9 ವರ್ಷಗಳ ನಂತರ ಮತ್ತೆ ಬರುತ್ತಿದೆ 'ಎದೆ ತುಂಬಿ ಹಾಡುವೆನು': ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಪುತ್ರ!

ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಆಗಸ್ಟ್ 14ರಿಂದ ಮತ್ತೆ ಪ್ರಸಾರ ಆಗಲಿದೆ. 
ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರು
ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರು

ಬೆಂಗಳೂರು: ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಆಗಸ್ಟ್ 14ರಿಂದ ಮತ್ತೆ ಪ್ರಸಾರ ಆಗಲಿದೆ. 

ಈಟಿವಿಯಲ್ಲಿ ಅಂದು ಎಸ್.ಪಿ. ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಇದು. ಈಗ ದಿವಂಗತ ಎಸ್.ಪಿ.ಬಿ. ಅವರ ಜಾಗದಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಇರುತ್ತಾರೆ. ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇರುತ್ತಾರೆ.

ಇದರ ಜೊತೆಗೆ, ಎಸ ಪಿ ಬಾಲಸುಬ್ರಮಣ್ಯಂ ಅವರ ಮುಂದೆ ಪ್ರದರ್ಶನ ನೀಡಿದ 60 ಸ್ಪರ್ಧಿಗಳು ತೀರ್ಪುಗಾರರ ಸದಸ್ಯರಾಗಿ ಪ್ರದರ್ಶನಕ್ಕೆ ಸೇರುತ್ತಾರೆ. ಕರ್ನಾಟಕದಾದ್ಯಂತ ಸುಮಾರು 16 ಸ್ಪರ್ಧಿಗಳು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ.

ನಾನು ಮೂರು ವರ್ಷಗಳ ಹಿಂದೆ ಚೆನ್ನೈಯಲ್ಲಿ ಎಸ್‌ಪಿಬಿ ಅವರನ್ನು ಭೇಟಿ ಮಾಡಿ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ತಮ್ಮ ವೇಳಾಪಟ್ಟಿ ನೋಡಿ ತಿಳಿಸುತ್ತೇನೆ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019ರಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು, ಆದರೆ ಈಗ ಅವರಿಲ್ಲದೇ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದು ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ.

ಕಾರ್ಯಕ್ರಮದ ಆರಂಭದ ದಿನ ವಾಹಿನಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದೆ. ಈ ಪ್ರದರ್ಶನದಲ್ಲಿ ಹಿಂದಿನ ಕಂತುಗಳಲ್ಲಿ ಎಸ್ ಪಿಬಿ ಬಳಸಿದ ಮೈಕ್ರೊಫೋನ್ ಅನ್ನು ಸಹ ಒಳಗೊಂಡಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com