ಸೆಪ್ಟೆಂಬರ್ 1 ರಂದು ‘ಭಜರಂಗಿ 2’ ಟ್ರೈಲರ್ ರಿಲೀಸ್

ಗಣೇಶ ಹಬ್ಬಕ್ಕೆ ಥಿಯೇಟರ್ ಗೆ ಬರಲಿರುವ ಭಜರಂಗಿ 2 ಚಿತ್ರದ ಟ್ರೈಲರ್ ಇದೇ ಸೆಪ್ಟೆಂಬರ್ 1 ರಂದು ಅಂದರೆ ಮುಂದಿನ ಬುಧವಾರ ಸಂಜೆ 6 ಗಂಟೆಗೆ ಲಾಂಚ್ ಆಗಲಿದೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್

ಬೆಂಗಳೂರು: ಗಣೇಶ ಹಬ್ಬಕ್ಕೆ ಥಿಯೇಟರ್ ಗೆ ಬರಲಿರುವ ಭಜರಂಗಿ 2 ಚಿತ್ರದ ಟ್ರೈಲರ್ ಇದೇ ಸೆಪ್ಟೆಂಬರ್ 1 ರಂದು ಅಂದರೆ ಮುಂದಿನ ಬುಧವಾರ ಸಂಜೆ 6 ಗಂಟೆಗೆ ಲಾಂಚ್ ಆಗಲಿದೆ.

ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿದೆ. ಚಿತ್ರರಂಗವೂ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹೊಂದಿದೆ.

ಲಾಕ್ ಡೌನ್ ಬಳಿಕ ಸ್ಟಾರ್ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಚಿತ್ರರಂಗಕ್ಕಿದ್ದರೆ, ಇದು ನಿರೀಕ್ಷೆಗೆ ತಕ್ಕ ಸಿನಿಮಾವಾಗಿರಲಿದೆ ಎಂಬ ಭರವಸೆಯನ್ನು ಪ್ರೇಕ್ಷಕರು ಹೊಂದಿದ್ದಾರೆ. ಸುಮಾರು 350 ಚಿತ್ರಮಂದಿರಗಳಲ್ಲಿ ಭಜರಂಗಿ 2 ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.

ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್‌, ಜಾಕಿ ಭಾವನಾ, ಶ್ರುತಿ ಸೇರಿದಂತೆ ವಿಶೇಷವಾದ ತಾರಾಗಣವಿದ್ದು, ಅದ್ದೂರಿ ಮೇಕಿಂಗ್‌, ಶಿವಣ್ಣ ಲುಕ್‌ಗಳು ಭಿನ್ನವಾಗಿರುವ ಕಾರಣ ಪ್ರೇಕ್ಷಕರು ಫಿದಾ ಆಗೋದು ಖಚಿತ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com