ಪ್ಯಾನ್-ಇಂಡಿಯಾ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಅಭಿಪ್ರಾಯ ಏನು ಗೊತ್ತಾ?

ಇತ್ತೀಚಿಗೆ ದುಬೈನ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ  'ವಿಕ್ರಾಂತ್ ರೋಣ' ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಇಮೇಜ್ ಅನಾವರಣಗೊಂಡದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು. ಆದರೆ, ಇದನ್ನು ತಮ್ಮ ಜೀವನದಲ್ಲಿನ ಅತ್ಯುನ್ನತ ಕ್ಷಣ ಅಂತಾ ಸುದೀಪ್ ಪರಗಣಿಸಿಯೇ ಇಲ್ಲ.

Published: 09th February 2021 03:51 PM  |   Last Updated: 09th February 2021 04:08 PM   |  A+A-


sudeep

ಸುದೀಪ್

Posted By : Nagaraja AB
Source : The New Indian Express

ಬೆಂಗಳೂರು: ಇತ್ತೀಚಿಗೆ ದುಬೈನ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ  'ವಿಕ್ರಾಂತ್ ರೋಣ' ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಇಮೇಜ್ ಅನಾವರಣಗೊಂಡದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು. ಆದರೆ, ಇದನ್ನು ತಮ್ಮ ಜೀವನದಲ್ಲಿನ ಅತ್ಯುನ್ನತ ಕ್ಷಣ ಅಂತಾ ಸುದೀಪ್ ಪರಗಣಿಸಿಯೇ ಇಲ್ಲ.

ಮೇನಕಾ ಥಿಯೇಟರ್ ನಲ್ಲಿ ಹುಚ್ಚ ಸಿನಿಮಾದ ಮಾರ್ನಿಂಗ್ ಶೋ, ತಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅದನ್ನು ಬುರ್ಜ್ ಖಲೀಫಾ ಕಾರ್ಯಕ್ರಮ ಕೂಡಾ ತುಂಬಲ್ಲ ಎನ್ನುತ್ತಾರೆ ಸ್ಯಾಂಡಲ್ ವುಡ್ ನಲ್ಲಿ 25 ವರ್ಷ ಪೂರ್ಣಗೊಳಿಸಿರುವ ಕಿಚ್ಚ ಸುದೀಪ್.

Sudeep
ಸುದೀಪ್

2020 ತನಗೆ ಅತ್ಯುತ್ತಮ ವರ್ಷವಾಗಿತ್ತು. ಕೋವಿಡ್ ಸಂಕಷ್ಟದ ಸಮಯವಾಗಿತ್ತು. ಆದರೆ, ಮನೆಯಲ್ಲಿ ಇರಲು ಅದರಿಂದ ಸಹಾಯವಾಯಿತು. ಮನೆಯಲ್ಲಿದ್ದುಕೊಂಡೇ ವಿಶ್ವ, ಎಲ್ಲಾ ವರ್ಗದ ಜನರ ಹಿನ್ನೆಲೆ ತಿಳಿಯುವಂತಾಯಿತು. ಈ ಅವಧಿಯಲ್ಲಿ ವಿಶ್ವದಾದ್ಯಂತ ಶೇ. 20 ರಷ್ಟು ಜನರ ಜೀವನದಲ್ಲಿ ಬದಲಾವಣೆಯಾಗಿದೆ ಎನ್ನುವ ಸುದೀಪ್,  ಈ ಸಮಯವನ್ನು ಚಿಂತನೆ, ಕಥೆ, ಅಂತಕ್ಷರಿ, ಮಿಮಿಕ್ರಿ ಮಾಡುವುದಕ್ಕೆ ಬಳಸಿಕೊಂಡು, ಕುಟುಂಬದೊಂದಿಗೆ ಹಾಯಾಗಿ ಕಳೆದೆ, ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾಗಿ ತಿಳಿಸಿದರು.

21ನೇ ಶತಮಾನದಲ್ಲಿ ಭಾರತೀಯ ಚಿತ್ರರಂಗದ ಯಶಸ್ವಿ ಸ್ಟಾರ್ ಗಳಲ್ಲಿ ಸುದೀಪ್ ಕೂಡಾ ಒಬ್ಬರಾಗಿದ್ದಾರೆ. ಸುದೀಪ್ ಪ್ರಕಾರ ಪ್ಯಾನ್-ಇಂಡಿಯಾ ಕೇವಲ ಒಂದು ಉದ್ದೇಶವಾಗಿದೆ. ಎಲ್ಲಾ ಕಡೆಗಳಲ್ಲಿ ಕಥೆ ತಲುಪುವಂತಿದ್ದಲ್ಲಿ, ಕೆಲಸದಲ್ಲಿ ವಿಶಿಷ್ಠತೆ ಇದ್ದಲ್ಲಿ ಯಾರೂ ಬೇಕಾದರೂ ಇದನ್ನು ಸಾಧಿಸಬಹುದು. ಪ್ರಸ್ತುತದಲ್ಲಿನ ಪೀಳಿಗೆ ವಿಭಿನ್ನ ರೀತಿಯಲ್ಲಿ ಕಥೆ ಹೇಳುತ್ತಿದ್ದಾರೆ. ಭಿನ್ನ, ವಿಭಿನ್ನ ರೀತಿಯ ಯೋಚನೆಯೊಂದಿಗೆ ಬರುತ್ತಾರೆ. ಅವರು ಕಥೆಯನ್ನು ಎಲ್ಲರಿಗೂ ಹೇಳಿದಾಗ ಕೂಡಲೇ ಪ್ಯಾನ್- ಇಂಡಿಯಾ ಸಿನಿಮಾವಾಗಿ ಅದು ಹೊರಬರುತ್ತದೆ ಎಂದರು.

ಶಾಂತಿ ನಿವಾಸ ಚಿತ್ರ ನಿರ್ದೇಶನ ಮಾಡಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆ ದಿನಗಳಲ್ಲಿ ಇನ್ನೂ  ಕಡಿಮೆ ಹಂತದಲ್ಲಿದೆ. ಇದೀಗ ತಮ್ಮ ಅಭಿಮಾನಿಗಳು ಮುಂದಿನ ನಿರ್ದೇಶನದತ್ತ ಕಾಯುತ್ತಿದ್ದಾರೆ. ಅನೇಕ ನಿರ್ಮಾಪಕರು ತಮ್ಮಗಾಗಿ ಚಿತ್ರ ಮಾಡಿಟ್ಟುಕೊಂಡಿದ್ದಾರೆ. ಅದರ ಬಗ್ಗೆ ತುಂಬಾ ಸಂತೋಷವಾಗುತ್ತಿದೆ. ನಿರ್ದೇಶನ ಮಾಡುತ್ತೀನಿ.ಆದರೆ, ಅದು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ ಎಂದರು.

ಸ್ಪರ್ಶ ಮುನ್ನ ಅವಕಾಶಕ್ಕಾಗಿ ಕಾಯುತ್ತಿದೆ. ಈಗಾ ಚಿತ್ರದಲ್ಲಿ ನನ್ನ ಹೃದಯ ಏನು ಹೇಳುತ್ತದೆಯೇ ಅದನ್ನು ಮಾಡಿದೆ. ಅದು ಈಗ ನನ್ನನ್ನು ಈ ಹಂತಕ್ಕೆ ತಲುಪಿಸಿದೆ ಎಂದು ಹೇಳಿದ ಸುದೀಪ್, ಇದೇ ಉತ್ಸಾಹದಲ್ಲಿ ಮುಂದುವರೆಯುತ್ತೇನೆ. ಇನ್ನೂ ದಾರಿ ಉದ್ದ ಇದ್ದು, ಅದನ್ನು ಉತ್ತಮ ರೀತಿಯಲ್ಲಿ ತೆಗೆದುಕೊಳ್ಳುತ್ತೇನೆ. ಕೆಲವರಿಗೆ ಕಡಿಮೆ ಅವಧಿಯಲ್ಲಿ ಎಲ್ಲಾ ಕಡೆ ತಲುಪುವುದು ಕಷ್ಟ. ತಮ್ಮ 25 ವರ್ಷಗಳ ಹಾದಿಯಲ್ಲಿ ತಮ್ಮ ಕೆಲಸದ ಶೈಲಿನಲ್ಲಿ ಕೆಲವೊಂದನ್ನು ಕಲಿಯಲು ಸಾಧ್ಯವಾಗಿದೆ. ಕೆಲವರು ಪ್ರೋತ್ಸಾಹಿಸಿದರೆ ಚೆನ್ನಾಗಿ ಮಾಡುತ್ತೇನೆ. ಕೆಲವರು ಅಗೌರವ ನೀಡಿದ್ದರೆ, ಇನ್ನೂ ಅತ್ಯುತ್ತಮ ರೀತಿಯಲ್ಲಿ ಮಾಡುತ್ತೇನೆ. ಕೆಲವರು ಪ್ರಚೋದಿಸಿದರೆ, ಆಗ ಇನ್ನೂ ಹೆಚ್ಚಿನದಾಗಿ ಮಾಡುವುದಾಗಿ ಸುದೀಪ್ ತಿಳಿಸಿದರು.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp