ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ರ 'ವಿಕ್ರಾಂತ್ ರೋಣ' ಟೀಸರ್ ಅನಾವರಣ, ಕನ್ನಡದ ಮೊದಲ ಚಿತ್ರ!

ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಅನಾವರಣ ಆಗಿದೆ. ಈ ಮೂಲಕ ಈ ಕಟ್ಟಡದ ಮೇಲೆ ಅನಾವರಣಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ವಿಕ್ರಾಂತ್ ರೋಣ ಭಾಜನವಾಗಿದೆ.

Published: 01st February 2021 02:55 PM  |   Last Updated: 01st February 2021 04:48 PM   |  A+A-


Vikrant Rona

ವಿಕ್ರಾಂತ್ ರೋಣ

Posted By : Vishwanath S
Source : Online Desk

ದುಬೈ: ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಅನಾವರಣ ಆಗಿದೆ. ಈ ಮೂಲಕ ಈ ಕಟ್ಟಡದ ಮೇಲೆ ಅನಾವರಣಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ವಿಕ್ರಾಂತ್ ರೋಣ ಭಾಜನವಾಗಿದೆ. 

ನಟ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು. 

ವಿಕ್ರಾಂತ್ ರೋಣ ಚಿತ್ರವನ್ನು ರಂಗಿತರಂಗಾ ಚಿತ್ರ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. 

ಇಲ್ಲಿಯವರೆಗೂ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಇತರ ದೇಶದ ಧ್ವಜದ ಫೋಟೋಗಳು, ರಾಜಕೀಯ ಮುಖಂಡರ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು.

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp