ಹ್ಯಾರಿ ಪಾಟರ್ ಹುಟ್ಟಿದ ಮನೆಯಲ್ಲಿ ಬೆಂಕಿ ಅವಘಡ

60ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ, 12 ಫೈರ್ ಎಂಜಿನ್ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ಆರಿಸುವ ಕೆಲಸದಲ್ಲಿ ನಿರತವಾಗಿವೆ.
ಬೆಂಕಿ ಆರಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿ
ಬೆಂಕಿ ಆರಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿ

ಲಂಡನ್: ಕಾಲ್ಪನಿಕ ಕಥಾಲೋಕ ಸರಣಿಯ ಕಥಾನಾಯಕ ಹ್ಯಾರಿ ಪಾಟರ್ ಹುಟ್ಟಿದ ಎಡಿನ್ ಬರ್ಗ್ ನಲ್ಲಿನ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. 

ಹ್ಯಾರಿ ಪಾಟರ್ ಕಾಲ್ಪನಿಕ ಪಾತ್ರ, ಆದರೆ ನಿಜ ಜೀವನದಲ್ಲಿ ಆತನ ಮನೆಗೆ ಬೆಂಕಿ ತಗುಲಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಭವಿಸುವುದು ಸಹಜ. ಹೇಳಬೇಕೆಂದರೆ ಬೆಂಕಿ ಅವಘಡ ಸಂಭವಿಸಿರುವುದು ಒಂದು ಪುಟ್ಟ ಕಾಫಿ ಹೋಟೆಲಿನಲ್ಲಿ. 

ಈಗ ಹ್ಯಾರಿ ಪಾಟರ್ ಕಾಫಿ ಹೋಟೆಲಿನಲ್ಲಿ ಹುಟ್ಟಿದ್ದು ಹೇಗೆ ಎನ್ನುವ ಗೊಂದಲ ಮೂಡುವುದು ಸಹಜ. ಅಸಲಿಗೆ ಎಡಿನ್ ಬರ್ಗ್ ನಲ್ಲಿನ 'ಎಲಿಫೆಂಟ್ ಹೌನ್' ಎನ್ನುವ ಕಾಫಿ ತಾಣಕ್ಕೆ ಬೆಂಕಿ ತಗುಲಿದೆ. 

ಹ್ಯಾರಿ ಪಾಟರ್ ಲೇಖಕಿ ಜೆ.ಕೆ.ರೋಲಿಂಗ್ ಹ್ಯಾರಿ ಪಾಟರ್ ಪುಸ್ತಕಗಳನ್ನು ಮೊದಲು ಬರೆದಿದ್ದು ಇದೇ ಸ್ಥಳದಲ್ಲಿ. ಹೀಗಾಗಿ ಈ ಪುಟ್ಟ ಹೋಟೆಲ್ ಹ್ಯಾರಿ ಪಾಟರ್ ಜನ್ಮಸ್ಥಳ ಎಂದೇ ಜನಪ್ರಿಯಾಗಿತ್ತು. 

ಜಗತ್ತಿನಾದ್ಯಂತ ಹ್ಯಾರಿ ಪಾಟರ್ ಅಭಿಮಾನಿಗಳು ಇಲ್ಲಿಗೆ ಭೇಟಿ ನೀಡಿ ಹ್ಯಾರಿ ಪಾಟರ್ ನನ್ನು ಕಂಡಷ್ಟೇ ಸಂತಸ ಪಡುತ್ತಿದ್ದರು.

60ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ, 12 ಫೈರ್ ಎಂಜಿನ್ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ಆರಿಸುವ ಕೆಲಸದಲ್ಲಿ ನಿರತವಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com