ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಎಲ್ಲೆಡೆ ಸಂಭ್ರಮ; ನೆನಪು ಬಿಚ್ಚಿಟ್ಟ ಸಿನಿ ತಾರೆಯರು!

ಶುಕ್ರವಾರದ ವರಮಹಾಲಕ್ಷ್ಮಿ ಪೂಜೆಗಾಗಿ ಎಲ್ಲೆಡೆ ಸಂಭ್ರಮ ಕಳೆಕಟ್ಟಿದೆ. ವಿಶ್ವದಾದ್ಯಂತ ಇರುವ ದಕ್ಷಿಣ ಭಾರತೀಯರು ಪೂಜೆ, ಸಿಹಿ ತಿಂಡಿಗಳು ಹಾಗೂ ಹೊಸ ಬಟ್ಟೆಗಳೊಂದಿಗೆ ವರಮಹಾಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್ ನ ಕೆಲ ತಾರೆಯರು ಈ ಹಬ್ಬಕ್ಕೆ ಸಂಬಂಧಿಸಿದ ತಮ್ಮ ಅಪರೂಪದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಯುವತಿಯರು
ಸಾಂಪ್ರದಾಯಿಕ ಉಡುಗೆಯಲ್ಲಿ ಯುವತಿಯರು

ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ ಪೂಜೆಗಾಗಿ ಎಲ್ಲೆಡೆ ಸಂಭ್ರಮ ಕಳೆಕಟ್ಟಿದೆ. ವಿಶ್ವದಾದ್ಯಂತ ಇರುವ ದಕ್ಷಿಣ ಭಾರತೀಯರು ಪೂಜೆ, ಸಿಹಿ ತಿಂಡಿಗಳು ಹಾಗೂ ಹೊಸ ಬಟ್ಟೆಗಳೊಂದಿಗೆ ವರಮಹಾಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್ ನ ಕೆಲ ತಾರೆಯರು ಈ ಹಬ್ಬಕ್ಕೆ ಸಂಬಂಧಿಸಿದ ತಮ್ಮ ಅಪರೂಪದ ನೆನಪುಗಳನ್ನು ಬಿಚ್ಚಿಟ್ಟಿದ್ದು, ಈ ಬಾರಿ ಹಬ್ಬ ಆಚರಿಸಲು ಏನೆಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ಮನ್ಸೂರೆ

ಇತ್ತೀಚಿಗೆ ತನ್ನ ಧೀರ್ಘಕಾಲದ ಗೆಳತಿ ಅಖಿಲಾ ಅವರನ್ನು ವರಿಸಿದ ನಿರ್ದೇಶಕ ಮನ್ಸೂರೆ, ತಮ್ಮ ಕುಟುಂಬದೊಂದಿಗೆ ಮೊದಲ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಕಾತುರರಿಂದ ಕಾಯುತ್ತಿದ್ದಾರೆ. ಮನೆಯಲ್ಲಿ ತಾಯಿ ಮಾಡುವ ಪೂಜೆಯಲ್ಲಿಯೇ ಇಡೀ ದಿನ ಕಳೆಯುತ್ತಿದ್ದಾರೆ. ತಾನು ಬೆಳೆದು ಬಂದದ್ದನ್ನು ತಿಳಿಸಿದ ನಾತಿ ಚರಾಮಿ ಚಿತ್ರ ನಿರ್ದೇಶಕ ಮನ್ಸೂರೆ,  ಲಕ್ಷ್ಮಿ ದೇವತೆಯ ಚಿತ್ರ ಬಿಡಿಸಲು ತಮ್ಮ ತಾಯಿಯನ್ನು ಕೇಳಿದ್ದ ನೆನಪೊಂದನ್ನು ಹಂಚಿಕೊಂಡರು   ನಾನು ಕಲಾ ತರಗತಿಗಳಿಗೆ ಹಾಜರಾಗುತ್ತಿದ್ದೆ ಮತ್ತು ಹಬ್ಬದ ಪ್ರಕಾರ ಚಿತ್ರ ಬಿಡಿಸಲು ನನ್ನ ತಾಯಿ ಹೇಳುತ್ತಿದ್ದರು ಎಂದು ಮನ್ಸೂರೆ ತಿಳಿಸಿದರು.

ಶ್ವೇತಾ ಶ್ರೀವಾತ್ಸವ್: ನಟಿ ಶ್ವೇತಾ ಶ್ರೀವಾತ್ಸವ್ ಹಾಗೂ ಅವರ ಪುತ್ರಿ ಅಶ್ಮಿತಾ ಶ್ರೀ ವಾತ್ಸವ್ ಅವರಿಗೆ ವರಮಹಾಲಕ್ಷ್ಮಿ ಹಬ್ಬ ಸಮನಾದ ಸಿಹಿಯಾದ ಕ್ಷಣವಾಗಿದೆ.  ಇದೇ ಸಂದರ್ಭದಲ್ಲಿ ತನ್ನ ಪುತ್ರಿಯ ಹುಟ್ಟಹುಬ್ಬ ಆಚರಣೆ ಮಾಡುತ್ತಾರೆ. ಈ ಹಬ್ಬಕ್ಕೂ 10 ದಿನಗಳ ಮುಂಚೆ ನನ್ನ ಪುತ್ರಿ ಹುಟ್ಟಿದ್ದು, ಲಕ್ಷ್ಮಿಯ ವರಪ್ರಸಾದ ಎಂಬಂತಾಗಿದೆ. ಮನೆಯಲ್ಲಿರುವ ಪ್ರತಿಯೊಂದು ಹೆಣ್ಣು ಮಗು ಲಕ್ಷ್ಮಿಗೆ ಸಮಾನ ಎಂದು ನಂಬುವುದಾಗಿ ಹೇಳಿದರು. ಬೆಳೆಯುತ್ತಿದ್ದಂತೆ ಸ್ನೇಹಿತರು, ಕುಟುಂಬಸ್ಥರು ಬರಲು ಹೆಚ್ಚಾದಂತೆ ಹಬ್ಬದ ಖುಷಿ ಮತ್ತಷ್ಟು ಹೆಚ್ಚಾಗಿತ್ತು. ಪ್ರತಿಯೊಬ್ಬರು ಒಟ್ಟಾಗಿ ಕುಳಿತು ಒಳ್ಳೆಯ ಊಟ ಸೇವಿಸುತ್ತಿದ್ದೇವು. ಆತ್ಮೀಯರೊಂದಿಗಿನ ಆಚರಣೆಯು ಸಾಕಷ್ಟು ಸಂತೋಷವನ್ನುಂಟು ಮಾಡುತಿತ್ತು ಎಂದು ನೆನಪಿಸಿಕೊಂಡರು.

ಆಶ್ಮಿತಾಗೆ ಈಗ ನಾಲ್ಕು ವರ್ಷವಾಗಿದ್ದು, ಪೂಜೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಾಗ್ಯೂ, ಈಗ ಎಲ್ಲವೂ ದಿಜಿಟಲ್ ದಿನಗಳಾಗಿ ಬದಲಾಗಿದ್ದು, ಸಂಪ್ರದಾಯದ ಮಹತ್ವವನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕಾಗಿದೆ.  ಹಬ್ಬದ ಸಂದರ್ಭಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯಾಸವನ್ನು  ಆನುವಂಶಿಕವಾಗಿ ಪಡೆಯಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ಹಬ್ಬಗಳನ್ನು ಆಚರಿಸಲು ನಾವು ಇಷ್ಟಪಡುತ್ತೇವೆ ಎಂದು ಅವರು ಹೇಳಿದರು.

ವೈನಿಧಿ ಜಗದೀಶ್: ನಟಿ ವೈನಿಧಿ ಜಗದೀಶ್ ಅವರ ಅಜ್ಜಿ ಈ ವರ್ಷದ ಆರಂಭದಲ್ಲಿ ತೀರಿಹೋದ ಕಾರಣ ಈ ವರ್ಷ ಹಬ್ಬ  ಅಷ್ಟಾಗಿ ಇರುವುದಿಲ್ಲ. ಆಚರಣೆಗಳು ಕಡಿಮೆಯಾಗಿರುತ್ತವೆ, ಮನೆಯಲ್ಲಿ ಸಾಮಾನ್ಯ ಪೂಜೆಯನ್ನು ಮಾತ್ರ ಮಾಡುತ್ತೇವೆ ಎಂದು ಹೇಳಿದರು. ಅಜ್ಜಿ ಜೀವಂತವಾಗಿದ್ದಾಗ ಆಚರಿಸಲಾಗುತ್ತಿದ್ದ ವರಮಹಾಲಕ್ಷ್ಮಿ ಹಬ್ಬದ ಭವ್ಯವಾದ ದಿನಗಳನ್ನು ನೆನಪಿಸಿಕೊಂಡ ಜಗದೀಶ್,  ಅಜ್ಜಿ ಬೇಗನೆ ಎದ್ದು ಬಿಸಿ ಎಣ್ಣೆ ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದರು. ನಮ್ಮ ಹಿತ್ತಲಲ್ಲಿ ಮಾವಿನ ಮರವಿದೆ; ನಾವು ಎಲೆಗಳನ್ನು ಕಿತ್ತು ಬಾಗಿಲಿಗೆ ಕಟ್ಟುತ್ತಿದ್ದೆವು. ನಾವು ಅವಳ ಒಬಟ್ಟು, ಪಾಯಸ ಮತ್ತು ಪುಲಾವ್ ನಂತಹ ಭಕ್ಷ್ಯಗಳನ್ನು ಸವಿಯುತ್ತಿದ್ದೆವು. ಅಜ್ಜಿ ರಂಗೋಲಿ ಮಾದರಿಗಳನ್ನು ಹೇಗೆ ಬಿಡಿಸಬೇಕು ಎಂದು ಕಲಿಸುತ್ತಿದ್ದರು. ಮುಂದಿನ ವರ್ಷಗಳಲ್ಲಿ ಸಂಪ್ರದಾಯವನ್ನು ಮುಂದುವರಿಸುವುದು ಮತ್ತು ಅಜ್ಜಿಯನ್ನು ನೆನಪಿಸಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ ಎಂದು ಜಗದೀಶ್ ಹಂಚಿಕೊಂಡರು.

ಸೂರಜ್ ಗೌಡ: ನಟ ಸೂರಜ್ ಗೌಡ ಯಾವಾಗಲೂ ಮೈಸೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತಾರೆ. ಏಕೆಂದರೆ ಅವರ ಕುಟುಂಬ ಅಲ್ಲಿಯೇ ವಾಸಿಸುತ್ತಿದೆ.  ನಾವು ಬೆಳಿಗ್ಗೆ ಪೂಜೆಗೆ ಮನೆಯನ್ನು ಅಲಂಕರಿಸುತ್ತೇವೆ. ಸಂಜೆ ವೇಳೆ ಸಂಬಂಧಿಕರು ಮನೆಗೆ ಬಂದಾಗ ಉಡುಗೂರೆ ನೀಡುತ್ತೇವೆ. ಈ ಶುಕ್ರವಾರ ಹಬ್ಬ ಆಚರಿಸುವುದನ್ನು ಎದುರು ನೋಡುತ್ತಿದ್ದೇನೆ. ಆಗ ನನ್ನ ತಾಯಿ ಪೂಜೆಯ ಸಿದ್ಧತೆಯಲ್ಲಿ ಬ್ಯುಸಿಯಾಗುವುದರಿಂದ ಎಲ್ಲಾ ವೇಳೆಯಲ್ಲೂ ಓದು ಎಂದು ಹೇಳುವುದು ತಪ್ಪುತ್ತದೆ ಎಂದು ನಗುತ್ತಾ ಹೇಳಿದ ಸೂರಜ್ ಗೌಡ, ನನ್ನ ತಾಯಿ ಉತ್ತಮ ಅಡುಗೆ  ಮತ್ತು ವಿವಿಧ ರೀತಿಯ ಸಿಹಿ ತಿಂಡಿ ಮಾಡುತ್ತಾರೆ.ಸಂಬಂಧಿಗಳೊಂದಿಗೆ ಸಾಕಷ್ಟು ಆಟಗಳನ್ನು ಆಡುವುದು ಕೂಡ ಈ ದಿನಗಳಲ್ಲಿ ನನ್ನ ನೆಚ್ಚಿನ ನೆನಪುಗಳಲ್ಲಿ ಒಂದಾಗಿದೆ ಎಂದು ಸೂರಜ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com