
ವಿನಯ್ ರಾಜಕುಮಾರ್ ಹಾಗೂ ನಟಿ ಅದಿತಿ ಪ್ರಭುದೇವ
ಅಂದೊಂದಿತ್ತು ಕಾಲ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಅವರೊಂದಿಗೆ ನಟಿ ಅದಿತಿ ಪ್ರಭುದೇವ ಅವರು ನಟಿಸುತ್ತಿದ್ದಾರೆ.
ಚಿತ್ರವನ್ನು ಕೀರ್ತಿ ನಿರ್ದೇಶಿಸುತ್ತಿದ್ದು, ಇದು ಕೀರ್ತಿಯವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. 90ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ವಾಸ್ತವಿಕತೆಯನ್ನು ತೋರಿಸುವ ಚಿತ್ರವಾಗಿರಲಿದೆ. ಮುಖ್ಯಪಾತ್ರದ ಜೀವನಪಯಣವನ್ನು ದಾಖಲಿಸುತ್ತಾ ಕತೆ ಸಾಗಲಿದ್ದು, ಇದು ಎಲ್ಲಾ ವರ್ಗದ ಜನರೂ ನೋಡುವ ಚಿತ್ರವಾಗಿರಲಿದೆ ಎಂದು ಚಿತ್ರ ತಂಡ ಭರವಸೆ ನೀಡಿದೆ.
ಅನಂತು ವರ್ಸಸ್ ನುಸ್ರತ್ ಸಿನೆಮಾದ ನಂತರ ವಿನಯ್ ರಾಜಕುಮಾರ್ ರ ‘ಟೆನ್’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ನಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಿಲ್ಲ. ಆದ್ದರಿಂದ ಕೊರೋನ ಬಳಿಕ ಒಪ್ಪಿಕೊಂಡಿರುವ ಮೊದಲ ಚಿತ್ರ (ಅಂದೊಂದಿತ್ತು ಕಾಲ) ಇದಾಗಿದೆ.
ಈ ಚಿತ್ರದಲ್ಲಿ ಅತಿಥಿ ನಟರಾಗಿ ದೊಡ್ಡ ಸ್ಟಾರ್ ಒಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.