ಜೀವನದ ಪಾಠ ಹೇಳುವ ಕಿರುಚಿತ್ರ 'ಗುಟುರ್ಗೂ'

ಟಿ ಎನ್ ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಗಾನವಿ ಲಕ್ಷ್ಮಣ್ ಅವರು ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. ಗಾನವಿ ಲಕ್ಷ್ಮಣ್‌ 'ಗುಟುರ್ಗೂ..' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.
ಗುಟುರ್ಗೂ ಕಿರುಚಿತ್ರದ ಸ್ಟಿಲ್
ಗುಟುರ್ಗೂ ಕಿರುಚಿತ್ರದ ಸ್ಟಿಲ್

'ಟಿ ಎನ್ ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಗಾನವಿ ಲಕ್ಷ್ಮಣ್ ಅವರು ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. ಗಾನವಿ ಲಕ್ಷ್ಮಣ್‌ 'ಗುಟುರ್ಗೂ..' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ಹೊಸ ವಿಶ್ವ ವಿದ್ಯಾನಿಲಯಕ್ಕೆ ಪ್ರೊಫೆಸರ್ ಆಗಿ ಬರುವ ಡಾ.ಶ್ಯಾಮ ಪ್ರಸಾದ್ ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಉಂಟಾದ ಮುಜುಗರದ ಅನುಭವನನ್ನು ಹೇಳಿಕೊಳ್ಳಲು ತಿಳಿಸುತ್ತಾರೆ. 

ಆದರೆ ಯಾರೋಬ್ಬರು ಬಾಯಿ ಬಿಡಲು ಹಿಂದೇಟು ಹಾಕಿದಾಗ ಕೆಲ ವರ್ಷಗಳ ಹಿಂದೆ ತಾವೋಬ್ಬ ಲೈಂಗಿಕ ಕಾರ್ಯಕರ್ತೆ ಭೇಟಿ ಮಾಡಿದ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಡೆಫ್ತ್ ಆಫ್ ಥಾಟ್ಸ್ ಫಿಲ್ಮ್ ಹೌಸ್ ಮಾರ್ಚ್ 26 ರಂದು ಯೂಟ್ಯೂಬ್ ಚಾನೆಲ್ ನಲ್ಲಿ ಗುಟುರ್ಗೂ ಕಿರುಚಿತ್ರ ಬಿಡುಗಡೆ ಮಾಡಿದ್ದು, ಇದುವರೆಗೂ 86,648 ವೀಕ್ಷಣೆ ಪಡೆದಿದೆ. 15 ನಿಮಿಷಗಳ ಸಮಯದ ವಿಡಿಯೋವನ್ನು ಕಳೆದ ಮಾರ್ಚ್ ನ ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ಮಾಡಲಾಗಿತ್ತು.

ವಾಟ್ಸಾಪ್ ಮೂಲಕ ಬಂದಿದ್ದ ಮೆಸೇಜ್ ಅನ್ನು ಇಂಪ್ರೂವೈಸಡ್ ಮಾಡಿ ಒಂದು ಕಥೆ ಮಾಡಲಾಯಿತು ಎಂದು ನಿರ್ದೇಶಕ ಕಿಶನ್ ಬದರಿನಾಥ್ ತಿಳಿಸಿದ್ದಾರೆ.

ವೇಶ್ಯಾಗೃಹ ಮತ್ತು ವಿಶ್ವವಿದ್ಯಾನಿಲಯ ಎರಡು ವಿಭಿನ್ನ ಪ್ರಪಂಚದ ದೃಶ್ಯಗಳನ್ನು ನಾವು ಚಿತ್ರೀಕರಿಸಿದ್ದೇವೆ, ಇದೊಂದು ಸವಾಲಾಗಿತ್ತು, ಕಲಾವಿದರಿಂದ ಅತ್ಯುತ್ತಮ ಕಾರ್ಯಕ್ಷಮತೆ ಬಂದಿದೆ ಎಂದು ಅವರು ತಿಳಿಸಿದ್ದರೆ.

ಕಿರುಚಿತ್ರದ ನಾಯಕಿಯಾಗಿ ನಟಿ ಗಾನವಿ ಲಕ್ಷ್ಮಣ್‌ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ. ಈಗ ಅವರು ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾನವಿ ಈ ಕಿರುಚಿತ್ರದಲ್ಲಿ ನಯನ ಎಂಬ ಹೆಸರಿನ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಧರ್‌ ಕೆ.ಎಸ್‌. ಉಪನ್ಯಾಸಕ ಪಾತ್ರದಲ್ಲಿ ನಟಿಸಿದ್ದಾರೆ.

ಸ್ಕ್ರಿಪ್ಟ್ ಬರೆಯುವಾಗ ಪ್ರಾಧ್ಯಾಪಕರ ಪಾತ್ರಕ್ಕೆ ಶ್ರೀಧರ್ ಸರ್ ಬಗ್ಗೆ ನಮಗೆ ಖಚಿತವಾಗಿತ್ತು, ಆದರೆ ನಯನ ಪಾತ್ರಕ್ಕೆ ನಾವು ಸ್ವಲ್ಪ ಬುದ್ದಿವಂತಿಕೆ ಮಾಡಬೇಕಾಗಿತ್ತು, ಏಕೆಂದರೆ ಆ ಪಾತ್ರದಲ್ಲಿ ಪ್ರೇಕ್ಷಕರು ನಿರೀಕ್ಷಿಸದ ನಟಿಯಿಂದ ಪಾತ್ರ ನಿರ್ವಹಿಸಲು ನಾವು ಬಯಸಿದ್ದೇವು ಎಂದು ನಿರ್ದೇಶಕ ಕಿಶನ್ ಬದರಿನಾಥ್ ತಿಳಿಸಿದ್ದಾರೆ.

ನನ್ನನ್ನು ಹೆಚ್ಚಾಗಿ ಕೇಳಲಾಗುವ ಒಂದು ಪ್ರಶ್ನೆಯೆಂದರೆ ಚಿತ್ರದ ಹೆಸರಿನ ಅರ್ಥ ಏನು ಎಂದು ಆದರೇ ಅದನ್ನು ಹೆಚ್ಚು ಬಹಿರಂಗಪಡಿಸುವುದಿಲ್ಲ,  ಚಿತ್ರದ ಆರಂಭ ಮತ್ತು ಅಂತ್ಯ ಎರಡು ಒಂದೇ ಅಕ್ಷರವಿದೆ ಎಂದು ಬದರಿನಾಥ್ ತಿಳಿಸಿದ್ದಾರೆ, ಪ್ರೇಕ್ಷಕರೇ ಇದರ ಅರ್ಥವನ್ನು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಕಿರುಚಿತ್ರಕ್ಕೆ ಯುರೋಪ್ ಫಿಲ್ಮ್ ಫೆಸ್ಟಿವಲ್ ಯುಕೆ (ನವೆಂಬರ್ 2020), ಪೋರ್ಟ್ ಬ್ಲೇರ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (ಡಿಸೆಂಬರ್ 2020) ನಲ್ಲಿ ಜ್ಯೂರಿ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಬಿಯಾಂಡ್ ಅರ್ಥ್ ಫಿಲ್ಮ್ ಫೆಸ್ಟಿವಲ್ ಸೀಸನ್ 7 ಪ್ರಶಸ್ತಿ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com