ನಿರ್ದೇಶಕ ಪವನ್ ಕುಮಾರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?

ನಿರ್ದೇಶಕ ಸಂತೋಷ್ ಆನಂದರಾಮ್ ಅವರು "ಯುವರತ್ನ"ದ ನಂತರ ಪುನೀತ್ ರಾಜ್‌ಕುಮಾರ್ ಉತ್ತಮ ಆಫರ್ ಗಳನ್ನು ಹೊಂದಿದ್ದಾರೆ. ಅವರೀಗ ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ.

Published: 12th April 2021 12:04 PM  |   Last Updated: 12th April 2021 12:32 PM   |  A+A-


ಪುನೀತ್ ರಾಜ್‌ಕುಮಾರ್, ಪವನ್ ಕುಮಾರ್

Posted By : Raghavendra Adiga
Source : The New Indian Express

ನಿರ್ದೇಶಕ ಸಂತೋಷ್ ಆನಂದರಾಮ್ ಅವರು "ಯುವರತ್ನ"ದ ನಂತರ ಪುನೀತ್ ರಾಜ್‌ಕುಮಾರ್ ಉತ್ತಮ ಆಫರ್ ಗಳನ್ನು ಹೊಂದಿದ್ದಾರೆ. ಅವರೀಗ ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ.  ಪ್ರಮುಖ ಪ್ರೊಡಕ್ಷನ್ ಹೌಸ್‌ ಒಂದರ ಪ್ರೋತ್ಸಾಹದೊಂದಿಗೆ ಈ ಚಿತ್ರ ತಯಾರಾಗಿತ್ತಿದ್ದು ಇದಾಗಲೇ ನಟನ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿದೆ.

ಲೂಸಿಯಾ ಮತ್ತು ಯು-ಟರ್ನ್‌ ಚಿತ್ರದ ಮೂಲಕ ಪ್ರಸಿದ್ಧರಾಗಿರುವ ನಿರ್ದೇಶಕ ಪವನ್, ಪವರ್‌ಸ್ಟಾರ್ ಇದಾಗಲೇ ನಿರ್ಮಾಣ ಸಂಸ್ಥೆ ಅನುಮೋದಿಸಿದ ಸ್ಕ್ರಿಪ್ಟ್ ಗೆ ಒಪ್ಪಿದ್ದಾರೆ. ಆದರೂ ನಟ ಅಥವಾ ನಿರ್ದೇಶ್ಕರು ಇದುವರೆಗೆ ಯೋಜನೆ ಬಗ್ಗೆ ಯಾವ ಅಧಿಕೃತ ಹೇಳಿಕೆ ನೀಡಿಲ್ಲ.

ಏತನ್ಮಧ್ಯೆ, ಯುವರತ್ನದ ನಂತರ ಪುನೀತ್ ನಿರ್ದೇಶಕ ಚೇತನ್ ಕುಮಾರ್ ಅವರ ಆಕ್ಷನ್ ಎಂಟರ್ಟೈನರ್ ಜೇಮ್ಸ್ ಕಡೆಗೆ ಗಮನ ಹರಿಸಿದ್ದಾರೆ. . ಮತ್ತೊಂದೆಡೆ, ಪವನ್ ತಮ್ಮ ತೆಲುಗು ವೆಬ್‌ಸರೀಸ್‌ಗಳ ಪ್ರಿ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಘೋಷಣೆಯಾಗುವ ನಿರೀಕ್ಷೆಇರುವ ಪುನೀತ್ ಚಿತ್ರದ ಚಿತ್ರಕಥೆಯಲ್ಲಿ ನಿರ್ದೇಶಕ ಏಕಕಾಲದಲ್ಲಿ ಕೆಲಸ ಮಾಡಲಿದ್ದಾರೆ, ಏತನ್ಮಧ್ಯೆ, ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಿದ ದಿನಕರ್ ತೂಗುದೀಪ ಚಿತ್ರದಲ್ಲಿ ಸಹ ಪುನೀತ್ ಅಭಿನಯಿಸುವವರಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ. ಯೋಜನೆಯ ಬಹುಪಾಲು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಪುನೀತ್ "ಪೈಲ್ವಾನ್" ನಿರ್ದೇಶಕ  ಎಸ್ ಕೃಷ್ಣ ಅವರೊಂದಿಗೂ ಕಮರ್ಷಿಯಲ್ ಎಂಟರ್ಟೈನರ್ ಒಂದರಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ, ಈ ಚಿತ್ರದಲ್ಲಿ ಪುನೀತ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp