ಚಂದನವನದಲ್ಲಿ ಮೂರು ಕಥೆ, ಮೂರು ನಿರ್ದೇಶಕರ ಹೊಸ ಸಿನಿಮಾ

ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ ಕಥೆಗಳನ್ನು ಒಗ್ಗೂಡಿಸಿ ಶಾಂತಿಯನ್ನು ಕಳೆದುಕೊಳ್ಳಬೇಡಿ ಎಂಬ ಹೊಸ ಸಿನಿಮಾ ಗಾಂಧಿನಗರದಲ್ಲಿ ಸದ್ದಿಲ್ಲದೇ ಸೆಟ್ಟೇರಿದೆ.
ನಟಿ ಹರ್ಷಿತಾ
ನಟಿ ಹರ್ಷಿತಾ

ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ ಕಥೆಗಳನ್ನು ಒಗ್ಗೂಡಿಸಿ ಶಾಂತಿಯನ್ನು ಕಳೆದುಕೊಳ್ಳಬೇಡಿ ಎಂಬ ಹೊಸ ಸಿನಿಮಾ ಗಾಂಧಿನಗರದಲ್ಲಿ ಸದ್ದಿಲ್ಲದೇ ಸೆಟ್ಟೇರಿದೆ.

ಇದೇ ಮಾದರಿಯಲ್ಲಿ ಬಿಡುಗಡೆಯಾದ "ಕಥಾಸಂಗಮ' ಸಿನಿಮಾ ಈಗಾಗಲೇ ಚಂದನವನದಲ್ಲಿ ಸದ್ದು ಮಾಡಿತ್ತು. ಅದೇ ರೀತಿಯ ಪ್ರಯತ್ನವನ್ನು ಹೊಸಬರ ತಂಡವೊಂದು ಮಾಡಿದೆ.

"ಚುಕ್ಕಿ, ಮೀರಾ ಮಾಧವ, ಮೇಘ ಮೈಯೂರಿ, ಅಂಬಾರಿ'ಯಂತಹ ಧಾರಾವಾಹಿ ಹಾಗೂ  ಕನ್ನಡ ಹಾಗೂ ತುಳು ಸಿನಿಮಾದಲ್ಲಿ ಸಹ-ನಿರ್ದೇಶಕರಾಗಿ ಅನುಭವ ಇರುವ ವಿಘ್ನೇಶ್ ಶೇರೆಗಾರ್ ಅವರು ಮೊದಲ ಬಾರಿಗೆ ಚಂದನವನದಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ಸಿನಿಮಾದಲ್ಲಿ ನಿರ್ದೇಶನದ ಅನುಭವ ಇರುವ ಬಾಸುಮ ಕೊಡಗು, ಹಾಗೂ ಕಿರು ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಶಿವ ಅವರ ಮನವೊಲಿಸಿ ಒಂದೇ ಸಿನಿಮಾ ಮಾಡುವ ಕನಸನ್ನು ಹುಟ್ಟುಹಾಕಿದ್ದು ವಿಘ್ನೇಶ್ ಅವರು. ಅವರ ಪ್ರಯತ್ನಕ್ಕೆ ಕಲಾವಿದರು ಹಾಗೂ ಉಳಿದ ನಿರ್ದೇಶಕರು ಸಾಥ್ ನೀಡುತ್ತಿದ್ದಾರೆ.

ವಿಘ್ನೇಶ್ ಅವರ ನಿರ್ದೇಶನದ ಮೊದಲ ಭಾಗದ ಕಥೆ ಮಾನವನ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಮನುಷ್ಯ ಸತ್ತ ಮೇಲೂ ಜೀವಂತವಾಗಿರುವ ಬಗ್ಗೆ ಅವರು ಕಥೆ ಹೇಳುತ್ತಾರೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ಅವರು ನಿರ್ದೇಶಿಸುತ್ತಿದ್ದು ಇದರಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳಿದ್ದಾರೆ, ಮೂರನೇ ಕಥೆ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕುರಿತಾಗಿದೆ. ಇದನ್ನು ಶಿವ ಅವರು ನಿರ್ದೇಶಿಸುತ್ತಿದ್ದಾರೆ.

ನಾಯಕ ನಟನಾಗಿ ಕಾರ್ತಿಕ್  ಹಾಗೂ ನಾಯಕಿಯಾಗಿ ಹರ್ಷಿತಾ ಅಭಿನಯಿಸಿದ್ದು, ನಿರ್ದೇಶಕರಿಂದ ಹಿಡಿದು ಈ ಸಿನಿಮಾದಲ್ಲಿ ಹಿರಿಯ ನಟರಾದ ಜಿ.ಕೆ. ಶಂಕರ್, ರಾಜಣ್ಣ, ಹಾಗೂ ನಟರನ್ನೂ ಸೇರಿ ಎಲ್ಲವೂ ಹೊಸಬರ ತಂಡವೇ ಆಗಿದೆ. ಕಾರ್ತಿಕ್, ಇಂದ್ರಜಿತ್, ಹರ್ಷಿತಾ, ಸಂಗೀತ, ಚಂದ್ರಕಲಾ ಭಟ್, ರಾಕೇಶ್, ಸಂಪತ್ ಶಾಸ್ತ್ರೀ ,ಕಾವ್ಯ ಕೊಡಗು ಅವರ ತಾರಾಂಗಣವಿದೆ.

ಪದ್ಮಾವತಿ ಸ್ಟುಡಿಯೋಸ್ ಸಂಸ್ಥೆ ಯ ನಿರ್ಮಾಣ ಈ ಸಿನಿಮಾಕ್ಕಿದೆ. ಕಲ್ಕಿ ಅಭಿಷೇಕ್ ಹಾಗೂ ಜಾನ್ ಮೊಜಾರ್ಟ್ ಸಂಗೀತ ನಿರ್ದೇಶಿಸಿದ್ದರೆ, ಅಜಯ್ ಅರ್ ವೇದಾಂತಿ, ಯಶಸ್ ಶುಕ್ರ ಹಾಡುಗಳನ್ನು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com