹುದಾಗಿದೆ.

ಅಕ್ಷಯ್ ಎಂಟರ್​ಟೈನ್ ಮೆಂಟ್ ಮತ್ತು ಪುರಾಣಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ 'ಮಹಾನ್ ಹುತಾತ್ಮ' ಕಿರುಚಿತ್ರಕ್ಕೆ 2018ರಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅದಾದ ಬಳಿಕ ಒಂದಲ್ಲ, ಎರಡಲ್ಲ 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಅವಾರ್ಡ್ ಗಳನ್ನು ಮುಡಿಗೇರಿಸಿಕೊಂಡಿದೆ. 

ಈ ಕಿರುಚಿತ್ರದಲ್ಲಿ ಅಕ್ಷಯ್ ಹಾಗೂ ಅದ್ವಿತಿ ಶೆಟ್ಟಿ ಅಲ್ಲದೆ, ಹಿರಿಯ ನಟ ಶ್ರೀನಾಥ್, ಸಾಗರ್ ಪುರಾಣಿಕ್, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್, ವರುಣ್ ಶ್ರೀನಿವಾಸ್ ರಾಜಗುರು ಸಹ ಅಭಿನಯಿಸಿದ್ದಾರೆ. ಹಾಗು 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಅಚಿಂತ್ಯ ಸಹ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಗಮನ ಸೆಳೆಯುತ್ತಾನೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp