ಕರ್ನಾಟಕದ ರಾಜಕೀಯ ಕುರಿತು ಮನ್ಸೋರೆ ಸಿನಿಮಾ: ಪೊಲಿಟಿಕಲ್ ಥ್ರಿಲ್ಲರ್ ನಲ್ಲಿ ಸಾಯಿಪಲ್ಲವಿ!

ಮನ್ಸೋರೆ ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಕುರಿತ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾಗಾಗಿ ತಮಿಳು ನಟಿ ಸಾಯಿಪಲ್ಲವಿ ಜೊತೆ ಮಾತುಕತೆ ನಡೆಸಿದ್ದಾರೆ.
ಸಾಯಿ ಪಲ್ಲವಿ
ಸಾಯಿ ಪಲ್ಲವಿ

ಮನ್ಸೋರೆ ನಿರ್ದೇಶನದ ಆ್ಯಕ್ಟ್ 1978 ಸಿನಿಮಾ ಬಿಡುಗಡೆಯ ನಂತರ ರಾಷ್ಟ್ರವ್ಯಾಪಿ ಮೆಚ್ಚುಗೆಯನ್ನು ಪಡೆಯುವುದಲ್ಲದೆ ಅದರ ಡಿಜಿಟಲ್ ಬಿಡುಗಡೆಯ ಸಮಯದಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಕ್ಟ್ 1978 ರ ಯಶಸ್ಸು ತೆಲುಗು ಚಿತ್ರರಂಗದ ಗಮನವನ್ನೂ ಸೆಳೆಯಿತು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರನ್ನು ತೆಲುಗು ಚಿತ್ರರಂಗದ ಕೆಲವು ಚಲನಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದಾರೆ, ಮನ್ಸೋರೆ ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಕುರಿತ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾಗಾಗಿ ತಮಿಳು ನಟಿ ಸಾಯಿಪಲ್ಲವಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಖಚಿತ ಪಡಿಸಿರುವ ಮನ್ಸೋರೆ,  ಚರ್ಚೆಯು ಬಹಳ ಪ್ರಾಥಮಿಕ ಹಂತದಲ್ಲಿದ್ದು, ಸಾಯಿ ಪಲ್ಲವಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಕಥೆ ಕೇಳಿ ಸಾಯಿ ಪಲ್ಲವಿ ಪ್ರಭಾವಿತರಾಗಿದ್ದು ಫೈನಲ್ ಸ್ಕ್ರಿಪ್ಟ್ ಕಳುಹಿಸುವಂತೆ ನನಗೆ ಕೇಳಿದ್ದಾರೆ, ಮದುವೆಯ ಹಿನ್ನೆಲೆಯಲ್ಲಿ ನಾನು ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದು, ಶೀಘ್ರದಲ್ಲೆ  ಕಥೆಯ ಮೇಲೆ ಕೆಲಸ ಆರಂಭಿಸುತ್ತೇನೆ ಎಂದು ಮನ್ಸೋರೆ ತಿಳಿಸಿದ್ದಾರೆ.

ಮನ್ಸೋರೆ ಆಗಸ್ಟ್ 15 ರಂದು ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅಖಿಲಾ ಅವರನ್ನು ವಿವಾಹವಾದರು. ಫಿದಾ ನಟಿಯೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವ ನಿರ್ದೇಶಕರು, ಕರ್ನಾಟಕದಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಕಥೆ ಬರೆಯುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ತಮ್ಮ ಸಿನಿಮಾ ಕಥೆಯು ಸಾರ್ವತ್ರಿಕವಾಗಿದೆ ಮತ್ತು ಎಲ್ಲಾ ದಕ್ಷಿಣ ಭಾರತದ ಭಾಷೆಗಳಿಗೆ ಉತ್ತಮವಾಗಿದೆ. ಸಾಯಿ ಪಲ್ಲವಿ ಜೊತೆಗಿನ ಚಿತ್ರವು ಶೀಘ್ರದಲ್ಲೇ ಬರಲಿ ಎಂದು ಅವರು ಮನ್ಸೋರೆ ಆಶಿಸಿದ್ದಾರೆ, ಇದರ ನಡುವೆ ಆಕ್ಟ್ 1978 ರ ತೆಲುಗು ಮತ್ತು ಹಿಂದಿ ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com