'ಸೆಲ್ಫಿ' ವಿಪತ್ತುಗಳ ಬಗ್ಗೆ ಸಂದೇಶ ಹೊತ್ತು ತರುತ್ತಿದೆ ರವಿ ಅರ್ಜುನ್ ನಿರ್ದೇಶನದ ' ಗ್ರೂಫಿ'!

ಸೆಲ್ಫಿ ಕ್ರೇಜ್ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ರವಿ ಅರ್ಜುನ ಚೊಚ್ಚಲ ನಿರ್ದೇಶನದ ಗ್ರೂಫಿ ಸಿನಿಮಾ ಉತ್ತಮ ಸಂದೇಶ ರವಾನಿಸಲಾಗಿದೆ.
ಗ್ರೂಫಿ ಸಿನಿಮಾ ಸ್ಟಿಲ್
ಗ್ರೂಫಿ ಸಿನಿಮಾ ಸ್ಟಿಲ್

ಸೆಲ್ಫಿ ಕ್ರೇಜ್ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ರವಿ ಅರ್ಜುನ ಚೊಚ್ಚಲ ನಿರ್ದೇಶನದ ಗ್ರೂಫಿ ಸಿನಿಮಾ ಉತ್ತಮ ಸಂದೇಶ ರವಾನಿಸಲಾಗಿದೆ.

ಗ್ರೂಫಿ” ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೆ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು “ಗ್ರೂಫಿ” ಎನ್ನುತ್ತಾರೆ ಈಗಿನ ಯುವಪೀಳಿಗೆ. ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ.ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಮ್ಮ ಚಿತ್ರವನ್ನು ಪ್ರಕೃತಿ ಸೊಬಗಿನೊಂದಿಗೆ ಸುಂದರ ಪಯಣ ಅನ್ನಬಹುದು ಎಂಬುದು ನಿರ್ದೇಶಕ ರವಿ ಅರ್ಜುನ್ ಅವರ ಮಾತು. ಚಿತ್ರದಲ್ಲಿ ಆರು ಹೊಸ ಸ್ಥಳಗಳನ್ನು ತೋರಿಸುವುದಾಗಿ ರವಿ ಅರ್ಜುನ್ ತಿಳಿಸಿದ್ದಾರೆ. ಆಗಸ್ಟ್ 9 ರಂದು ಮೈಸೂರಿನಲ್ಲಿ ಯದುವೀರ ಶ್ರೀಕಂಠದತ್ತ ಒಡೆಯರ್ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 20ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಕೆಜಿ ಸ್ವಾಮಿ ನಿರ್ಮಿಸಿದ ಗ್ರೂಫಿಯಲ್ಲಿ ಹೊಸಬರಾದ ಆರ್ಯನ್ ಎಸ್ ಜಿ, ಪದ್ಮಶ್ರೀ ಸಿ ಜೈನ್, ಗಗನ್, ಉಮಾ ಮಯೂರಿ ಮತ್ತು ಪ್ರಜ್ವಲ್ ಮುಂತಾದವರು ನಟಿಸಿದ್ದಾರೆ. ಗ್ರೂಫಿಗೆ ವಿಜೇತ್ ಕೃಷ್ಣ ಸಂಗೀತ ಮತ್ತು ಅಜಯ ಲಕ್ಷ್ಮೀಕಾಂತ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com