ಚೊಚ್ಚಲ ನಿರ್ದೇಶಕ ಸಂತೋಷ್ ಜಿ. ಸಿನಿಮಾಗೆ ಪುಟ್ಟಣ್ಣನವರ ಕ್ಲಾಸಿಕ್ ಚಿತ್ರ 'ಶುಭಮಂಗಳ' ಹೆಸರು

ಹಳೆಯ ಕ್ಲಾಸಿಕ್ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಹೊಸ ಚಿತ್ರಗಳಿಗಿಡುವುದು ಕನ್ನಡ ಸಿನಿ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್. ಇದಾಗಲೇ ಗಣೇಶ್ ಅಭಿನಯದ "ಗೀತಾ", ಶರಣ್ ಅಭಿನಯದ "ಗುರು ಶಿಷ್ಯರು"  ಇಂತಹಾ ಕ್ಲಾಸಿಕ್ ಶೀರ್ಷಿಕೆಗಳನ್ನು ಪಡೆದುಕೊಂಡಿದೆ. ಇದೀಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಶುಭಮಂಗಳ" ಚಿತ್ರದ ಸರದಿ.
ಶುಭಮಂಗಳ ಟೈಟಲ್ ಲಾಂಚ್

ಸ್ಯಾಂಡಲ್ ವಿಡ್ ಗೆ ಹೊಸಬರಾದ ನಿರ್ದೇಶಕ ಸಂತೋಷ್ ಜಿ. ತಮ್ಮ ಚಿತ್ರಕ್ಕೆ "ಶುಭಮಂಗಳ" ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಸಿನಿಮಾದಲ್ಲಿ ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ಸಿದ್ಧಾರ್ಥ್ ಮಾದ್ಯಮಿಕ, ರಾಕೇಶ್ ಮಯ್ಯ  ಅಭಿನಯಿಸಿದ್ದು ಶೂಟಿಂಗ್ ಪೂರ್ಣಗೊಳಿಸಿದ್ದ ಈ ಚಿತ್ರಕ್ಕೆ ಇದೀಗ ಕನ್ನಡದ ಕ್ಲಾಸಿಕ್ ಚಿತ್ರದ ಹೆಸರನ್ನಿಡಲಾಗಿದೆ.

ಆರತಿ, ಶ್ರೀನಾಥ್, ಅಂಬರೀಶ್, ಶಿವರಾಮ್ ನಟಿಸಿದ 1975ರ ಚಿತ್ರ ಇಂದಿಗೂ ಸಿನಿ ಅಭಿಮಾನಿಗಳ ಎದೆಯಲ್ಲಿ ಸ್ಥಾನ ಪಡೆದಿದೆ. ಹಿರಿಯ ನಿರ್ದೇಶಕ ಭಗವಾನ್(ದೊರೆ ಭಗವಾನ್) ಅನಾವರಣಗೊಳಿಸಿದ ಶೀರ್ಷಿಕೆ ಲಾಂಚ್ ಸಂಬಂಧ ತಂಡ ವಿಶೇಷವಾದ ಟೀಸರ್ ಸಹ ಬಿಡುಗಡೆ ಮಾಡಿದೆ. ಕಿರುಚಿತ್ರ ನಿರ್ದೇಶಕ ಸಂತೋಷ್ ಅವರ  ಕಥೆ ವಿವಾಹ, ಪ್ರೀತಿ, ಕಾಮನೆ, ಮಕ್ಕಳು, ವೃದ್ದರನ್ನು ಒಳಗೊಂಡಿದೆ. ಜುದಾ ಸ್ಯಾಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೆ ರಾಕೇಶ್ ಕ್ಯಾಮರಾ ನಿರ್ವಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ. 100 ಪ್ರೇಕ್ಷಕರಿಗೆ  ಅವಕಾಶ ಸಿಕ್ಕಿದ ನಂತರ ಬಿಡುಗಡೆಯಾಗಲು ಕಾಯುತ್ತಿರುವ ಚಿತ್ರಗಳಲ್ಲಿ "ಶುಭಮಂಗಳ" ಕೂಡ ಒಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com