ಲವ್ ಮಾಕ್ಟೇಲ್-2 ಸಿನಿಮಾ ಎರಡನೇ ಹಾಡು ಮೇ 1 ಕ್ಕೆ ರಿಲೀಸ್

ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.
ರಚೇಲ್ ಡೇವಿಡ್
ರಚೇಲ್ ಡೇವಿಡ್

ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.

ನಾಯಕಿಯ ಬಗ್ಗೆ  ಈ ಹಾಡಿನಲ್ಲಿ ರಚೇಲ್ ಡೇವಿಡ್ ಅಭಿನಯಿಸಿದ್ದಾರೆ, ಹೆಣ್ಣಿನ ಪಾಯಿಂಟ್ ಆಫ್ ವ್ಯೂ ನಲ್ಲಿ ಬರೆಯಲಾಗಿದೆ. ಲವ್ ಮಾಕ್ಟೇಲ್ ನಲ್ಲಿ ನಾವು ಈ ರೀತಿಯ ಹಾಡನ್ನು ಸೇರಿಸಲಾಗಿರಲಿಲ್ಲ ಎಂದು ಕೃಷ್ಣ ಹೇಳಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ರಾಘವೇಂದ್ರ ಕಾಮತ್ ಸಾಹಿತ್ಯ ಬರೆದಿದ್ದಾರೆ. ರಮ್ಯಾ ಅವರ ಹಿನ್ನೆಲೆ ಗಾಯನವಿದೆ.

ಲವ್ ಮಾಕ್ಟೇಲ್ 2 ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 12 ದಿನಗಳ ಶೂಟಿಂಗ್ ಬಾಕಿ ಉಳಿದಿದ್ದು, ಸರ್ಕಾರದಿಂದ ಶೂಟಿಂಗ್ ಗೆ ಅನುಮತಿ ನೀಡಿದಾಗ ಉಳಿದ ಭಾಗದ ಶೂಟಿಂಗ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com