ದಯವಿಟ್ಟು 'ತಲಾ' ಎಂದು ಕರೆಯುವುದನ್ನು ನಿಲ್ಲಿಸಿ: ಅಭಿಮಾನಿಗಳಿಗೆ ಅಜಿತ್ ಕುಮಾರ್ ಮನವಿ
ಕಾಲಿವುಡ್ ನಟ ಅಜಿತ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದು ತಮ್ಮನ್ನು ತಲಾ ಎಂಬ ಬಿರುದಿನಿಂದ ಕರೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
Published: 01st December 2021 06:32 PM | Last Updated: 01st December 2021 06:32 PM | A+A A-

ಅಜಿತ್ ಕುಮಾರ್
ಕಾಲಿವುಡ್ ನಟ ಅಜಿತ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದು ತಮ್ಮನ್ನು ತಲಾ ಎಂಬ ಬಿರುದಿನಿಂದ ಕರೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಅಜಿತ್ ಕುಮಾರ್ 'ಮಾಧ್ಯಮಗಳ ಗೌರವಾನ್ವಿತ ಸದಸ್ಯರಿಗೆ, ಸಾರ್ವಜನಿಕರಿಗೆ ಮತ್ತು ನಿಜವಾದ ಅಭಿಮಾನಿಗಳಿಗೆ. ನಾನು ಇನ್ನು ಮುಂದೆ ಅಜಿತ್, ಅಜಿತ್ ಕುಮಾರ್ ಅಥವಾ ಕೇವಲ ಎಕೆ ಎಂದು ಉಲ್ಲೇಖಿಸಲು ಬಯಸುತ್ತೇನೆ. ನನ್ನ ಹೆಸರಿನ ಮುಂದೆ 'ತಲಾ' ಅಥವಾ ಯಾವುದೇ ಬಿರುದನ್ನು ಉಲ್ಲೇಖಿಸುವುದನ್ನುಇಚ್ಛಿಸುವುದಿಲ್ಲ. ಉತ್ತಮ ಆರೋಗ್ಯ, ಸಂತೋಷ, ಯಶಸ್ಸು, ಮನಸ್ಸಿನ ಶಾಂತಿ ಮತ್ತು ಸಂತೃಪ್ತಿಯಿಂದ ಕೂಡಿದ ಎಲ್ಲಾ ಸುಂದರ ಜೀವನವು ಅಭಿಮಾನಿಗಳಿಗೆ ಸಿಗಲಿ ಎಂದು ನಟ ಹಾರೈಸಿದ್ದಾರೆ. ಈ ಟಿಪ್ಪಣಿಯನ್ನು ಅಜಿತ್ ಅವರ ಪಿಆರ್ ಸುರೇಶ್ ಚಂದ್ರ ಅವರು ಟ್ವೀಟ್ ಮಾಡಿದ್ದಾರೆ.
— Suresh Chandra (@SureshChandraa) December 1, 2021
ಅಜಿತ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ 'ತಲಾ' ಎಂದು ಕರೆಯುತ್ತಾರೆ. ಇದು ಅವರ 2001ರ ಬ್ಲಾಕ್‌ಬಸ್ಟರ್ ಚಲನಚಿತ್ರ 'ಧೀನಾ' ನಂತರ ಅವರು ಗಳಿಸಿದ ಅಡ್ಡಹೆಸರು.
ಏತನ್ಮಧ್ಯೆ, ಅಜಿತ್ ಅಭಿನಯದ 'ವಲಿಮೈ' 2022ರ ಪೊಂಗಲ್ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಎಚ್ ವಿನೋದ್ ಬರೆದು ನಿರ್ದೇಶಿಸಿದ್ದಾರೆ.
ಈ ಮೊದಲು, ಚಿತ್ರವನ್ನು 2020ರ ನವೆಂಬರ್ ತಿಂಗಳ ದೀಪಾವಳಿಯೊಂದಿಗೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ಆದಾಗ್ಯೂ, ಕೋವಿಡ್ ಸಾಂಕ್ರಾಮಿಕದಿಂದಾಗಿ ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಚಿತ್ರದ ಬಿಡುಗಡೆ ವಿಳಂಬವಾಯಿತು. ಚಿತ್ರದಲ್ಲಿ ಹುಮಾ ಖುರೇಷಿ ಮತ್ತು ಕಾರ್ತಿಕೇಯ ಗುಮ್ಮಕೊಂಡ ಕೂಡ ನಟಿಸಿದ್ದಾರೆ.
'ವಲಿಮೈ' ಚಿತ್ರೀಕರಣದ ಅಂತಿಮ ಹಂತದ ಸಮಯದಲ್ಲಿ, ಅಜಿತ್ ರಷ್ಯಾದಾದ್ಯಂತ ಮೋಟಾರ್‌ಸೈಕಲ್ ರೋಡ್‌ಟ್ರಿಪ್‌ನಲ್ಲಿ ಕಾಣಿಸಿಕೊಂಡರು.