ತಮಿಳಿನ ಖ್ಯಾತ ನಟ ವಿವೇಕ್ ಹಠಾತ್ ನಿಧನ: ಪ್ರಧಾನಿ ಮೋದಿ, ದುಃಖತಪ್ತ ಚಿತ್ರರಂಗ ಕಂಬನಿ

ತಮಿಳು ನಟ,ಹಾಸ್ಯ ಕಲಾವಿದ ವಿವೇಕ್ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಸುಕಿನ ಜಾವ ಮೃತಪಟ್ಟಿದ್ದು ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ.

Published: 17th April 2021 01:00 PM  |   Last Updated: 17th April 2021 01:28 PM   |  A+A-


Tamil actor Vivek

ತಮಿಳು ನಟ ವಿವೇಕ್

Posted By : Sumana Upadhyaya
Source : PTI

ನವದೆಹಲಿ/ಚೆನ್ನೈ: ತಮಿಳು ನಟ,ಹಾಸ್ಯ ಕಲಾವಿದ ವಿವೇಕ್ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಸುಕಿನ ಜಾವ ಮೃತಪಟ್ಟಿದ್ದು ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ.

ಖ್ಯಾತ ನಟ ವಿವೇಕ್ ಅವರ ಅಕಾಲಿಕ ನಿಧನವು ಅನೇಕರನ್ನು ದುಃಖಿತಗೊಳಿಸಿದೆ. ಅವರ ಹಾಸ್ಯಪ್ರಜ್ಞೆ ಮತ್ತು ಬುದ್ಧಿವಂತಿಕೆಯ ಸಂಭಾಷಣೆಗಳು ಜನರನ್ನು ರಂಜಿಸಿದವು. ಅವರ ಚಲನಚಿತ್ರಗಳಲ್ಲಿ ಮತ್ತು ಅವರ ಜೀವನದಲ್ಲಿ, ಪರಿಸರ ಮತ್ತು ಸಮಾಜದ ಬಗೆಗಿನ ಅವರ ಕಾಳಜಿಯು ಅಚ್ಛಳಿಯದ್ದು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ ಪ್ರಧಾನ ಮಂತ್ರಿ.

ಅವರ ಹಠಾತ್ ನಿಧನಕ್ಕೆ ಇಡೀ ದಕ್ಷಿಣ ಭಾರತ ಚಿತ್ರರಂಗ ಕೂಡ ಕಣ್ಣೀರು ಹಾಕಿದೆ. ಸೂರಪ್ ಸ್ಟಾರ್ ರಜನಿಕಾಂತ್, ಚಿನ್ನಕಲೈವನರ್ ಎಂದೇ ಜನಪ್ರಿಯರಾಗಿದ್ದ ವಿವೇಕ್ ಅವರ ನಿಧನ ತುಂಬಾ ದುಃಖವಾಗಿದೆ. ಶಿವಾಜಿ ಚಿತ್ರದ ಚಿತ್ರೀಕರಣ ವೇಳೆ ಅವರೊಂದಿಗೆ ಕಳೆದ ಪ್ರತಿ ಕ್ಷಣ ನೆನಪಿನಲ್ಲಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ವಿವೇಕ್ ಅವರ ಜೊತೆ ಮುಂಬರುವ ಚಿತ್ರ ಇಂಡಿಯನ್ 2ನಲ್ಲಿ ನಟಿಸುತ್ತಿದ್ದಾರೆ. ನಟನ ಕೆಲಸ ನಟಿಸುವುದಕ್ಕೆ ಕೊನೆಯಾಗುವುದಿಲ್ಲ. ನಟಿಸುವುದಕ್ಕಿಂತ ಆಚೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ಬಲವಾದ ನಂಬಿಕೆ ವಿವೇಕ್ ಗಿತ್ತು. ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ತತ್ವಗಳಲ್ಲಿ ಬಲವಾದ ನಂಬಿಕೆಯಿಟ್ಟವರು ವಿವೇಕ್ ಹಸಿರು ಕ್ರಾಂತಿಯ ಹೋರಾಟಗಾರ. ಅವರ ಸಾವು ನಿಜಕ್ಕೂ ದೊಡ್ಡ ನಷ್ಟ ಎಂದು ಬರೆದಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್, ನೀವು ನಮ್ಮನ್ನು ಇಂದು ಅಗಲಿ ಹೋದಿರಿ ಎಂದು ನಂಬಲೇ ಸಾಧ್ಯವಾಗುತ್ತಿಲ್ಲ. ದಶಕಗಳ ಕಾಲ ನಮ್ಮನ್ನು ರಂಜಿಸಿದವರು ನಿಮ್ಮ ಪರಂಪರೆಯನ್ನು ಇಂದು ಬಿಟ್ಟು ಹೋಗಿದ್ದೀರಿ ಎಂದು ಬರೆದಿದ್ದಾರೆ.

ಖ್ಯಾತ ನಟ ಪ್ರಕಾಶ್ ರಾಜ್, ಪ್ರೀತಿಯ ಗೆಳೆಯಾ, ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋದೆಯಾ, ನಿಮ್ಮ ಆಲೋಚನೆಗಳು ಮತ್ತು ಗಿಡಗಳನ್ನು ನೆಟ್ಟಿದ್ದಕ್ಕೆ ಧನ್ಯವಾದಗಳು, ನಿಮ್ಮ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆಯಿಂದ ಇಷ್ಟು ವರ್ಷಗಳ ಕಾಲ ರಂಜಿಸಿದ್ದಕ್ಕೆ ಧನ್ಯವಾದಗಳು,,ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp