ಥಿಯೇಟರ್ ಗೆ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಒತ್ತಾಯ: ಧನ್ಯವಾದ ಹೇಳಿದ ನಟ ಧ್ರುವ ಸರ್ಜಾ
ಸಿನಿಮಾ ಥಿಯೇಟರ್ ಗಳಲ್ಲಿ ಸಂಪೂರ್ಣ ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ತಾವು ಹಾಕಿದ್ದ ಪೋಸ್ಟ್ ಗೆ ಬಂದ ಅಭೂತ ಪೂರ್ವ ಬೆಂಬಲಕ್ಕೆ ಧನ್ಯವಾದ ಹೇಳುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ.
Published: 04th February 2021 03:15 PM | Last Updated: 04th February 2021 03:15 PM | A+A A-

ನಟ ಧ್ರುವ ಸರ್ಜಾ
ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಸಂಪೂರ್ಣ ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ತಾವು ಹಾಕಿದ್ದ ಪೋಸ್ಟ್ ಗೆ ಬಂದ ಅಭೂತ ಪೂರ್ವ ಬೆಂಬಲಕ್ಕೆ ಧನ್ಯವಾದ ಹೇಳುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ.
ನಿನ್ನೆ ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ನಿಯಮದ ವಿರುದ್ಧ ಕಿಡಿಕಾರಿದ್ದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ, ಮಾರ್ಕೆಟ್ ಗಳಲ್ಲಿ ಜನ ಗಿಜಿಗುಡುತ್ತಿದ್ದಾರೆ. ಸಾವಿರಾರು ಮಂದಿ ಏಕಕಾಲದಲ್ಲಿ ಸಂಚರಿಸುತ್ತಿದ್ದಾರೆ. ಬಸ್ ನಲ್ಲೂ ಜನ ತುಂಬಿ ತುಳುಕುತ್ತಿದ್ದಾರೆ. ಆದರೆ ಇದಾವುದಕ್ಕೂ ಇಲ್ಲದ ನಿರ್ಬಂಧ ಥಿಯೇಟರ್ ಗಳಿಗೆ ಮಾತ್ರ ಏಕೆ ಎಂದು ಪ್ರಶ್ನಿಸಿದ್ದರು.
Let’s stand united Jai Hanuman pic.twitter.com/RVUSSzZHRn
— Dhruva Sarja (@DhruvaSarja) February 4, 2021
ಧ್ರುವ ಸರ್ಜಾ ಅವರ ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ನಟ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯಾತಿಗಣ್ಯರು ಧ್ರುವ ಸರ್ಜಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿ ಸಿನಿಮಾ ಥಿಯೇಟರ್ ಗಳಲ್ಲಿ ಸಂಪೂರ್ಣ ಪ್ರೇಕ್ಷಕರಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದರು.
ಇದೀಗ ಮತ್ತೆ ಧ್ರುವ ಸರ್ಜಾ ತಮಗೆ ಬೆಂಬವ ನೀಡಿದ ಪ್ರತೀಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತಂತೆ ವಿಡಿಯೋ ಅಪ್ಲೋಡ್ ಮಾಡಿರುವ ಧ್ರುವ ಸರ್ಜಾ, ನಿನ್ನೆ ನನ್ನ ಮನಸ್ಸಿನ ಅತಂಕ ವ್ಯಕ್ತಪಡಿಸಿದ್ದೆ. ಆದರೆ ಇದಕ್ಕೆ ಇಷ್ಟರ ಮಟ್ಟಿಗೆ ಬೆಂಬಲ ವ್ಯಕ್ತವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಮನವಿಗೆ ಸ್ಪಂದಿಸಿದ ಕನ್ನಡ ಚಿತ್ರರಂಗದ ನಟರು, ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ರಮುಖವಾಗಿ ಈ ವಿಚಾರದ ಕುರಿತು ಮಾಧ್ಯಮಗಳಿಗೆ ಧನ್ಯವಾದ ಹೇಳುತ್ತೇನೆ. ಕನ್ನಡ ಚಿತ್ರರಂಗ ಬೆಳೆಯುತ್ತಿದ್ದು, ಸಾಕಷ್ಟು ದೊಡ್ಡ ಚಿತ್ರಗಳು ತೆರೆ ಕಾಣುತ್ತಿವೆ. ಎಲ್ಲ ಚಿತ್ರಗಳಿಗೂ ನಿಮ್ಮ ಬೆಂಬಲ ಇರಲಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
We want 100% occupancy for our movie theatres. #KFIDemandsFullOccupancy pic.twitter.com/YTE7IrGZvq
— DrShivaRajkumar (@NimmaShivanna) February 3, 2021
ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರ ಇದೇ ಫೆಬ್ರವರಿ 19ರಂದು ಪೊಗರು ಬಿಡುಗಡೆಯಾಗಲಿದೆ.