ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದ 'ಆವರ್ತ' ಮೂಲಕ ಕನ್ನಡಕ್ಕೆ ಧನ್ವಿತ್ ಎಂಟ್ರಿ
ಯುವ ಉದ್ಯಮಿ ಧನ್ವಿತ್ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡಿದ್ದಾರೆ. ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
Published: 25th August 2021 10:21 AM | Last Updated: 25th August 2021 10:21 AM | A+A A-

ಧನ್ವಿತ್
ಯುವ ಉದ್ಯಮಿ ಧನ್ವಿತ್ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡಿದ್ದಾರೆ. ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಧನ್ವಿತ್ ಈ ಸಿನಿಮಾದಲ್ಲಿ ಸಿಬಿಐ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೈತರ ಮಗನಾಗಿ ಬೆಳೆದು, ಇಂದಿನ ಚಿತ್ರರಂಗಕ್ಕೆ ಬೇಕಾದ ಅಭಿನಯ ಕಲೆ ಬೆಳೆಸಿಕೊಂಡು ತನ್ನ ಪ್ರಥಮ ಪಾದಾರ್ಪಣೆ ಯಲ್ಲೆ ಕನ್ನಡ ಚಲನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುವುದು ನನ್ನ ಅದೃಷ್ಟ ಆವರ್ತದಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ನನಗೆ ನಟನಾ ಶಾಲೆಗೆ ಹೋಗುವ ಅನುಭವವಾಗಿತ್ತು.
ವೇಮಗಲ್ ಜಗನ್ನಾಥ್ ರಾವ್ ಅವರು ನನಗೆ ಉತ್ತಮ ಪ್ರೋತ್ಸಾಹ ನೀಡಿದರು. ನಾನು ಇನ್ನೊಂದು ಪ್ರಾಜೆಕ್ಟ್ ಗೆ ಸಹಿ ಮಾಡಿದ್ದು ಶೀಘ್ರದಲ್ಲೇ ಅದರ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಾಗುವುದು ಎಂದು ಧನ್ವಿತ್ ಹೇಳಿದ್ದಾರೆ.
ಅವರ್ತ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಟೀಸರ್ ಮತ್ತು ಆಡಿಯೋವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಯೋಜನೆ ರೂಪಿಸುತ್ತಿದ್ದಾರೆ. ಚಿತ್ರಕ್ಕೆೆ ಅತಿಶ್ಯ ಜೈನ್ ಸಂಗೀತ ನೀಡಿದ್ದಾರೆ ಮಲ್ಲಿಕಾರ್ಜುನ್ ಛಾಯಾಗ್ರಾಹಣವಿದೆ.