'ಎಲ್ಲವನ್ನು ಮರೆತು ಥಿಯೇಟರ್ ಗೆ ಬನ್ನಿ ಎಂದು ಹೇಳುವಷ್ಟು ಸ್ವಾರ್ಥಿಯಲ್ಲ; ನನ್ನ ಸಂಭಾವನೆ 2 ಕೋಟಿ ಅಲ್ಲವೇ ಅಲ್ಲ!'

ರಶ್ಮಿಕಾ ಮಂದಣ್ಣ ಸದ್ಯ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ, ಫೆಬ್ರವರಿ 19 ರಂದು ರಶ್ಮಿಕಾ ನಟಿಸಿರುವ ಪೊಗರು ರಿಲೀಸ್ ಆಗುತ್ತಿದೆ.

Published: 09th February 2021 01:15 PM  |   Last Updated: 09th February 2021 04:07 PM   |  A+A-


Rashmika mandanna

ರಶ್ಮಿಕಾ ಮಂದಣ್ಣ

Posted By : Shilpa D
Source : The New Indian Express

ರಶ್ಮಿಕಾ ಮಂದಣ್ಣ ಸದ್ಯ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ, ಫೆಬ್ರವರಿ 19 ರಂದು ರಶ್ಮಿಕಾ ನಟಿಸಿರುವ ಪೊಗರು ರಿಲೀಸ್ ಆಗುತ್ತಿದೆ.

ಇದರ ಜೊತೆಗೆ ಕಾರ್ತಿ ಸುಲ್ತಾನ್ ಜೊತೆಗೆ ತಮಿಳು ಸಿನಿಮಾದಲ್ಲಿ ಹಾಗೂ, ಅಲ್ಲು ಅರ್ಜುನ್ ಜೊತೆ ಪುಷ್ಪಾ, ಸೇರಿದಂತೆ ಬಾಲಿವುಡ್ ಗೂ ರಶ್ಮಿಕಾ ಮಂದಣ್ಣ ಕಾಲಿಡುತ್ತಿದ್ದಾರೆ. ಇದರ ನಡುವೆ ತಮ್ಮ ಪೊಗರು ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನ್ನ ಕೆಲಸಕ್ಕೆ ಯಾವುತ್ತೂ ಭಾಷೆ ಅಡ್ಡಿಯಾಗುತ್ತದೆ ಎಂದು ನಾನು ಭಾವಿಸಿಲ್ಲ,  ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುವುದಕ್ಕೆ ನನಗೆ ಸಂತೋಷವಿದೆ, ದೇಶದ ವಿವಿಧ ಸಿನಿಮಾ ಇಂಡಸ್ಟ್ರಿಗಳಲ್ಲಿ ಗುರುತಿಸಿಕೊಳ್ಳಲು ಇದರಿಂದ ನನಗೆ ಸಹಾಯವಾಗಲಿದೆ.

ಕೊರೋನಾ ನಿಯಮ ಸಡಿಲಿಕೆ ನಂತರ ಮೊದಲ ಬಾರಿಗೆ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ಅದೂ ಶೇ.100 ರಷ್ಚು ಸಿನಿಮಾ ಮಂದಿರ ಭರ್ತಿಗೆ ಸರ್ಕಾರ ಅನುಮತಿ ನೀಡಿದ ನಂತರ ಪೊಗರು ರಿಲೀಸ್ ಆಗುತ್ತಿದೆ. ನಾನು ಎಕ್ಸೈಟ್ ಆಗಿದ್ದೇನೆ, ಅದರ ಜೊತೆಗೆ ವೈರಸ್ ಇನ್ನೂ ಹೋಗಿಲ್ಲ, ಹೀಗಾಗಿ ಇದೊಂದು ಟ್ರಿಕ್ಕಿ ಸನ್ನಿವೇಶ ಎಂಬುದನ್ನು ಮರೆಯಬಾರದು. ಲಸಿಕೆ ಬಂದಿದ್ದರೂ ಎಲ್ಲರೂ ಅದನ್ನು ತೆಗೆದುಕೊಳ್ಳುತ್ತಿಲ್ಲ, ಹೀಗಾಗಿ ಭವಿಷ್ಯ ಹೇಗೆ ಎಂಬುದು ತಿಳಿಯುತ್ತಿಲ್ಲ.

ರಶ್ಮಿಕಾ ಮಂದಣ್ಣ

ಎಲ್ಲವನ್ನೂ ಮರೆತು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಹೇಳುವಷ್ಚು ನಾನು ಸ್ವಾರ್ಥಿಯಲ್ಲ, ನಿಮ್ಮ ಬಗ್ಗೆ ನೀವೇ ಕೇರ್ ತೆಗೆದುಕೊಳ್ಳಬೇಕು. ಜೊತೆಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಥಿಯೇಟರ್ ನಲ್ಲಿ ಶಿಳ್ಳೆ ಹೊಡೆದು, ಡ್ಯಾನ್ಸ್ ಮಾಡಲು ಪೊಗರು ಪರ್ಫೆಕ್ಟ್ ಸಿನಿಮಾ.

ಎರಡು ಭಾಷೆಗಳಲ್ಲಿ ತೆರೆ ರಾಣುತ್ತಿರುವ ಪೊಗರು ಸಿನಿಮಾ ಕೌಟುಂಬಿ ಮನೋರಂಜನಾ ಸಿನಿಮಾವಾಗಿದೆ. ಇದರಲ್ಲಿ ಕೇವಲ ಹೀರೋ ಮತ್ತು ನಾಯಕಿ ಮಾತ್ರವಲ್ಲ, ತಾಯಿ ಸೆಂಟಿಮೆಂಟ್,  ಫೈಟಿಂಗ್,  ಎಲ್ಲಾ ರೀತಿಯಲ್ಲೂ ಸಿನಿಮಾ ಸೊಗಸಾಗಿದೆ.

ನನ್ನ ಪಾತ್ರದ ಬಗ್ಗೆ ನಾನು ಎಷ್ಟು ಹೇಳಬೇಕೋ ಗೊತ್ತಿಲ್ಲ, ನಾನು ಮೂರನೇ ಬಾರಿಗೆ ಗೀತಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಸ್ಟ್ರಿಕ್ಟ್ ಪ್ರೊಫೆಸರ್ ಪಾತ್ರ,  ನಾಯಕನ ಪಾತ್ರ ಇದಕ್ಕೆ ತದ್ವಿರುದ್ದವಾದದ್ದು. ಇದೊಂದು ರೀತಿಯಲ್ಲಿ ಟಾಮ್ ಅಂಡ್ ಜೆರಿ, ಕರಾಬು ಸಾಂಗ್ ಇದಕ್ಕೆ ಉದಾಹರಣೆಯಾಗಿದೆ.

ಧೃವ ಸರ್ಜಾ ಅವರ ಲುಕ್ ನೋಡಿ ನಾನು ಶಾಕ್ ಆಗಿದ್ದೆ ಈ ಮೊದಲು ನಾನು ಅವರನ್ನು ಈ ರೀತಿಯ ಪಾತ್ರಗಳಲ್ಲಿ ನೋಡಿರಲಿಲ್ಲ, ಅವರ ಪಾತ್ರ , ಅವರ ಸಮರ್ಪಣಾ ಬಾವ ಇದರಿಂದ ತೋರುತ್ತದೆ. ನಿರ್ಮಾಪಕರ ತಾಳ್ಮೆಯನ್ನು ಮೆಚ್ಚಬೇಕು, ಏಕೆಂದರೇ 18 ತಿಂಗಳಿಂದ ಅವರು ಕಾಯುತ್ತಲೇ ಬಂದಿದ್ದಾರೆ. ನಿರ್ದೇಶಕ ನಂದ ಕಿಶೋರ್ ಪಾತ್ರವನ್ನು ಅತ್ಯದ್ಭುತವಾಗಿ ಸೃಷ್ಟಿಸಿದ್ದಾರೆ. ಅವರಿಗೆ ಉತ್ತಮ ಜ್ಞಾನವಿದೆ, ಮುಂದಿನ ಸಿನಿಮಾಗೆ ಏನಾದರೂ ಆಫರ್ ನೀಡಿದರೇ ಎರಡನೇ ಯೋಚನೆಯಿಲ್ಲದೇ ಒಪ್ಪಿಕೊಳ್ಳುತ್ತೇನೆ.

ವಿವಾದಗಳು ನನ್ನನ್ನು ತುಂಬಾ ಅಳುವಂತೆ ಮಾಡಿವೆ. ಆದರೆ ಇಂದು ನನ್ನ ಬಗ್ಗೆ ಯಾವುದೇ ವಿವಾದಗಳು ಪ್ರಚಾರವಾಗದಿದ್ದರೆ, ನಾನು ಅವುಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಈಗ ಆ ಹಂತ ತಲುಪಿದ್ದೇನೆ, ಜನರು ನನ್ನ ಬಗ್ಗೆ ಮಾತನಾಡಬೇಕೆಂದು ನಾನು ಬಯಸುತ್ತೇನೆ, ನಾನು ನನ್ನ ತಾಯಿ, ಮತ್ತು ಹಿತೈಷಿಗಳನ್ನು ನನ್ನ ಗುರಾಣಿಯನ್ನಾಗಿ ಮಾಡಿಕೊಂಡಿದ್ದೇನೆ.

ನನ್ನ ಸಂಭಾವನೆ ಬಗ್ಗೆ ಹಲವು ಸುಳ್ಳು ಸುದ್ದಿ ಹರಡಿವೆ. 2 ಕೋಟಿ ನನ್ನ ಸಂಭಾವನೆ ಎಂದು ಹೇಳುತ್ತಿದ್ದಾರೆ. ಅದು ಕನಸಿನ ಮಾತು. ಅದನ್ನು ಕೇವಲ ಬರಹಕ್ಕೆ ಮಾತ್ರ ಸೀಮಿತ, ಪ್ರತಿ ಬಾರಿ ನಾವು ಸಂಭಾವನೆ ಬಗ್ಗೆ ಮಾತನಾಡುವಾಗ, ಇತರ ನಾಯಕಿಯರೊಂದಿಗೆ ಹೋಲಿಸಲು ಪ್ರಾರಂಭಿಸುತ್ತಾರೆ. 

ಯಾವುದೇ ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲು ನಾನು ಒಪ್ಪಿಕೊಂಡಾಗ ನಾನು ನನ್ನ ಮೊದಲ ಚಿತ್ರದಂತೆ ತಿಳಿದುಕೊಳ್ಳುತ್ತೇನೆ, ಹೊಸ ಭಾಷೆಗೆ ನನ್ನ ಹಳೇಯ ಚಿತ್ರಗಳ ಅನುಭವ ಸಾಕಾಗುವುದಿಲ್ಲ ಎಂದು ನನಗೆ ತಿಳಿದಿದೆ. 

ಕಂಟೆಂಟ್ ಆಧಾರಿತ ಸಿನಿಮಾಗಳಿ ನನಗೆ ತುಂಬಾ ಇಷ್ಟ, ನಟಿ ಸೌಂದರ್ಯ ಹಾಗೂ ಶ್ರೀದೇವಿ ಅವರಂತ ತಾರೆಯರ ಜೀವನ ಚರಿತ್ರೆಗಳಲ್ಲಿ ಅಭಿನಯಿಸಲು ನಾನು ಬಯಸುತ್ತೇನೆ, ಇದು ನಿರ್ದೇಶಕರಿಗೆ ಬಿಟ್ಟ ವಿಷಯ, ಬಯೋಪಿಕ್ ನಲ್ಲಿ ನಾನು ನಟಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp