ಬುರ್ಜ್ ಖಲೀಫಾ ಮೇಲೆ 3 ನಿಮಿಷದ ವಿಡಿಯೋ: ಕಿಚ್ಚನ 'ವಿಕ್ರಾಂತ್ ರೋಣ'ಗೆ ಖರ್ಚಾಗಿದ್ದೆಷ್ಟು ಗೊತ್ತೆ?

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶನಗೊಂಡಿದ್ದನ್ನು ಸ್ಯಾಂಡಲ್ ವುಡ್ ನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 

Published: 01st February 2021 04:57 PM  |   Last Updated: 01st February 2021 04:57 PM   |  A+A-


How Much it Cost to Light Up Kiccha Sudeep's Journey on Burj Khalifa, World's Tallest Building?

ಬುರ್ಜ್ ಖಲೀಫಾ ಮೇಲೆ 3 ನಿಮಿಷದ ವಿಡಿಯೋ: ಕಿಚ್ಚನ 'ವಿಕ್ರಾಂತ್ ರೋಣ'ಗೆ ಖರ್ಚಾಗಿದ್ದೆಷ್ಟು ಗೊತ್ತೆ?

Posted By : Srinivas Rao BV
Source : Online Desk

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶನಗೊಂಡಿದ್ದನ್ನು ಸ್ಯಾಂಡಲ್ ವುಡ್ ನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 

ತಮ್ಮ ನೆಚ್ಚಿನ ನಟ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿರುವ ಸಂದರ್ಭದಲ್ಲೇ ವಿಕ್ರಾಂತ್ ರೋಣದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶನಗೊಂಡಿದ್ದು ಈ ಸಂತಸವನ್ನು ಇಮ್ಮಡಿಗೊಳಿಸಿದೆ. 

ಬುರ್ಜ್ ಖಲೀಫಾ ಮೇಲೆ 3 ಟೀಸರ್ ನಿಮಿಷಗಳ ಟೀಸರ್ ಪ್ರದರ್ಶನಕ್ಕೆ ಆದ ಖರ್ಚೆಷ್ಟು?

ಸಾಮಾನ್ಯವಾಗಿ ಬುರ್ಜ್ ಖಲೀಫಾ ಮೇಲೆ ವಿಡಿಯೋ ಪ್ರದರ್ಶನವಾಗುವ ವೆಚ್ಚ ದುಬಾರಿಯಾಗಿರಲಿದ್ದು ವಾಲ್ಟ್ ಡಿಸ್ನಿ ತನ್ನ ದಿ ಲಯನ್ ಕಿಂಗ್ ಹಾಗೂ ಆವೆಂಜರ್ಸ್, ಎಂಡ್ ಗೇಮ್ ಚಿತ್ರಗಳಿಗೆ ಈ ರೀತಿ ಬುರ್ಜ್ ಖಲೀಫಾ ಮೇಲೆ ಪ್ರಚಾರ ಮಾಡಿತ್ತು.  

ಈಗ ವಿಕ್ರಾಂತ್ ರೋಣ ಚಿತ್ರತಂಡ ಇಂತದ್ದೇ ಹಾದಿಯನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲೂ ವಾರಾಂತ್ಯಗಳಲ್ಲಿ ಇದರ ಬೆಲೆ ಎಂದಿಗಿಂತಲೂ ಹೆಚ್ಚಾಗಿರುತ್ತದೆ. ಆದರೆ ಕೊರೋನಾ ಕಾರಣದಿಂದಾಗಿ ಆರ್ಥಿಕತೆ ಕುಸಿದಿರುವ ಪರಿಣಾಮ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಎಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಅಂದರೆ ಮೂರು ನಿಮಿಷಗಳ ವಿಡಿಯೋ ಪ್ರದರ್ಶನಕ್ಕಾಗಿ 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. 

ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಟೀಸರ್ ಬುರ್ಜ್ ಖಲೀಫಾದಲ್ಲಿ ಪ್ರದರ್ಶನಗೊಂಡಾಗ ಅವರೊಂದಿಗೆ ಚಿತ್ರತಂಡ, ಪತ್ನಿ ಪ್ರಿಯಾ ಹಾಗೂ ಸಾನ್ವಿ ಜೊತೆಗಿದ್ದರು. ಇದೇ ವೇಳೆ ಸುದೀಪ್ ಸಿನಿಮಾ ರಂಗದಲ್ಲಿ ತಮ್ಮ 25 ವರ್ಷಗಳ ಪಯಣದ ಬಗ್ಗೆ ಗಲ್ಫ್ ಮಾಧ್ಯಮಗಳೊಂದಿಗೆ ಮಾತನಾಡಿರುವುದು ಮತ್ತೊಂದು ವಿಶೇಷವಾಗಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp