'ಮೇಡ್ ಇನ್ ಬೆಂಗಳೂರು' ಸಿಲಿಕಾನ್ ಸಿಟಿಯ ಮಾತೃ ಮನೋಭಾವಕ್ಕೊಂದು ಟ್ರಿಬ್ಯೂಟ್

ನಿರ್ದೇಶಕ ಪ್ರದೀಪ್ ಶಾಸ್ತ್ರಿ ಅವರು ಬೆಂಗಳೂರಿನ ಕುರಿತಂತೆ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರದ ಹೆಸರು ‘ಮೇಡ್ ಇನ್ ಬೆಂಗಳೂರು’. ಪ್ರದೀಪ್ ಶಾಸ್ತ್ರಿಯ ಮುಂಬರುವ ಚಿತ್ರದಲ್ಲಿ ಅನಂತ್ ನಾಗ್, ಸಾಯಿಕುಮಾರ್...
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಬೆಂಗಳೂರು: ನಿರ್ದೇಶಕ ಪ್ರದೀಪ್ ಶಾಸ್ತ್ರಿ ಅವರು ಬೆಂಗಳೂರಿನ ಕುರಿತಂತೆ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರದ ಹೆಸರು ‘ಮೇಡ್ ಇನ್ ಬೆಂಗಳೂರು’. ಪ್ರದೀಪ್ ಶಾಸ್ತ್ರಿಯ ಮುಂಬರುವ ಚಿತ್ರದಲ್ಲಿ ಅನಂತ್ ನಾಗ್, ಸಾಯಿಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ಆಸಕ್ತಿದಾಯಕ ತಾರಾಗಣ ಹೊಂದಿದೆ.

ಮಧುಸೂದನ್ ಗೋವಿಂದ್ ನಾಯಕನಾಗಿ ನಟಿಸಿರುವ ಈ ಚಿತ್ರ ರಜನಿ ‘ಥರ್ಸ್ಡೇ ಸ್ಟೋರೀಸ್’ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. 

ಬೆಂಗಳೂರಿನಲ್ಲಿ ಹುಟ್ಟಿಬೆಳೆದವರಷ್ಟೇ‌ ಅಲ್ಲದೇ ಬೇರೆ ‌ಊರಿನವರಿಗೂ ಆಶ್ರಯ ನೀಡಿ ತಾಯಿಸ್ಥಾನದಲ್ಲಿರುವ ಸಿಲಿಕಾನ್ ಸಿಟಿಯ ಮಾತೃ ಮನೋಭಾವಕ್ಕೆ ಈ ಚಿತ್ರ ಗೌರವ ಸಲ್ಲಿಸಲಿದೆ ಎಂದು ಕಿರುಚಿತ್ರಗಳು ಮತ್ತು ವಾಣಿಜ್ಯ ಜಾಹೀರಾತುಗಳನ್ನು ನಿರ್ದೇಶಿಸಿರುವ ಪ್ರದೀಪ್ ಶಾಸ್ತ್ರಿ ಅವರು ಹೇಳಿದ್ದಾರೆ.

ಇದೊಂದು ಸಾಮಾಜಿಕ ಡ್ರಾಮಾ ಆಗಿದ್ದು, ಶತಮಾನಗಳಿಂದ ಸಂಸ್ಕೃತಿಗಳ ಮಿಲನವಾಗಿರುವ ಸ್ಥಳ ಇದು. ನಗರದ ಜಾನಪದವನ್ನು ಅದರ ಭಾಷೆಯಲ್ಲಿಯೇ ನಿರೂಪಿಸಲು ಇದು ನಮ್ಮ ಕೊನೆಯ ಪ್ರಯತ್ನವಾಗಿದೆ. " ಈ ನಗರ ಹೊರಗಿನವರಿಗೆ ನಮ್ಮ 'ಮನೆ' ಎಂದು ಕರೆಯಲು ಪ್ರೇರೇಪಿಸುತ್ತದೆ. ಕನಸು, ಹತಾಶೆ ಮತ್ತು ವಿಧಿಯ ತಿರುವುಗಳ ನಡುವೆ ಸಿಲುಕಿರುವ ಈ ಚಿತ್ರದಲ್ಲಿ ನಟ ಮಧುಸೂದನ್ ಅವರು ಸ್ಪೋರ್ಟಿ ಸ್ಟಾರ್ಟ್ ಅಪ್ ಸಂಸ್ಥಾಪಕ ಸುಹಾಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

ಪುನೀತ್ ಮಾಂಜ, ವಂಶಿಧರ್, ಹಿಮಾಂಶಿ ವರ್ಮ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಶಂಕರಮೂರ್ತಿ, ವಿನೀತ್, ರಮೇಶ್ ಭಟ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com