ಮುಂಬೈ: ಆದಿ ಪುರುಷ್ ಸಿನಿಮಾ ಸೆಟ್ ನಲ್ಲಿ ಬೆಂಕಿ ಆಕಸ್ಮಿಕ; ಅಗ್ನಿ ಶಾಮಕ ಸಿಬ್ಬಂದಿಗೆ ಗಾಯ

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗೋರೆಗಾಂವ್​​ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸ್ಟುಡಿಯೋದಲ್ಲಿ ಪ್ರಭಾಸ್​ ಅಭಿನಯದ ಆದಿ ಪುರುಷ್ ಸಿನಿಮಾದ ಸೆಟ್​ ಹಾಕಲಾಗಿತ್ತು.

Published: 03rd February 2021 08:45 AM  |   Last Updated: 03rd February 2021 12:41 PM   |  A+A-


Adipurush

ಅದಿ ಪುರುಷ್

Posted By : Shilpa D
Source : Online Desk

ಮುಂಬಯಿ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗೋರೆಗಾಂವ್​​ನಲ್ಲಿರುವ ಸ್ಟುಡಿಯೋ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸ್ಟುಡಿಯೋದಲ್ಲಿ ಪ್ರಭಾಸ್​ ಅಭಿನಯದ ಆದಿ ಪುರುಷ್ ಸಿನಿಮಾದ ಸೆಟ್​ ಹಾಕಲಾಗಿತ್ತು.

ಗೋರೆಗಾಂವ್​ನ ಇನಾರ್ಬಿಟ್​ ಮಾಲ್​ ಸಮೀಪ ಈ ಸ್ಟುಡಿಯೋ ಇದೆ. ಬೆಂಕಿಯ ಕೆನ್ನಾಲಿಗೆ ಎಲ್ಲ ಕಡೆಗಳಲ್ಲೂ ಚಾಚಿತ್ತಪ 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದವು. 

ವರದಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಸ್ಟುಡಿಯೋ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಗೋರೆಗಾಂವ್ ಫಿಲ್ಮ್ ಸ್ಟುಡಿಯೋಗಳ ಕೇಂದ್ರವಾಗಿದೆ ಮತ್ತು ಪ್ರಸಿದ್ಧ ಫಿಲ್ಮ್​​ ಸಿಟಿ ಗೋರೆಗಾಂವ್​ನ ಪೂರ್ವದಲ್ಲಿದೆ. ಕಳೆದ ವಾರ ಮಹಾರಾಷ್ಟ್ರದ ಭಿವಾಂಡಿಯ ಎಂಐಡಿಸಿ ಪ್ರದೇಶದ ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

 ನಿರ್ದೇಶಕ ಓಂ ರಾವತ್​ ಮತ್ತು ಮರಾಠಿ ನಟ ಸೂರ್ಯ ಸೆಟ್​ನಲ್ಲಿದ್ದರು. ಘಟನೆ ವೇಳೆ ಯಾರಿಗೂ ತೊಂದರೆ ಉಂಟಾಗಿಲ್ಲ.  ಅದೃಷ್ಟವಶಾತ್​ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಬೆಂಕಿ ನಂದಿಸುವ ಸಮಯದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp