ತಾಂತ್ರಿಕ ದೋಷದಿಂದ 'ವಕೀಲ್ ಸಾಬ್' ಪ್ರದರ್ಶನ ಸ್ಥಗಿತ'; ವೀಕ್ಷಕರಿಂದ ಚಿತ್ರಮಂದಿರದಲ್ಲಿ ದಾಂಧಲೆ: ವಿಡಿಯೋ

ಕೊರೋನಾ ವೈರಸ್ ಭೀತಿಯ ನಡುವೆಯೂ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ವಕೀಲ್ ಸಾಬ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. 
ಪವನ್ ಕಲ್ಯಾಣ್, ಚಿತ್ರಮಂದಿರದಲ್ಲಿ ದಾಂಧಲೆ ಚಿತ್ರ
ಪವನ್ ಕಲ್ಯಾಣ್, ಚಿತ್ರಮಂದಿರದಲ್ಲಿ ದಾಂಧಲೆ ಚಿತ್ರ

ತೆಲಂಗಾಣ: ಕೊರೋನಾ ವೈರಸ್ ಭೀತಿಯ ನಡುವೆಯೂ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ವಕೀಲ್ ಸಾಬ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಥಿಯೇಟರ್ ಗಳಲ್ಲಿ ಶೇ.50 ರಷ್ಟು ಆಸನದ ಮಿತಿ ಇದ್ದರೂ ಮೂರು ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆ ಮೇಲೆ ಕಂಡ ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದಾರೆ.

ಈ ಮಧ್ಯೆ ತೆಲಂಗಾಣದ ಜೋಗುಲಾಂಬ ಗಡ್ವಾಲ್ ಥಿಯೇಟರ್ ನಲ್ಲಿ  ತಾಂತ್ರಿಕ ದೋಷದಿಂದ ವಕೀಲ್ ಸಾಬ್ ಚಿತ್ರವನ್ನು ನಿಲ್ಲಿಸಿದ್ದರಿಂದ ವೀಕ್ಷಕರ ಆಕ್ರೋಶ ಸ್ಫೋಟಿಸಿತು. ಕೂಗಾಟ, ಕಿರುಚಾಟದ ಮೂಲಕದ ಥಿಯೇಟರ್ ನಲ್ಲಿ ದಾಂಧಲೆ ನಡೆಸಿದ್ದಾರೆ. ಗಾಜುಗಳನ್ನು ಪುಡಿಪುಡಿ ಮಾಡಿ, ಬಾಗಿಲು, ಕಿಟಕಿ, ಪಿರೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. 

 ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ 'ಪಿಂಕ್' ಸಿನಿಮಾ ರಿಮೇಕ್ ಇದಾಗಿದ್ದು, ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ಇನ್ನೂ ಟ್ವಿಟರ್ ನಲ್ಲಿ ಈ ಚಿತ್ರದ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com