ಭಾರತದಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆ ದರ ಇಳಿಕೆ; ಮಾಸಿಕ ಬೇಸಿಕ್ ಪ್ಲ್ಯಾನ್ ವಿವರ ಹೀಗಿದೆ...

ಭಾರತದಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆ ದರ ಇಳಿಕೆಯಾಗಿದ್ದು, ಶೇ.60 ರಷ್ಟು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ.
ನೆಟ್ಫ್ಲಿಕ್ಸ್
ನೆಟ್ಫ್ಲಿಕ್ಸ್

ನವದೆಹಲಿ: ಭಾರತದಲ್ಲಿ ನೆಟ್ಫ್ಲಿಕ್ಸ್ ಚಂದಾದಾರಿಕೆ ಶುಲ್ಕ (ದರ) ಇಳಿಕೆಯಾಗಿದ್ದು, ಶೇ.60 ರಷ್ಟು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ. ದೇಶದಲ್ಲಿ ಒಟಿಟಿ ವೇದಿಕೆಗಳ ನಡುವೆ ಪೈಪೋಟಿ ಹೆಚ್ಚುತ್ತಿರುವುದರ ಪರಿಣಾಮ ನೆಟ್ಫ್ಲಿಕ್ಸ್ ಈ ಕ್ರಮಕ್ಕೆ ಮುಂದಾಗಿದೆ. 

ಪರಿಷ್ಕೃತ ದರಗಳ ಪ್ರಕಾರ ನೆಟ್ಫ್ಲಿಕ್ಸ್ ಮೊಬೈಲ್ ಗೆ ಈ ಹಿಂದಿದ್ದ ಮಾಸಿಕ 199 ರೂಪಾಯಿ ಶುಲ್ಕವನ್ನು ಈಗ 149 ರೂಪಾಯಿಗಳಿಗೆ ಇಳಿಸಲಾಗಿದೆ. ಬೇಸಿಕ್ ಯೋಜನೆಯನ್ನು 499 ರೂಪಾಯಿಗಳಿಂದ 199 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ.

ಸ್ಟಾಂಡರ್ಡ್ ಯೋಜನೆಯನ್ನು ಮಾಸಿಕ, ರೂಪಾಯಿ 499ಕ್ಕೆ ಹಾಗೂ ಪ್ರೀಮಿಯಮ್ ಯೋಜನೆಯನ್ನು ರೂಪಾಯಿ 649 ಕ್ಕೆ ನಿಗದಿಪಡಿಸಲಾಗಿದೆ. ಈ ಯೋಜನೆಗಳಿಗೆ ಈ ಹಿಂದಿನ ಶುಲ್ಕ ಅನುಕ್ರಮವಾಗಿ ರೂಪಾಯಿ 649  ಹಾಗೂ 799 ಕ್ಕೆ ನಿಗದಿಪಡಿಸಲಾಗಿತ್ತು.

ಅತಿ ಹೆಚ್ಚಿನ ಕಡಿತ ಅಂದರೆ ಶೇ.60 ರಷ್ಟನ್ನು ಬೇಸಿಕ್ ಯೋಜನೆಯಲ್ಲಿ ಕಡಿತಗೊಳಿಸಲಾಗಿದೆ. ದೊಡ್ಡ ಪರದೆ ಅಥವ ಇನ್ನು ಯಾವುದೇ ಸಾಧನಗಳಲ್ಲಿ ಜನತೆ ನೋಡಬೇಕೆಂಬುದು ನಮ್ಮ ಆಷಯ ಎಂದು ನೆಟ್ಫ್ಲಿಕ್ಸ್ ಉಪಾಧ್ಯಕ್ಷ-ಕಂಟೆಂಟ್ (ಭಾರತ) ಮೋನಿಕಾ ಶೆರ್ಗಿಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com