ಮಾರ್ಚ್ 28ಕ್ಕೆ ಕೋಟಿಗೊಬ್ಬ-3 ಗ್ರಾಂಡ್ ಆಡಿಯೋ ರಿಲೀಸ್
ಏಪ್ರಿಲ್ 29 ರಂದು ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಮಾರ್ಚ್ 28 ಕ್ಕೆ ಅದ್ದೂರಿ ಕಾರ್ಯಕ್ರಮದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Published: 03rd February 2021 11:31 AM | Last Updated: 03rd February 2021 11:31 AM | A+A A-

ಸುದೀಪ್
ಏಪ್ರಿಲ್ 29 ರಂದು ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಮಾರ್ಚ್ 28 ಕ್ಕೆ ಅದ್ದೂರಿ ಕಾರ್ಯಕ್ರಮದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೊಂದು ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ಕಲರ್ಸ್ ಟಿವಿ ಚಾನೆಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಸದ್ಯ ಸುದೀಪ್ ವಿಕ್ರಾಂತ್ ರೋಣ ಮತ್ತು ತಮ್ಮ 25 ವರ್ಷದ ಸಿನಿಮಾ ಪ್ರಯಾಣದ ಸಂಭ್ರಮಾಚರಣೆಗಾಗಿ ದುಬೈ ಗೆ ತೆರಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುಬೈನಿಂದ ವಾಪಸ್ ಬಂದ ನಂತರ ಕೋಟಿಗೊಬ್ಬ3 ಸಿನಿಮಾ ಪ್ರಮೋಷನ್ ಮಾಡುವುದಾಗಿ ತಿಳಿಸಿದ್ದಾರೆ. ಸೂರಪ್ಪ ಬಾಬು ಕೋಟಿಗೊಬ್ಬ ಸರಣಿ ಸಿನಿಮಾ ನಿರ್ಮಾಣಮಾಡಿದ್ದಾರೆ. ಶಿವ ಕಾರ್ತಿಕ್ ನಿರ್ದೇಶಿಸಿದ್ದಾರೆ.
ಕೋಟಿಗೊಬ್ಬ ಸಿನಿಮಾದಲ್ಲಿ ಬಾಲಿವುಡ್ ನಟರು ನಟಿಸಿದ್ದಾರೆ. ಮಡೊನಾ ಸೆಬಾಸ್ಟಿಯನ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ, ಶ್ರದ್ದಾ ದಾಸ್, ಅಪ್ತಾಬ್ ಶಿವದಾಸನಿ ಮತ್ತು ರವಿ ಶಂಕರ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಆನಂದ್ ಆಡಿಯೋ ಹಕ್ಕುಗಳನ್ನು ಪಡೆದಿದೆ.