ರಕ್ಷಿತ್ ಶೆಟ್ಟಿ ಜೊತೆ 'ಸಪ್ತಸಾಗರದಾಚೆ ಎಲ್ಲೋ' ಪಯಣ ಬೆಳೆಸಿದ ರುಕ್ಮಿಣಿ ವಸಂತ್!

ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರುಕ್ಷ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Published: 03rd February 2021 11:59 AM  |   Last Updated: 03rd February 2021 01:40 PM   |  A+A-


Rukmini Vasanth

ರುಕ್ಷ್ಮಿಣಿ ವಸಂತ್

Posted By : Shilpa D
Source : The New Indian Express

ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರುಕ್ಷ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ‘ಬೀರಬಲ್‌’ ಚಿತ್ರ ಖ್ಯಾತಿಯ ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.  ಈ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆದಾಗ ನನಗೆ ಬಹಳ ಇಷ್ಟವಾಗಿತ್ತು. ಹಾಗಾಗಿ ನಾನೇ ಸ್ವತಃ ನಿರ್ದೇಶಕರನ್ನು ಸಂಪರ್ಕಿಸಿ ಅವರಿಗೆ ನನ್ನ ಅನುಭವಗಳನ್ನು ಹೇಳಿದ್ದೆ. 

ಅವರು ಒಮ್ಮೆ ಆಡಿಷನ್‌ ಕರೆದು ಲುಕ್‌ ಟೆಸ್ಟ್‌ ಮಾಡಿದರು. ಇಷ್ಟವಾಗಿ ಈಗ ಆಯ್ಕೆ ಮಾಡಿಕೊಂಡಿದ್ದಾರೆ. ನಿಜಕ್ಕೂ ನಾನು ಲಕ್ಕಿ ಎನ್ನಬಹುದು. ಎರಡನೇ ಸಿನಿಮಾಗೆ ಹೇಮಂತ್‌ರಂತಹ ನಿರ್ದೇಶಕರು, ರಕ್ಷಿತ್‌ ಶೆಟ್ಟಿಯಂತಹ ನಾಯಕ ನನಗೆ ಸಿಕ್ಕಿದ್ದಾರೆ. ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನಾನು ಹವ್ಯಾಸಿ ಗಾಯಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇವೆ. 

ಹೇಮಂತ್‌ ಅವರು ಕಥೆ ಬಗ್ಗೆ ಹೇಳಿದಾಗ ಖುಷಿಯಾಗಿ ಒಪ್ಪಿಕೊಂಡೆ. ಒಂದೊಳ್ಳೆ ಲವ್‌ ಸ್ಟೋರಿ ಈ ಸಿನಿಮಾದಲ್ಲಿದೆ'  ಎಂದು ರುಕ್ಷ್ಮಿಣಿ ವಸಂತ್ ಹೇಳಿದ್ದಾರೆ. 'ನಿರ್ದೇಶಕರು ಕಥೆ ಹೇಳಿದಾಗಲೇ ನಾನು ಇಂಪ್ರೆಸ್‌ ಆದೆ. ರಕ್ಷಿತ್‌ ಶೆಟ್ಟಿ ಮತ್ತು ಹೇಮಂತ್‌ ಅವರ ಕಾರ್ಯಕ್ಷಮತೆಯನ್ನು ತಲುಪಲು ನಾನು ಪ್ರಯತ್ನಪಡುತ್ತೇನೆ ಎಂದು ರುಕ್ಷ್ಮಿಣಿವಸಂತ್ ಹೇಳಿದ್ದಾರೆ.

'ರುಕ್ಮಿಣಿ ವಸಂತ್‌ ಅವರು ಆಡಿಷನ್‌ನಲ್ಲಿ ಬಹಳ ಚೆನ್ನಾಗಿ ನಟಿಸಿದರು. ನನಗೆ ಬಹಳ ಇಷ್ಟವಾಯಿತು. ಜತೆಗೆ ನನ್ನ ಸಿನಿಮಾದಲ್ಲಿ ನಾಯಕಿ ಹೇಗಿರಬೇಕು ಎಂದು ಬರೆದುಕೊಂಡಿದ್ನೋ ಅದೇ ರೀತಿ ರುಕ್ಮಿಣಿ ಇದ್ದರು. 

ಇವರೊಂಥರಾ ಕ್ಲಾಸಿಕ್‌ ನಾಯಕ ನಟಿಯ ರೀತಿ ಕಾಣುತ್ತಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಲವ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾ. ನಾಯಕ ಮತ್ತು ನಾಯಕಿ ಇಬ್ಬರ ಪಾತ್ರವೂ ವಿಭಿನ್ನವಾಗಿದೆ' ಎಂದು ಹೇಳುತ್ತಾರೆ ನಿರ್ದೇಶಕ ಹೇಮಂತ್‌ ರಾವ್‌.

ರುಕ್ಮಿಣಿ ಅವರು ಬೀರಬಲ್‌ ನಂತರ ಸಾಕಷ್ಟು ಕಥೆಗಳನ್ನು ಕೇಳಿದ್ದರಂತೆ. ಅದರಲ್ಲಿಒಂದು ಸಿನಿಮಾ ಮಾತ್ರ ಒಪ್ಪಿಕೊಂಡಿದ್ದರು. ಇದು ಎರಡನೇ ಸಿನಿಮಾವಾಗಿದೆ. ಆದರೆ ಮೊದಲು ಒಪ್ಪಿಕೊಂಡ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಫೆಬ್ರವರಿ ಕೊನೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ರ ಜೋಡಿ ಹಿಟ್‌ ಜೋಡಿಯಾಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ, ಅದ್ವೈತ್‌ ಗುರುಮೂರ್ತಿ ಛಾಯಾಗ್ರಾಹಣವಿದೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp