ರಾಷ್ಟ್ರ ಪ್ರಶಸ್ತಿ ವಿಜೇತೆ, ಚಿತ್ರ ನಿರ್ದೇಶಕಿ ಸುಮಿತ್ರಾ ಭಾವೆ ನಿಧನ

ಏಳು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ, ಮರಾಠಿಯ ಖ್ಯಾತ ಚಿತ್ರ ನಿರ್ದೇಶಕಿ ಮತ್ತು ಬರಹಗಾರ್ತಿ ಸುಮಿತ್ರಾ ಬಾವೆ ವಯೋ ಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Published: 19th April 2021 03:05 PM  |   Last Updated: 19th April 2021 04:19 PM   |  A+A-


Sumitra_Bhave1

ಮರಾಠಿ ಚಿತ್ರ ನಿರ್ದೇಶಕಿ ಸುಮಿತ್ರಾ ಭಾವೆ

Posted By : Nagaraja AB
Source : The New Indian Express

ಪುಣೆ: ಏಳು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ,  ಮರಾಠಿಯ ಖ್ಯಾತ ಚಿತ್ರ ನಿರ್ದೇಶಕಿ ಮತ್ತು ಬರಹಗಾರ್ತಿ ಸುಮಿತ್ರಾ ಬಾವೆ ವಯೋ ಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಹ ನಿರ್ದೇಶಕ ಸುನೀಲ್ ಸುಕ್ತಾಂಕರ್ ಅವರೊಂದಿಗೆ ಮರಾಠಿ ಚಿತ್ರೋದ್ಯಮದಲ್ಲಿ ಭಾವೆ ಮಹತ್ವದ ಬದಲಾವಣೆ ತಂದಿದ್ದರು. ಪುಣೆಯಲ್ಲಿ ಜನಿಸಿದ್ದ ಭಾವೆ  ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಮುಂಬೈಯ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯಿಂದ ರಾಜ್ಯಶಾಸ್ತ್ರ ಮತ್ತು ಸಮಾಜ ಶಾಸ್ತ್ರದಲ್ಲಿ ಮತ್ತೊಂದು ಎಂ.ಎಂ. ಪದವಿ ಪಡೆದುಕೊಂಡಿದ್ದರು.

ನಂತರ ಶಿಕ್ಷಕರಾಗಿ ಪುಣೆಯ ಕರ್ವೆ ಸಮಾಜ ವಿಜ್ಞಾನಗಳ ಸಂಸ್ಥೆ ಹಾಗೂ ಎನ್ ಜಿಒ ವೊಂದರಲ್ಲಿ ಕೆಲಸ ಮಾಡಿದರು. ಆಲ್ ಇಂಡಿಯಾ ರೇಡಿಯೊದಲ್ಲಿ ಮರಾಠಿ ನ್ಯೂಸ್ ರೀಡರ್ ಆಗಿಯೂ ಸೇವೆ ಸಲ್ಲಿಸಿದ್ದರು.

1985ರಲ್ಲಿ ಸುಮಿತ್ರಾ ಭಾವೆ ನಿರ್ದೇಶಿಸಿದ್ದ ಮೊದಲ ಕಿರುಚಿತ್ರ ' ಬಾಯಿ' ಗೆ 1986ರಲ್ಲಿ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ನಂತರ 'ಪಾಣಿ' ಎಂಬ ಮತ್ತೊಂದು ಕಿರುಚಿತ್ರಕ್ಕೆ 1988ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಸುನಿಲ್ ಸುಕ್ತಾಂಕರ್ ಜೊತೆಗೂಡಿ ನಿರ್ದೇಶಿಸಿದ ಮೊದಲ ಮಠಾಠಿ ಚಿತ್ರ ದೋಘಿ ಗೆ (1995) ಮಹಾರಾಷ್ಟ್ರ ಸರ್ಕಾರದ ಸಿನಿಮಾ ಪ್ರಶಸ್ತಿ ಮತ್ತು 1996ರಲ್ಲಿ ಮತ್ತೊಂದು ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. 

ಸುನೀಲ್ ಸುಕ್ತಾಂಕರ್ ಜೊತೆಗೆ 2002ರಲ್ಲಿ ಸುಮಿತ್ರಾ ಭಾವೆ ನಿರ್ದೇಶಿಸಿದ್ದ  'ವಾಸ್ತುಪುರುಷ್' ಚಿತ್ರಕ್ಕೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. 'ದಾಹವಿ ಫಾ' ಚಿತ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಉತ್ತಮ ನಿರ್ದೇಶಕಿ ಮತ್ತು, ಉತ್ತಮ ಚಿತ್ರ ಪ್ರಶಸ್ತಿ 2003ರಲ್ಲಿ ಸಿಕ್ಕಿತ್ತು. 2004ರಲ್ಲಿ ದೇವರಾಯಿ ಚಿತ್ರಕ್ಕೂ ಕೂಡಾ ರಾಷ್ಟ್ರ ಪ್ರಶಸ್ತಿ ಬಂದಿತ್ತು. 

2016ರಲ್ಲಿ ಸುಮಿತ್ರಾ ಭಾವೆ ನಿರ್ದೇಶಿಸಿದ್ದ 'ಕಾಸವ್' ಚಿತ್ರ 2017ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. 2013ರಲ್ಲಿ ಅವರೇ ನಿರ್ದೇಶಿಸಿದ್ದ ಅಸ್ತು ಚಿತ್ರ ಕೂಡಾ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಮತ್ತೊಂದು ಕಿರುಚಿತ್ರ ಕೂಡಾ ವಿವಿಧ ದೇಶ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp