ಲವ್ ಯೂ ರಚ್ಚು ಚಿತ್ರದ ಫೈಟರ್ ಸಾವು ಪ್ರಕರಣ: ಸಾಹನ ನಿರ್ದೇಶಕ ಬಂಧನ
ಮಾಸ್ತಿ ಗುಡಿ ನಂತರ ಇದೀಗ ಮತ್ತೊಂದು ಕನ್ನಡ ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಫೈಟರ್ ಓರ್ವ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯಲ್ಲೇ ನಡೆದಿದೆ. "ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ 28 ವರ್ಷದ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ.
Published: 10th August 2021 12:35 AM | Last Updated: 10th August 2021 12:37 AM | A+A A-

ಲವ್ ಯೂ ರಚ್ಚು ಚಿತ್ರದ ಸ್ಟಿಲ್
ರಾಮನಗರ: ಮಾಸ್ತಿ ಗುಡಿ ನಂತರ ಇದೀಗ ಮತ್ತೊಂದು ಕನ್ನಡ ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಫೈಟರ್ ಓರ್ವ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯಲ್ಲೇ ನಡೆದಿದೆ. "ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ 28 ವರ್ಷದ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ.
ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿಯನದ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ರಾಮನಗರ ತಾಲೂಕಿನ ಜೋಗನದೊಡ್ಡಿಯಲ್ಲಿ ನಡೆಯುತಿತ್ತು. ಸ್ಟಂಟ್ ಅನ್ನು ಖಾಸಗಿ ರೆಸಾರ್ಟ್ ಬಳಿ ಚಿತ್ರೀಕರಿಸಲಾಗುತ್ತಿತ್ತು ಮತ್ತು ವಿವೇಕ್ ಮತ್ತು ಸ್ಟಂಟ್ ಸಿಬ್ಬಂದಿ ಆ ಫೈಟ್ ದೃಶ್ಯದ ಭಾಗವಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವು!
ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಸಿಬ್ಬಂದಿ ಮೇಟಲ್ ಕ್ರೇನ್ ಬಳಿಸಿದ್ದರು. ಕ್ರೇನ್ ವಿದ್ಯುತ್ ತಂತಿಗೆ ತಗುಲಿದ್ದರಿಂದ ವಿವೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಚಿತ್ರದ ಸಾಹಸ ನಿರ್ದೇಶಕ ವಿನೋದ್ ಹಾಗೂ ಕ್ರೇನ್ ಚಾಲಕನನ್ನು ಬಂಧಿಸಿದ್ದಾರೆ.