ಜೀ5 ಅಂಗಳದಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಸೂಪರ್ ಹಿಟ್ ಸಿನಿಮಾ ಸಾಲು!
ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಹೊಸ ಕನ್ನಡ ಸಿನಿಮಾಗಳ ಕೊರತೆ ಕಾಣುತ್ತಿದೆ ಎನ್ನುವ ದೂರು ಕೇಳಿಬರುತ್ತಿರುವ ಹೊತ್ತಿನಲ್ಲೇ ಜೀ5ನಲ್ಲಿ ಕನ್ನಡದ ಹೊಸ ಹಿಟ್ ಸಿನಿಮಾಗಳು ತೆರೆಕಾಣುತ್ತಿರುವುದು ವಿಶೇಷ.
Published: 26th December 2021 04:30 PM | Last Updated: 26th December 2021 04:33 PM | A+A A-

ಸಾಂದರ್ಭಿಕ ಚಿತ್ರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕುಟುಂಬಸಮೇತ ನೋಡಬಹುದಾದ ಭಜರಂಗಿ-2 ಸಿನಿಮಾಗೆ ಮೆಚ್ಚುಗೆಯೂ ಸಿಗುತ್ತಿದೆ. ಅಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಕನ್ನಡಿಗ' ಸಿನಿಮಾ ಕೂಡಾ ಜೀ5ನಲ್ಲಿ ಸೇರ್ಪಡೆಗೊಂಡಿದೆ. ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ವಿಶೇಷ ಗೆಟಪ್ ನಲ್ಲಿ ಗಮನಸೆಳೆದಿದ್ದರು.
ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ
ವಿಭಿನ್ನ ಚಿತ್ರಪ್ರಕಾರಗಳ ಸಿನಿಮಾ ತಯಾರಿಗೆ ಹೆಸರಾದ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ರಾಜ್ ಶೆಟ್ಟಿ ನಿರ್ದೇಶನ/ ನಟನೆಯಲ್ಲಿ ಮೂಡಿಬಂದಿದ್ದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೂಡಾ ಜೀ5 ಪಾಲಾಗಿದ್ದು, ಸದ್ಯದಲ್ಲಿಯೇ ಜೀ5 ಒಟಿಟಿ ಫ್ಲಾಟ್ ಫಾರಂನಲ್ಲಿ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: 'ಹೆಡ್ ಬುಷ್' ನಲ್ಲಿ ಪ್ರೊಫೆಸರ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ!
ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಹೊಸ ಕನ್ನಡ ಸಿನಿಮಾಗಳ ಕೊರತೆ ಕಾಣುತ್ತಿದೆ ಎನ್ನುವ ದೂರು ಕೇಳಿಬರುತ್ತಿರುವ ಹೊತ್ತಿನಲ್ಲೇ ಜೀ5ನಲ್ಲಿ ಕನ್ನಡದ ಹೊಸ ಹಿಟ್ ಸಿನಿಮಾಗಳು ತೆರೆಕಾಣುತ್ತಿರುವುದು ವಿಶೇಷ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ