'ಗರುಡ ಗಮನ ವೃಷಭ ವಾಹನ' ಚಿತ್ರ ನೇರ ಒಟಿಟಿ ಬಿಡುಗಡೆ ಇಲ್ಲ: ರಾಜ್ ಬಿ. ಶೆಟ್ಟಿ

ಎಲ್ಲಾ ಅಂದುಕೊಂಡಹಾಗೆ ನಡೆದಿದ್ದರೆ ರಾಜ್ ಬಿ ಶೆಟ್ಟಿ ಅವರ"ರುಡ ಗಮನ ವೃಷಭ ವಾಹನ" ಜೂನ್ 4 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದಾಗ್ಯೂ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕಾಗಿ ಅವರು ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದಾರೆ. 
ಗರುಡ ಗಮನ ವೃಷಭ ವಾಹನ
ಗರುಡ ಗಮನ ವೃಷಭ ವಾಹನ

ಎಲ್ಲಾ ಅಂದುಕೊಂಡಹಾಗೆ ನಡೆದಿದ್ದರೆ ರಾಜ್ ಬಿ ಶೆಟ್ಟಿ ಅವರ "ರುಡ ಗಮನ ವೃಷಭ ವಾಹನ" ಜೂನ್ 4 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದಾಗ್ಯೂ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕಾಗಿ ಅವರು ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದಾರೆ. ಅಲ್ಲದೆ ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ಮುಂದಿನ ದಿನಾಂಕವನ್ನು ನಿಗದಿಪಡಿಸುವ ಸ್ಥಿತಿಯಲ್ಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

“ಪರಿಸ್ಥಿತಿ ಉತ್ತಮವಾಗುತ್ತದೆಯೆ? ಹಾಗಾಗುವ ಭರವಸೆ ಇದೆ.ಪ್ರಪಂಚದಾದ್ಯಂತ ಇರುವ ನನ್ನ ಸ್ನೇಹಿತರೊಂದಿಗೆ ನಾನು ಇದನ್ನು ಚರ್ಚಿಸುತ್ತಿದ್ದೇನೆ, ಅವರು ಸಾಂಕ್ರಾಮಿಕ ಹೇಗೆ ಹರಡುತ್ತದೆ ಎನ್ನುವುದನ್ನು ವಿವರಿಸಿದರು. ಪ್ರಕರಣಗಳ ತೀವ್ರ ಏರಿಕೆ ಕೂಡ ಶೀಘ್ರದಲ್ಲೇ ಇಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಮುನ್ನ ಸಹ ಹಾಗೆ ಆಗಿದೆ.ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತವೆ ”ಎಂದು ನಿರ್ದೇಶಕ ಹೇಳಿದ್ದಾರೆ.

ಈ ಚಿತ್ರ ಒಂದು ಗ್ಯಾಂಗ್ ಸ್ಟರ್ ಡ್ರಾಮಾ ಆಗಿದ್ದು ಇದರಲ್ಲಿ ಎರಡು ಪುರುಷ ಪಾತ್ರಗಳಿವೆ, ಇದರಲ್ಲಿ ರಾಜ್ ಮತ್ತು ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದು ಶಿವ ಮತ್ತು ಹರಿ ನಡುವಿನ ಅಹಂ ನ ಘರ್ಷಣೆಗೆ ಸಂಬಂಧಿಸಿದೆ. ಯಕ್ಷಗಾನ ಪ್ರಸಂಗವಾಗಿರುವ "ಶ್ರೀ ದೇವಿ ಮಹಾತ್ಮೆ" ಕಥೆಯನ್ನೂ ಇದು ಆಧರಿಸಿದೆ. ಈ ಚಿತ್ರವು ತಾಯಿಯ ಪಾತ್ರವನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸ್ತ್ರೀ ಪಾತ್ರಗಳನ್ನು ಹೊಂದಿಲ್ಲ.

“ಸ್ವಲ್ಪ ಸಮಯದ ಹಿಂದೆ, ಕೆಲವು ಸ್ಟಾರ್ ನಟರ ಚಲನಚಿತ್ರಗಳು ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತಂದವು. ಥಿಯೇಟರ್ ಮಾಲೀಕರು ತಮ್ಮ ಎಲ್ಲ ತೊಂದರೆಗಳನ್ನು ಹಿಂದಿಕ್ಕಿ ಚಿತ್ರಮಂದಿರಗಳನ್ನು ಮತ್ತೆ ತೆರೆದರು. ಈಗ ಎರಡನೇ ಅಲೆಯೊಡನೆ ಪ್ರಯಾಣ ಸಾಗಿದ್ದು ಮುಂದೇನು ಎನ್ನುವುದು ಗೊತ್ತಿಲ್ಲ. ಮುಖ್ಯವಾಗಿ, ಏಪ್ರಿಲ್‌ನಲ್ಲಿ "ಸಲಗ"."ಕೋಟಿಗೊಬ್ಬ 3" ಹಾಗೂ ಮೇನ ಲ್ಲಿ "ಭಜರಂಗಿ 2" ಸೇರಿದಂತೆ ಕೆಲವು ಸ್ಟಾರ್ ನಟರ ಚಿತ್ರಗಳು ಸಾಲಾಗಿ ಬಿಡುಗಡೆ ಕಾಣಬೇಕಿತ್ತು. ಅವೆಲ್ಲವೂ ಈಗ ಸ್ಥಗಿತಗೊಂಡಿವೆ. ಮತ್ತು ಥಿಯೇಟರ್ ಮತ್ತೆ ತೆರೆದ ನಂತರ, ಬಿಡುಗಡೆಗಾಗಿ ಕಾಯಲಾಗುತ್ತದೆ. ಆದರೆ ಇದು ಸುಲಭವಲ್ಲ.. ಇದೆಲ್ಲಾ ನನ್ನನ್ನು ಖಾಲಿ ಮನಸ್ಸಿನಲ್ಲಿರಿಸಿದೆ, ”ಎಂದು ಅವರು ಹೇಳುತ್ತಾರೆ. "ನಾನು ಕಾಯಲು ಸಿದ್ಧನಿದ್ದೇನೆ, ಆದರೆ ಚಿತ್ರವು ಮೊದಲು ಚಿತ್ರಮಂದಿರಗಳನ್ನು ತಲುಪಬೇಕೆಂದು ನಾನು ಬಯಸುತ್ತೇನೆ" ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಆಸಕ್ತಿ ಹೊಂದಿಲ್ಲವೆಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

“ಚಿತ್ರದ ತಯಾರಿಮತ್ತು ಕಥೆ ಹೇಳುವಿಕೆಯು ರಂಗಭೂಮಿಗೆ ಬಹಳ ಸೂಕ್ತವಾಗಿದೆ. ಹಾಗಾಗಿ ಕೆಲವು ತಿಂಗಳು ಕಾಯಲು ನಾನು ಸಿದ್ಧ. ಒಂದು ವರ್ಷ ಕಾಯುವುದಾದರೂ ಸರಿ.ನಾನು ಇದನ್ನು ಹೂಡಿಕೆದಾರರೊಂದಿಗೆ ಚರ್ಚಿಸಿದ್ದೇನೆ. ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ”ಎಂದು ಅವರು ಹೇಳಿದ್ದಾರೆ.

"ಒಟಿಟಿ ಸಣ್ಣ ಪರದೆಗಳಿಗೆ ಮೀಸಲಾಗಿದೆ, ಮತ್ತು ಚಲನಚಿತ್ರವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಬಂದಾಗ ಅದರ ಡ್ರಾಮಾಟಿಕಲ್ ಸ್ವರೂಪ ಯಾವಾಗಲೂ ಉತ್ತಮವಾಗಿ ಇರುವುದಿಲ್ಲ."

ಅಡುಗೆ ಮಾಡುತ್ತಾ ಯಾರಾದರೂ ಸಿನಿಮಾ ನೋಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. “ಚಲನಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರನ್ನು ಆಕರ್ಷಿಸುವ ಸಮಯದ ಅವಧಿ ಬಹಳ ಕಡಿಮೆ. ಒಂದು ಚಲನಚಿತ್ರವು 2 ನಿಮಿಷಗಳಲ್ಲಿ ವೀಕ್ಷಕರ ಗಮನವನ್ನು ಸೆಳೆಯಲು ಸಾಧ್ಯವಾಗದಿದ್ದರೆ, ನೀವು ಅವರನ್ನು ಇಡೀ ಚಲನಚಿತ್ರವನ್ನು ವೀಕ್ಷಿಸುವಂತೆ ಮಾಡಲು ಸಾಧ್ಯವಿಲ್ಲ. ಒಟಿಟಿಗಾಗಿ ಬರೆಯುವುದು ಒಟ್ಟಾರೆಯಾಗಿ ವಿಭಿನ್ನ ಪ್ರಯೋಗವೇ ಆಗಲಿದೆ.  , ನನ್ನ ಅಭಿಪ್ರಾಯದಲ್ಲಿ. ಒಟಿಟಿ ವೈಯಕ್ತಿಕ ವೀಕ್ಷಣೆಯಾಗಿದ್ದು ಕ್ರೈಂ, ಸಾಫ್ಟ್ ಪೋರ್ನ್, ಕಾಮಿಡಿ ಮತ್ತು ಥ್ರಿಲ್ಲರ್ ಮುಂತಾದ ಪ್ರಕಾರಗಳು ಉತ್ತಮವಾಗಿ ಅಲ್ಲಿ ಮೂಡಿಬರುತ್ತದೆ."

ಈ ಲಾಕ್‌ಡೌನ್ ಅವಧಿಯನ್ನು ಬಳಸಿಕೊಳ್ಳಲು ರಾಜ್ ಬಿ ಶೆಟ್ಟಿ ತನ್ನ ದಾರಿಯಿಂದ ಹೊರಹೋಗುವ ಅಗತ್ಯ ಕಂಡುಕೊಂಡಿಲ್ಲ 'ನಾನು ಒಂದು ವರ್ಷದಿಂದ ಒಂದೇ ಒಂದು ಚಿತ್ರ ನೋಡಿಲ್ಲ  .“ಈ ರೀತಿಯ ಪರಿಸ್ಥಿತಿಯಲ್ಲಿ ಏನಾದರೂ ಕೆಲಸ ಮಾಡುವುದು ಎಲ್ಲಕ್ಕಿಂತ ಹೆಚ್ಚಾಗಿ ಬದುಕುಳಿಯುವುದು ಮುಖ್ಯ.ಕಾರಣ, ನಾನು ನನ್ನನ್ನು ಯಾವುದರಲ್ಲಿಯೂ ತೊಡಗಿಸಿಕೊಂಡಿಲ್ಲ.. ನಾನು ಸಂಪೂರ್ಣವಾಗಿ ನನ್ನ ವಲಯದಿಂದ ಹೊರಗಿದ್ದೇನೆ. ಸ್ಕ್ರಿಪ್ಟ್‌ನೊಂದಿಗೆ ನಾನು ನನ್ನನ್ನು ಜೋಡಿಸಿಕೊಳ್ಳುವುದಿಲ್ಲ.ನಾಲ್ಕು ಗೋಡೆಗಳ ನಡುವೆ ಚಲನಚಿತ್ರ ಮಾಡಲು ನಾನು ಸಮರ್ಥನೆಂದು ನನಗೆ ತಿಳಿದಿದೆ, ಆದರೆ ಅದರ ಸಲುವಾಗಿ ನಾನು ಏನನ್ನೂ ಮಾಡುವುದಿಲ್ಲ. ” ಸಾಂಕ್ರಾಮಿಕವು ನಟ-ನಿರ್ದೇಶಕರಿಗೆ ಚಲನಚಿತ್ರಗಳನ್ನು ನಿರ್ಮಿಸುವ ವಿಧಾನವನ್ನು ಬದಲಾಯಿಸಿದೆ. "ಮೊದಲ ಲಾಕ್ ಡೌನ್ ಸಮಯದಲ್ಲಿ, ಇದು ತುಂಬಾ ಒಳ್ಳೆಯ ಸಮಯ ಎಂದು ನಾನು ಭಾವಿಸಿದೆವು, ನನ್ನ ಬಗ್ಗೆ ನಾನು ಗಮನ ಹರಿಸಬಹುದು ಎಂದುಕೊಂಡೆವು. ಆದರೆ 20 ದಿನಗಳ ನಂತರ, ನಾನು ಸಂತೋಷವಾಗಿರಲಿಲ್ಲ, ಮತ್ತು ಆ ರೀತಿ ಇರಲು ಯಾವುದೇ ಕಾರಣವಿಲ್ಲ. ನಾನು ಚಿತ್ರವನ್ನು ಪೂರ್ಣಗೊಳಿಸಿದ್ದೇನೆ ಮತ್ತು ಚಿಂತೆ ಮಾಡಲು ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಆದರೆ ನಾನು ‘ಅದರ ಅರ್ಥವೇನು?’ ಎಂಬಂತೆ ಯೋಚಿಸಿದೆ.ನನ್ನಲ್ಲಿ ಗಂಭೀರ ಸಮಸ್ಯೆ ಇದೆ ಎಂದು ನಾನು ಭಾವಿಸಿದೆ. ಅಂದಿನಿಂದ ನಾನು ಚಲನಚಿತ್ರಗಳನ್ನು ನೋಡಿಲ್ಲ. ಚಲನಚಿತ್ರ ಸ್ಕ್ರಿಪ್ಟ್ ಅಥವಾ ಸ್ಟೋರಿ ಬೋರ್ಡ್‌ನ ಆಲೋಚನೆ ಕೂಡ ನನಗೆ ತೊಂದರೆಯಾಗಿ ಕಾಣುತ್ತದೆ."ಎಂದು ಅವರು ಹೇಳುತ್ತಾರೆ.

“ನೀವು ಒಂದು ದೊಡ್ಡ ವಿಷಯದ ಒಂದು ಭಾಗವೆಂದು ನೀವು ತಿಳಿದುಕೊಂಡಾಗ ಅದು ತುಂಬಾ ಸುಲಭ. ನೀವು ಅದರ ಕೇಂದ್ರವಾದಾಗ ಮಾತ್ರ ಅದು ಕಠಿಣವಾಗುತ್ತದೆ. ಈಗಿನಂತೆ, ನಾನು ಅದರ ಭಾಗವಾಗಿದ್ದೇನೆ. ಎಲ್ಲರಿಗೆ ಏನಾಗುತ್ತದೆಯೋ ಅದೇ ನನಗೂ ಆಗಲಿದೆ.ನಾನು ಅವರಲ್ಲಿ ಒಬ್ಬ. ನಾನು ಕ್ರಿಕೆಟ್ ಮತ್ತು ಅಡುಗೆ ಮಾಡಿಕೊಳ್ಳುವುದರಲ್ಲಿ ಸಮಯ ಕಳೆಯುತ್ತೇನೆ. - ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಶ್ರಾಂತಿ ಪಡೆಯುತೇನೆ. ನಾನು ಸಂತೋಷವಾಗಿರಲು ಕೆಲಸ ಮಾಡಬೇಕಾಗಿಲ್ಲ" ನಾನು ನಟನೆಯನ್ನು ಆನಂದಿಸುತ್ತೇನೆ ಆದರೆ ಅದು ನನಗೆ ತೃಪ್ತಿಯನ್ನು ನೀಡುತ್ತಿಲ್ಲ ಎಂದು ರಾಜ್ ಹೇಳಿದ್ದಾರೆ.

"777 ಚಾರ್ಲಿ", "ತುರ್ತು ನಿರ್ಗಮನ", ಮತ್ತು "ಏಕಂ"ಎಂಬ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಜ್, ಯಾವುದೇ ನಟನಾ ಕೆಲಸವನ್ನೂ ಕೈಗೆತ್ತಿಕೊಂಡಿಲ್ಲ. “ನಾನು ಚಲನಚಿತ್ರ ಕ್ಷೇತ್ರಕ್ಕೆ ಬಂದಾಗ ನಾನು ನಟನೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದೆ ಮತ್ತು ಕೆಲವು ಉತ್ತಮ ಪಾತ್ರಗಳನ್ನು ಅಭಿನಯಿಸಲು ಸಿಕ್ಕಿತು. ನಾನು ಎಂದಿಗೂ ಪ್ರಮುಖ ಪಾತ್ರಗಳು ಮತ್ತು ಪೋಷಕ ಪಾತ್ರಗಳ ನಡುವೆ ವ್ಯತ್ಯಾಸವನ್ನು ಕಂಡಿಲ್ಲ. . ಹೇಗಾದರೂ, ಸಾಮಾನ್ಯವಾಗಿ, ಪೋಷಕ ಪಾತ್ರಗಳು ಸ್ಕ್ರಿಪ್ಟ್ ಗೆ ಯಾವುದೇ ಮೌಲ್ಯವನ್ನು ಸೇರಿಸುವುದಿಲ್ಲ ಎಂದು ನಾನು ಭಾವಿಸಿದೆ. ಅವುಗಳನ್ನು ಕೇವಲ ಚಿತ್ರದ ಪ್ರಚಾರಕ್ಕಾಗಿ ಬಳಸಲಾಗುತ್ತದೆ. ಇದು ನನಗೆ ನೋವುಂಟು ಮಾಡಿದೆ. ಆದ್ದರಿಂದ, ಎಲ್ಲೋ ನಟನೆ ನನಗೆ ಆ ತೃಪ್ತಿಯನ್ನು ನೀಡಿಲ್ಲ ” ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com