ತಂದೆ ಶಂಕರ್ ಸಿಂಗ್ ಕುರಿತ ಪುಸ್ತಕದ ಮುಖಪುಟ ಅನಾವರಣಗೊಳಿಸಿದ ರಾಜೇಂದ್ರ ಸಿಂಗ್ ಬಾಬು

ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ಹಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ನಿರ್ಮಾಪಕ ಡಿ ಶಂಕರ್ ಸಿಂಗ್ ಅವರ ಕುರಿತು ಪುಸ್ತಕವನ್ನು ಬರೆಯುತ್ತಿರುವ ಶಂಕರ್ ಸಿಂಗ್ ಪುತ್ರ ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.
ಶಂಕರ್ ಸಿಂಗ್ ಅವರ ಸಿನಿಮಾ ರೆಕಾರ್ಡಿಂಗ್ ಸಮಯದಲ್ಲಿ ರಾಜೇಂದ್ರ ಸಿಂಗ್ ಬಾಬು, ಗಾಯಕಿ ವಾಣಿ ಜಯರಾಂ ಮತ್ತು ರೆಬೆಲ್ ಸ್ಟಾರ್  ಅಂಬರೀಶ್
ಶಂಕರ್ ಸಿಂಗ್ ಅವರ ಸಿನಿಮಾ ರೆಕಾರ್ಡಿಂಗ್ ಸಮಯದಲ್ಲಿ ರಾಜೇಂದ್ರ ಸಿಂಗ್ ಬಾಬು, ಗಾಯಕಿ ವಾಣಿ ಜಯರಾಂ ಮತ್ತು ರೆಬೆಲ್ ಸ್ಟಾರ್ ಅಂಬರೀಶ್

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ಹಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ನಿರ್ಮಾಪಕ ಡಿ ಶಂಕರ್ ಸಿಂಗ್ ಅವರ ಕುರಿತು ಪುಸ್ತಕವನ್ನು ಬರೆಯುತ್ತಿರುವ ಪುತ್ರ ರಾಜೇಂದ್ರ ಸಿಂಗ್ ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಆಗಸ್ಟ್ 15ರಂದು ಶಂಕರ್ ಸಿಂಗ್ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪುಸ್ತಕದ ಮುಖಪುಟದ ಅನಾವರಣ ನಡೆದಿದೆ.

'ಕನ್ನಡ ಚಿತ್ರರಂಗದ ಭೀಷ್ಮ ದಾದಾ ಶಂಕರ್ ಸಿಂಗ್ ಎನ್ನುವ ಶೀರ್ಷಿಕೆಯ ಪುಸ್ತಕ ಕನ್ನಡ ಚಿತ್ರರಂಗದ ನಿರ್ಮಾತೃಗಳಲ್ಲಿ ಒಬ್ಬರು ಎಂದು ಕರೆಯಲಾಗುವ ಶಂಕರ್ ಸಿಂಗ್ ಅವರ ಬದುಕು ಮತ್ತು ಅಂದಿನ ಕಾಲಘಟ್ಟದ ಕುರಿತಾಗಿದೆ. ಖುದ್ದು ಅತ್ಯುತ್ತಮ ಸಿನಿಮಾ ನಿರ್ದೇಶಕರಾದ ರಾಜೇಂದ್ರ ಸಿಂಗ್ ನಾಗರಹೊಳೆ, ಕಿಲಾಡಿಜೋಡಿ, ಬಂಧನ, ಮುತ್ತಿನ ಹಾರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಅವರೀಗ ತಂದೆಯ ಬದುಕಿನ ಕತೆಯನ್ನು ಪುಸ್ತಕವಾಗಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಅವರು 'ಶುರುವಿನಲ್ಲಿ ಚಿತ್ರರಂಗದಲ್ಲಿ ಪರಭಾಷೆಯವರೇ ಪಾರಮ್ಯ ಸಾಧಿಸಿದ್ದರು ಎನ್ನುವ ಸಂಗತಿ ನಮ್ಮ ತಂದೆಗೆ ತಿಳಿದಿತ್ತು. ಹಾಗಿದ್ದೂ ಕನ್ನಡ ಚಿತ್ರ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿದ್ದು ಅವರ ಹೆಗ್ಗಳಿಕೆ. ಸಿನಿಮಾ ತಯಾರಿಸಿದ ನಂತರ ಅದನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗಳ ಸಹಾಯವನ್ನು ಕೇಳುವ ವಾತಾವರಣ ಅಂದಿತ್ತು. ಏಕೆಂದರೆ ಪರಭಾಷೆಯ ಸಿನಿಮಾಗಳನ್ನೇ ಓಡಿಸುತ್ತಿದ್ದ ಚಿತ್ರಮಂದಿರಗಳು ಕನ್ನಡ ಚಿತ್ರವನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ರಾಜಕೀ ವ್ಯಕ್ತಿಗಳ ಸಹಾಯ ಅಂದು ಅನಿವಾರ್ಯವಿತ್ತು' ಎಂದು ಅಂದಿನ ಸಮಯವನ್ನು ಸಿಂಗ್ ಮೆಲುಕು ಹಾಕಿದರು.

ಭಾರತೀಯ ಸಿನಿಮಾರಂಗದ ದಿಗ್ಗಜರಾದ ರಾಜ್ ಕಪೂರ್ ವಿ ಶಾಂತಾರಾಂ ಮೊದಲಾದವರಿಗೆ ತಮ್ಮ ತಂದೆ ಹಾಗೂ ಅವರ ಕೆಲಸದ ಪರಿಚಯ ಇತ್ತು. ಆದರೆ ಕರ್ನಾತಕ ರಾಜ್ಯ ಸರ್ಕಾರಕ್ಕೆ ಶಂಕರ್ ಸಿಂಗ್ ಎಂದರೆ ಯಾರಂದೇ ತಿಳಿದಿಲ್ಲ. ಅವರ ಹೆಸರನ್ನು ಒಂದು ರಸ್ತೆಗೂ ಇರಿಸಿಲ್ಲ ಎಂದಉ ರಾಜೇಂದ್ರ ಸಿಂಗ್ ಬೇಸರ ವ್ಯಕ್ತ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com