ಆಗಸ್ಟ್‌ 19ಕ್ಕೆ ತೆರೆ ಮೇಲೆ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಅಬ್ಬರ!

ನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್‌ ರೋಣ' ಚಿತ್ರದ ಬಿಡುಗಡೆ ದಿನಾಂಕ ಅಂತಿಮವಾಗಿದೆ.
ವಿಕ್ರಾಂತ್ ರೋಣ ಚಿತ್ರ
ವಿಕ್ರಾಂತ್ ರೋಣ ಚಿತ್ರ

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್‌ ರೋಣ' ಚಿತ್ರದ ಬಿಡುಗಡೆ ದಿನಾಂಕ ಅಂತಿಮವಾಗಿದೆ.

ಹೌದು... ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ ಮುಂಬರುವ ಆಗಸ್ಟ್‌ 19ರಂದು ತೆರೆಗೆ ಅಪ್ಪಳಿಸಲಿದೆ. ಈ ಕುರಿತು ಸ್ವತಃ ಸುದೀಪ್ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು, 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ  ಈಗ ‘ರೋಮಾಂಚನಕಾರಿ’ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ! ವಿಕ್ರಾಂತ್ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಹಿಂದೆ ಇದೇ ವಿಕ್ರಾಂತ್ ರೋಣ ಚಿತ್ರತಂಡ ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ಬಿಡುಗಡೆ ಮಾಡಿ ವಿಶ್ವದ ಗಮನಸೆಳೆದಿತ್ತು. ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜ್ಯಾಕ್‌ ಮಂಜು ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. 

ವಿಕ್ರಾಂತ್ ರೋಣ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಈ ಚಿತ್ರ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com